ಕರ್ನಾಟಕ

ಆತ್ಮಹತ್ಯೆಗೆ ಯತ್ನಿಸಿದ್ದ ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ್ ಆಸ್ಪತ್ರೆಯಿಂದ ಡಿಸ್ಚಾರ್ಜ್: ಆತ್ಮಹತ್ಯೆ ಕುರಿತು ಹೇಳಿದ್ದೇನು…?

Pinterest LinkedIn Tumblr

ಬೆಂಗಳೂರು: ಮುಖ್ಯಮಂತ್ರಿ ಯಡಿಯೂರಪ್ಪನವರ ಹತ್ತಿರದ ಸಂಬಂಧಿ ಮತ್ತು ರಾಜಕೀಯ ಕಾರ್ಯದರ್ಶಿ ಎನ್​.ಆರ್. ಸಂತೋಷ್ ಕೆಲವು ದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿದ್ದು, ಎಮ್.ಎಸ್. ರಾಮಯ್ಯ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮನೆಯಲ್ಲಿ 12 ನಿದ್ರೆ ಮಾತ್ರೆಗಳನ್ನು ಸೇವಿಸಿ ಸಂತೋಷ್ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಘಟನೆ ರಾಜ್ಯಾದ್ಯಂತ ಚರ್ಚೆಯಾಗಿತ್ತು. ಈಗ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈ ವೇಳೆ ಅವರು ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ್ದಾರೆ.

ಮಾತ್ರೆ ನುಂಗಿದ್ದು ಯಾಕೆ ಗೊತ್ತೇ…?
ನನಗೆ ಆವತ್ತು ಅಜೀರ್ಣವಾಗಿತ್ತು, ಹೀಗಾಗಿ ಬೇರೆ ಮಾತ್ರೆ ಸೇವಿಸುವ ಬದಲು ನಿದ್ದೆ ಮಾತ್ರ ಸೇವಿಸಿದೆ ಎಂದು ಹೇಳಿದ್ದಾರೆ.

ಇದೊಂದು ಅಚಾತುರ್ಯದ, ಆಕಸ್ಮಿಕ ಘಟನೆ. ನನಗೆ ಯಾವುದೇ ಒತ್ತಡವಿರಲಿಲ್ಲ. ನಾನು ಆತ್ಮಹತ್ಯೆಗೆ ಯತ್ನಿಸುವಂತಹ ವ್ಯಕ್ತಿಯೂ ಅಲ್ಲ. ಉಪಚುನಾವಣೆಯ ಸೋಲಿನಿಂದ ಡಿಕೆಶಿಗೆ ಮತಿಗೆಟ್ಟಿರಬೇಕು. ಅವರು ಈ ಮೊದಲೂ ಈ ರೀತಿಯ ಹೇಳಿಕೆಗಳನ್ನ ಕೊಟ್ಟಿದ್ದರು. ನನಗೆ ಸ್ವಲ್ಪ ಅಜೀರ್ಣವಾಗಿದ್ದ ಹಿನ್ನೆಲೆ ಮಾತ್ರೆ ನುಂಗಿದ್ದೆ.

ಮಾತ್ರೆ ಬದಲಾಗಿ ನಿದ್ದೆ ಮಾತ್ರೆ ಸೇವಿಸಿಬಿಟ್ಟಿದ್ದೆ. ನನಗೆ ನಿದ್ದೆ ಬರದಿದ್ದಾಗ ನಿದ್ದೆ ಮಾತ್ರೆ ಸೇವಿಸುವ ಅಭ್ಯಾಸವಿದೆ. ಅರ್ಧ ಮಾತ್ರೆ ಸೇವಿಸುತ್ತಿದ್ದೆ, ಮೊನ್ನೆ ಇಡೀ ಮಾತ್ರೆ ಸೇವಿಸಿದ್ದೆ. ಒಂದೆರಡು ದಿನ ವಿಶ್ರಾಂತಿ ಪಡೆದು ಸಿಎಂ ಭೇಟಿಯಾಗುತ್ತೇನೆ ಎಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಬಳಿಕ N.R.ಸಂತೋಷ್ ಹೇಳಿಕೆ ನೀಡಿದ್ದಾರೆ.

Comments are closed.