ಕರ್ನಾಟಕ

ನಾಯಿಗೆ ಮೈ ತೊಳೆಯಲು ಹೋಗಿ ಅಣ್ಣ-ತಂಗಿ ಸಾವು!

Pinterest LinkedIn Tumblr


ಬೆಂಗಳೂರು: ಪ್ರೀತಿಯಿಂದ ಸಾಕಿದ್ದ ನಾಯಿಗೆ ಸ್ನಾನ ಮಾಡಿಸಲೆಂದು ಅಣ್ಣ-ತಂಗಿ ಇಬ್ಬರೂ ಹೋಗಿದ್ದರು. ಅಲ್ಲೇ ಕುಳಿತಿದ್ದ ಜವರಾಯ ಅವರಿಬ್ಬರ ಪ್ರಾಣ ಹೊತ್ತೊಯ್ದಿದ್ದು, ತನ್ನ ಮಾಲೀಕರು ಕಾಣಿಸುತ್ತಿಲ್ಲ ಎಂದು ಆ ಮೂಕಜೀವಿ ರೋಧಿಸುತ್ತಿದ್ದ ದೃಶ್ಯ ಮನಕಲಕುವಂತಿತ್ತು…

ಇಂತಹ ಘಟನೆ ಬೆಟ್ಟ ಹಲಸೂರಿನ ಬಳಿ ಶನಿವಾರ ಸಂಭವಿಸಿದೆ. ಇಲ್ಲಿನ ಕಲ್ಲು ಕ್ವಾರಿಯಲ್ಲಿ ನಿಂತಿದ್ದ ನೀರಿನಲ್ಲಿ ಸಾಕುನಾಯಿಯ ಮೈತೊಳೆಯಲೆಂದು ಪ್ರೇಮ್ ಕುಮಾರ್ ಮತ್ತು ಈತನ ತಂಗಿ ಜೆನ್ನಿಫರ್ ಹೋಗಿದ್ದರು.

ನಾಯಿಗೆ ಸ್ನಾನ ಮಾಡಿಸುತ್ತಿದ್ದ ಜೆನ್ನಿಫರ್​ ನಿಯಂತ್ರಣತಪ್ಪಿ ನೀರಿಗೆ ಬಿದ್ದಳು. ತಂಗಿಯನ್ನು ಕಾಪಾಡಲು ನೀರಿಗೆ ಧುಮುಕಿದ ಪ್ರೇಮ್ ಕುಮಾರ್ ಕೂಡ ವಾಪಸ್​ ಬರಲಿಲ್ಲ. ಇಬ್ಬರೂ ನೀರಲ್ಲಿ ಮುಳುಗಿದ್ದಾರೆ. ವಿಷಯ ತಿಳಿಯುತ್ತಿದ್ದಂತೆ ಚಿಕ್ಕಜಾಲ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹ ಹೊರತೆಗೆಯಲು ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸುತ್ತಿದ್ದು, ಸಂಜೆ 6.30 ಆದರೂ ಸಿಕ್ಕಿರಲಿಲ್ಲ.

Comments are closed.