ಕರ್ನಾಟಕ

ನಟಿ ವಿಜಯಲಕ್ಷ್ಮಿಗೆ ಮಾತೃ ವಿಯೋಗ: ‘ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ, ಸಹಾಯ ಬೇಕಿದೆ ಎಂದ‌ ನಟಿ

Pinterest LinkedIn Tumblr

ಬೆಂಗಳೂರು: ನಾಗಮಂಡಲ ಖ್ಯಾತಿಯ ವಿಜಯಲಕ್ಷ್ಮಿ ಅವರ ತಾಯಿ ವಿಜಯ ಸುಂದರಂ ಸೆ.27ರಂದು ಕೊನೆ ಉಸಿರೆಳೆದಿದ್ದಾರೆ. ಕಾರವಾರದ ಮನೆ ಒಂದರಲ್ಲಿ ವಾಸವಿದ್ದ ವಿಜಯಲಕ್ಷ್ಮಿ ಮೂರು ದಿನಗಳಿಂದ ಬೆಂಗಳೂರಿನ ಗಾಂಧಿನಗರದಲ್ಲಿರುವ ಸಂತೃಪ್ತಿ ರೆಸಿಡೆನ್ಸಿ ಹೊಟೇಲ್‌ನಲ್ಲಿ ಆಗಮಿಸಿದ್ದರು. ತಾಯಿ ಅವರ ದಿಢೀರ್ ನಿಧನದಿಂದ ವಿಜಯಲಕ್ಷ್ಮಿ ಮತ್ತಷ್ಟು ಚಿಂತೆಗೀಡಾಗಿದ್ದಾರೆ.

ಚೆನ್ನೈಯಲ್ಲಿ ಸಮಸ್ಯೆ ಆಗಿ ಬೆಂಗಳೂರಿಗೆ ಬಂದೆವು, ತಾಯಿ, ಅಕ್ಕನನ್ನು ಕರೆದುಕೊಂಡು ಬೆಂಗಳೂರಿಗೆ ಬಂದೆ. ಬೆಳಗ್ಗೆ 12 ಗಂಟೆಗೆ ಅಮ್ಮನ ನೋಡಿ ಆಘಾತ ಆಯ್ತು. ಕೂಡಲೇ ಹೋಟೆಲ್ ಸಿಬ್ಬಂದಿಯನ್ನು ಕರೆಸಿ ನೋಡಿದಾಗ ಅವರು ಇನ್ನಿಲ್ಲ ಎಂಬ ಸಂಗತಿ ಗೊತ್ತಾಯಿತು. ಕೂಡಲೇ ಬಾ. ಮಾ ಹರೀಶ್ ಅವರಿಗೆ ತಿಳಿಸಿದೆ, ಅವರು ಬಂದು ಸಹಾಯ ಮಾಡ್ತಿದ್ದಾರೆ. ಸಾಕಷ್ಟು ಹೊಡೆತ ತಿಂದಿದ್ದೇನೆ, ನೀವೆಲ್ಲ ಜೊತೆಗೆ ಇದ್ದೀರಾ. ಅನಾಥ ಆಶ್ರಮಕ್ಕೆ ಕರೆದುಕೊಂಡು ಹೋಗಿ ಅಂತ್ಯ ಕ್ರಿಯೆ ನಡೆಸುತ್ತೇವೆ. ನನ್ನ ಅಕ್ಕ ಉಷಾ ಅವರಿಗೆ ಚಿಕಿತ್ಸೆಗೆ ಹಣ ಹೊಂದಿಸಬೇಕಾಗಿದೆ.

ನನ್ನ ಅಕ್ಕನಿಗೆ ಸಾಕಷ್ಟು ಸಮಸ್ಯೆ ಎದುರಾಗಿತ್ತು. ನಾನು ಮಾತನಾಡೋದು ಒರಟು ಅನ್ನಿಸಬಹುದು. ಅಕ್ಕನಿಗೆ ಎಲ್ಲಾ ರೀತಿಯ ಸೇವೆ ನಾನು ಮಾಡುತ್ತಿದ್ದೇನೆ. ಅಮ್ಮ ಬಿಟ್ಟು ಹೋದ ಮೇಲೆ ನಾನು ಬದಲಾಗುತ್ತೇನೆ. ನಾನು ಇನ್ನು ಮುಂದೆ ತಮಿಳುನಾಡಿಗೆ ಹೋಗಲ್ಲ. ಇಲ್ಲೇ ಇರುತ್ತೇನೆ ಇಲ್ಲೇ ಜೀವನ ಸಾಗಿಸುತ್ತೇನೆ. ಅಕ್ಕನ ಸಮಸ್ಯೆಯಿಂದ ಅಮ್ಮ ಮಾನಸಿಕವಾಗಿ ನೊಂದಿದ್ದರು. ನೀವೆಲ್ಲಾ ಇದ್ದೀರಾ ನಾನು ಧೈರ್ಯವಾಗಿ ಇರುತ್ತೇನೆ. ಮಾಧ್ಯಮದವರ ಸಹಾಯ ಬೇಕು. ಎಲ್ಲರ ಸಹಾಯ ಬೇಕು, ಭಿಕ್ಷೆ ಅಂತ ಆದರೂ ಹೇಳಿ ಪರವಾಗಿಲ್ಲ ಎಂದು ನಟಿ ವಿಜಯಲಕ್ಷ್ಮಿ ತಮ್ಮ ನೋವು ತೋಡಿಕೊಂಡಿದ್ದಾರೆ.

 

Comments are closed.