ಕರ್ನಾಟಕ

ಬೆಂಗಳೂರಿನ ಮೂವರಲ್ಲಿ ಕೋವಿಡ್‌ ರೂಪಾಂತರ ಸೋಂಕು: ಸಚಿವ ಡಾ. ಕೆ.ಸುಧಾಕರ್

Pinterest LinkedIn Tumblr

ಬೆಂಗಳೂರು: ಕೋವಿಡ್‌ ರೂಪಾಂತರ ಸೋಂಕು ಬೆಂಗಳೂರಿನ ಮೂವರಲ್ಲಿ ಕಂಡು ಬಂದ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಮತ್ತು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ಸ್ಪಷ್ಟಪಡಿಸಿದ್ದಾರೆ.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸುಧಾಕರ್, ಈ ವರದಿ ಕುರಿತು ನಿಮ್ಹಾನ್ಸ್ ವೈದ್ಯರ ಜೊತೆ ಚರ್ಚಿಸಲಾಗುತ್ತಿದೆ. 6 ಜನರನ್ನು ಐಸೋಲೇಟ್ ಮಾಡಿ. ಇವರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಮಾಡಿ ಮುನ್ನೆಚ್ಚರಿಕೆ ಕ್ರಮವಹಿಸಲಾಗಿದೆ. ಇವರ ಸಹ ಪ್ರಯಾಣಿಕರ ವಿವರಗಳನ್ನು ಪಡೆದು ಅವರ ಆಗುಹೋಗುಗಳ ಕುರಿತು ಮಾಹಿತಿ ಕಲೆಹಾಕಲಾಗಿದೆ. ಅವರಿಗೂ ಸಹ ಪರೀಕ್ಷೆಮಾಡುವ ಬಗ್ಗೆ ನಿರ್ಧರಿಸಲಾಗಿದೆ ಎಂದರು.

ತಾಯಿ ಮತ್ತು ಮಗು ಇಬ್ಬರಿಗೆ ಸೋಂಕು ದೃಢಪಟ್ಟಿದ್ದು, ಮೂರನೇ ವ್ಯಕ್ತಿ ಪತ್ತೆ ಮಾಡಲಾಗಿದೆ. ಇವರ ಜೊತೆಗಿರುವವರನ್ನು ಪ್ರತ್ಯೇಕಗೊಳಿಸಲಾಗಿದೆ. ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳದೇ ತಪ್ಪಿಸಿಕೊಂಡವರನ್ನು 48 ಗಂಟೆಯೊಳಗೆ ಗೃಹ ಇಲಾಖೆಯಿಂತ ಪತ್ತೆ ಮಾಡಿ ಆರೋಗ್ಯ ಇಲಾಖೆಯ ಸುಪರ್ದಿಗೆ ನೀಡುವುದಾಗಿ ಗೃಹಸಚಿವರು ಹೇಳಿದ್ದಾರೆ. 48 ಗಂಟೆಯೊಳಗೆ 1614 ಜನರನ್ನು ಪತ್ತೆ ಮಾಡಿದ್ದೇವೆ ಎನ್ನುವುದೇ ತ್ವರಿತ ಕಾರ್ಯಾಚರಣೆಯಾಗಿದೆ ಎಂದು ಅವರು ಹೇಳಿದರು.

ಈಗಾಗಲೇ ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿದೆ. 7 ದಿನಗಳು ಆಸ್ಪತ್ರೆಯಲ್ಲಿ 7 ದಿನ ಮನೆಯಲ್ಲಿ ಎಂದು ಮೊದಲಿತ್ತು. ಈಗ 28 ದಿನ ಆಸ್ಪತ್ರೆಯ ಐಸೋಲೆಷನ್ ಗೊಳಪಡಬೇಕು. ಗೃಹ ಇಲಾಖೆ ಜನರ ಆರೋಗ್ಯದ ಹಿತದೃಷ್ಟಿಯಿಂದ ಬಿಗಿ ಕ್ರಮಕೈಗೊಳ್ಳುತ್ತದೆ ಎಂಬ ವಿಶ್ವಾಸವಿರುವುದಾಗಿ ಹೇಳಿದರು.

Comments are closed.