ಕರ್ನಾಟಕ

ಎಜುಕೇಶನ್ ಸಿಸ್ಟಮ್ ಸರಿಯಾಗಬೇಕು- ಸೆಲ್ಫಿ ವೀಡಿಯೋ ಮಾಡಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

Pinterest LinkedIn Tumblr

ಹಾಸನ: ಈಗಿನ ಎಜುಕೇಶನ್ ಸಿಸ್ಟಮ್ ನಲ್ಲಿ ಸುಧಾರಣೆ ಆಗಲಿ. ಈಗಿನ ಎಜುಕೇಶನ್ ಸಿಸ್ಟಂ ಇದ್ದು ಇಲ್ಲದಂತಾಗಿದೆ ಎಂದು ಸಿಎಂ ಮತ್ತು ವಿಶ್ವವಿದ್ಯಾಲಯಗಳ ವಿಸಿಗೆ ಸೆಲ್ಫಿ ವೀಡಿಯೋದಲ್ಲಿ ಮನವಿ ಮಾಡಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಹಾಸನದಲ್ಲಿ ನಡೆದಿದೆ.

ಹೇಮಂತ್ ಗೌಡ(20) ಮೃತ ದುರ್ದೈವಿ. ಈತ ಅರಸೀಕೆರೆ ಮೂಲದವನಾಗಿದ್ದಾನೆ. ಹಾಸನ ನಗರದ ಖಾಸಗಿ ಕಾಲೇಜಿನಲ್ಲಿ ಎಂಜಿನಿಯರಿಂಗ್ ಓದುತ್ತಿದ್ದ ಹೇಮಂತ್ ಹಾಸ್ಟೆಲ್‍ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

ಹೇಮಂತ್ ಗೌಡ ಸಾಯುವ ಮುನ್ನ ಸುಮಾರು 13 ನಿಮಿಷ 21 ಸೆಕೆಂಡ್ ಸೆಲ್ಫಿ ವೀಡಿಯೋ ಮಾಡಿದ್ದು ಅದರಲ್ಲಿ ಸಿಎಂ, ವಿಸಿಗಳು, ಎಲ್ಲಾ ಪಕ್ಷದ ದೊಡ್ಡ ದೊಡ್ಡ ಗಣ್ಯಾತಿಗಣ್ಯರು ಈ ಎಜುಕೇಶನ್ ಸಿಸ್ಟಮ್ ಬದಲಾವಣೆಗೆ ಬೆಂಬಲ ಕೊಡಿ. ನ್ಯೂಸ್ ಚಾನಲ್, ಟ್ವಿಟ್ಟರ್, ಫೇಸ್‍ಬುಕ್, ವ್ಯಾಟ್ಸಪ್ ಎಲ್ಲದರಲ್ಲೂ ಈ ವೀಡಿಯೋ ಅಪ್ ಲೋಡ್ ಮಾಡಿ ಎಂದು ಮನವಿ ಮಾಡಿಕೊಂಡು ಆತ್ಮಹತ್ಯೆ ಮಾಡಮಾಡಿಕೊಂಡಿದ್ದಾನೆ‌.

ಮುಖ್ಯ ಮಂತ್ರುಗಳು, ಎಜುಕೇಶನ್ ಮಿನಿಸ್ಟರ್ ಹಾಗೂ ನಿರ್ಮಲಾನಂದನಾಥ ಸ್ವಾಮೀಜಿ ಉಪಸ್ಥಿತಿಯಲ್ಲಿ ನನ್ನ ಅಂತ್ಯಕ್ರಿಯೆ ನಡೆಯಬೇಕು. ಅಪ್ಪ-ಅಮ್ಮ ನಾನು ಬೋಡಿರ್ಂಗ್‍ನಲ್ಲಿ ಇದ್ದಾಗಲೂ ನಿಮ್ಮ ಪ್ರೀತಿಯನ್ನ ಮಿಸ್ ಮಾಡ್ಕಂಡೆ. ಈಗಲೂ ನಿಮ್ಮ ಪ್ರೀತಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ವೀಡಿಯೋದಲ್ಲಿ ಹೇಳಿದ್ದಾನೆ. ಅಷ್ಟೇ ಅಲ್ಲದೆ ತನ್ನ ಗೆಳತಿಗೆ ಥ್ಯಾಂಕ್ಸ್ ಹೇಳಿರುವ ಆತ, ತನ್ನ ಅಂತ್ಯಕ್ರಿಯೆಯಲ್ಲಿ ಮಾಲ್ಗೊಳ್ಳವಂತೆ ಗೆಳತಿಗೆ ಮನವಿ ಮಾಡಿಕೊಂಡಿದ್ದಾನೆ.

Comments are closed.