ಕರ್ನಾಟಕ

ಫೋನ್ ಪೇ ಮೂಲಕ ಲಂಚ ಪಡೆದ ಗುಬ್ಬಿ ಠಾಣೆ ಪಿಎಸ್ಐ ಅಮಾನತು

Pinterest LinkedIn Tumblr

ತುಮಕೂರು: ಫೋನ್ ಪೇ ಮೂಲಕ ಲಂಚ ಪಡೆದ ಜಿಲ್ಲೆಯ ಗುಬ್ಬಿ ಟೌನ್ ಠಾಣೆಯ ಪಿಎಸ್ ಐ ಜ್ಞಾನಮೂರ್ತಿಯನ್ನು ಅಮಾನತುಗೊಳಿಸಿ ಎಸ್‍ಪಿ ರಾಹುಲ್ ಕುಮಾರ್ ಶಹಾಪುರ್ ಆದೇಶಿಸಿದ್ದಾರೆ.

ಕಳೆದ ವಾರ ವಿನಾಕಾರಣ ಪಿಎಸ್ಐ ಮ್ಯಾಕ್ಸಿಕ್ಯಾಬ್ ತಡೆದು ಚಾಲಕನಿಗೆ ಕಿರುಕುಳ ನೀಡಿದ ಆರೋಪವನ್ನು ಎದುರಿಸುತ್ತಿದ್ದರು.

ಕ್ಯಾಬ್ ಚಾಲಕನಿಂದ 7 ಸಾವಿರ ರೂ. ಲಂಚವನ್ನು ಫೋನ್ ಪೇ ಮೂಲಕ ಪಿಎಸ್‍ಐ ಪಡೆದುಕೊಂಡಿದ್ದರು ಎನ್ನಲಾಗಿದೆ. ಜೀಪ್ ಚಾಲಕ ಕರಿಯಪ್ಪರ ಮೊಬೈಲ್ ನಂಬರಿಗೆ ಪಿಎಸ್‍ಐ ಲಂಚದ ಹಣವನ್ನು ಫೋನ್ ಪೇ ಮಾಡಿಸಿಕೊಂಡದ್ದರು.

ಪಿಎಸ್‍ಐ ದೌರ್ಜನ್ಯ ಖಂಡಿಸಿ ಚಾಲಕರು ಪ್ರತಿಭಟನೆ ನಡೆಸಿದ್ದು ಈ ಹಿನ್ನೆಲೆಯಲ್ಲಿ ಪಿಎಸ್‍ಐ ಜ್ಞಾನಮೂರ್ತಿಯನ್ನು ಅಮಾನತ್ತು ಮಾಡಿ ತುಮಕೂರು ಎಸ್‍ಪಿ ಆದೇಶಿಸಿದ್ದಾರೆ.

Comments are closed.