ಕರ್ನಾಟಕ

ಜಾರಕಿಹೊಳಿ ವಿರುದ್ಧ ವಕೀಲರ ಮೂಲಕ ದೂರು ಕೊಟ್ಟ ಸಿಡಿ ಲೇಡಿ..!: ನನ್ನನ್ನು ನಂಬಿಸಿ……..?

Pinterest LinkedIn Tumblr

ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣ ಶುಕ್ರವಾರ ಬಿಗ್ ಟ್ವಿಸ್ಟ್ ಪಡೆದಿದೆ. ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ಯುವತಿಯ ಪರವಾಗಿ ವಕೀಲ ಜಗದೀಶ್‌ ದೂರು ನೀಡಿದ್ದು ಕಬ್ಬನ್‌ ಪಾರ್ಕ್‌ ಪೊಲೀಸ್‌ ಠಾಣೆಯಲ್ಲಿ ಮಾಜಿ ಸಚಿವ ರಮೇಶ್‌ ಜಾರಕಿಹೊಳಿ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸರ್ಕಾರಿ ಕೆಲಸ ಕೊಡಿಸುವುದಾಗಿ ಲೈಂಗಿಕ ಸಂಪರ್ಕ ನಡೆಸಿ, ವಿಡಿಯೋ ಕರೆ ಮಾಡಿ ಅಶ್ಲೀಲ ಮಾತುಗಳನ್ನಾಡಿ ನಗ್ನವಾಗಿ ಮಾತನಾಡಲು ಪುಸಲಾಯಿಸಿದ್ದಾರೆ. ಅಲ್ಲದೇ, ಕೆಲಸ ಕೊಡಿಸದೆ ನ್ಯಾಯ ಕೇಳಿದಾಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಸಿಡಿ ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ.

ಸಿಡಿಯಲ್ಲಿದ್ದಾಕೆಯೇ ವಕೀಲರ ಮೂಲಕ‌ ದೂರು ನೀಡಿದ ಹಿನ್ನೆಲೆ ಆಕೆಯ ಲಿಖಿತ ದೂರು ಆಧರಿಸಿ ಕಬ್ಬನ್ ಪಾರ್ಕ್ ಠಾಣೆಯಲ್ಲಿ ಐಪಿಸಿ ಸೆಕ್ಷನ್‌ 376 ಸಿ (ಅತ್ಯಾಚಾರ), 354 ಎ(ಮಹಿಳಾ ದೌರ್ಜನ್ಯ) 506 (ಜೀವ ಬೆದರಿಕೆ) 417(ವಂಚನೆ) ಅಡಿ ಅಲ್ಲದೇ ವಿಡಿಯೋ ಹರಿಬಿಟ್ಟ ಆರೋಪದಡಿ ರಮೇಶ್ ಜಾರಕಿಹೊಳಿ ವಿರುದ್ಧ ಮಾಹಿತಿ ತಂತ್ರಜ್ಞಾನ ಕಾಯ್ದೆಯ (ಐಟಿ) ಸೆಕ್ಷನ್‌ 67ರ ಅಡಿ ಪ್ರಕರಣ ದಾಖಲಾಗಿದೆ.

 

Comments are closed.