ಬೆಂಗಳೂರು: ಇಂದು ತೆರೆ ಕಾಣಬೇಕಾಗಿದ್ದ ಕೋಟಿಗೊಬ್ಬ 3 ಸಿನಿಮಾ ಕಾರಣಾಂತರಗಳಿಂದ ಪ್ರದರ್ಶನ ಕಾಣಲಿಲ್ಲ. ಇದೀಗ ನಾಳೆ ಸಿನೆಮಾ ತೆರೆಕಾಣಲಿದೆ ಎಂದು ಚಿತ್ರದ ನಾಯಕ ಸುದೀಪ್ ಅವರೇ ಖುದ್ದು ಘೋಷಣೆ ಮಾಡಿದ್ದಾರೆ.

ಲ್ಯಾಬ್, ವಿತರಕರು ಹಾಗೂ ನಿರ್ಮಾಪಕರ ನಡುವಿನ ಹಣಕಾಸಿನ ಸಮಸ್ಯೆಯಿಂದಾಗಿ ಸಿನಿಮಾ ಪ್ರದರ್ಶನ ಮಾಡಲು ಅಗತ್ಯವಿದ್ದ ಅನುಮತಿ ಸಿಕ್ಕಿಲ್ಲ. ಇದರಿಂದಾಗಿ ಚಿತ್ರತಂಡ ವಿತರಕರನ್ನು ಬದಲಾಯಿಸಿದೆ. ಜೊತೆಗೆ ನಾಳೆ (ಅಕ್ಟೋಬರ್ 15 ) ಬಿಡುಗಡೆಯಾಗುತ್ತಿದೆ.
ಸಿನಿಮಾ ಪ್ರದರ್ಶನ ದಿಡೀರ್ ರದ್ದಾಗಿದ್ದರಿಂದ ಚಿತ್ರಮಂದಿರದವರು ಹಾಗೂ ಸಿನಿಪ್ರಿಯರು ಬೇಸರಗೊಂಡಿದ್ದರು. ಅಲ್ಲಲ್ಲಿ ಅಭಿಮಾನಿಗಳ ಅಸಮಾಧಾನ ಪ್ರತಿಭಟನೆ ಹಂತಕ್ಕೂ ತಲುಪಿತ್ತು. ಅದಕ್ಕಾಗಿಯೇ ಕಿಚ್ಚ ಸುದೀಪ್ ಅವರು ಚಿತ್ರತಂಡದ ಪರವಾಗಿ ಅಭಿಮಾನಿಗಳಲ್ಲಿ ಕ್ಷಮೆ ಯಾಚಿಸಿದ್ದರು.
ಸಿನಿಮಾ ರಿಲೀಸ್ ಮಾಡಲು ನಾನು ಕಾತರನಾಗಿದ್ದೇನೆ. ಆದರೆ, ಈಗ ಆಗಿರುವ ಸಮಸ್ಯೆಯಿಂದಾಗಿ ಚಿತ್ರದ ಪ್ರದರ್ಶನ ರದ್ದಾಗಿದೆ. ಅದಕ್ಕೆ ವಿಷಾದಿಸುತ್ತೇನೆ. ಇನ್ನು ಮುಂದಿನ ರಿಲೀಸ್ ದಿನಾಂಕ ಪ್ರಕಟವಾಗುವರೆಗೆ ತಾಳ್ಮೆ ಇರಲಿ ಎಂದು ಮನವಿ ಮಾಡಿದ್ದ ಕಿಚ್ಚ ಸುದೀಪ್ ಈಗ ಹೊಸ ದಿನಾಂಕದೊಂದಿಗೆ ಪೋಸ್ಟರ್ ರಿಲೀಸ್ ಮಾಡಿದ್ದಾರೆ.
Comments are closed.