ಕರ್ನಾಟಕ

ಜ್ಯುವೆಲ್ಲರಿ ಶಾಪ್ ಮೇಲೆ ನಕಲಿ ರೈಡ್ ಮಾಡಿದ ಕಾನ್ಸ್‌ಟೇಬಲ್ ಬಂಧನ!

Pinterest LinkedIn Tumblr


ಬೆಂಗಳೂರು; ನಗತರಪೇಟೆ ಜ್ಯುವೆಲ್ಲರಿ ಶಾಪ್ ರಾಬರಿ ಕೇಸಲ್ಲಿ ಪೊಲೀಸರ ಕೈವಾಡ ಇರುವುದು ಬೆಳಕಿಗೆ ಬಂದಿದೆ. ರಾಬರಿ ಗ್ಯಾಂಗ್ ಜೊತೆಗೂಡಿ ಇಬ್ಬರು ಪೊಲೀಸರು ಸಹ ಸುಲಿಗೆ ಮಾಡಿದ್ದು ಓರ್ವ ಪೊಲೀಸ್ ಕಾನ್ಸ್‌ಟೇಬಲ್ ನನ್ನ ಪೊಲೀಸರು ಬಂಧಿಸಿದ್ದಾರೆ.

ನಗತರಪೇಟೆಯ ಗೀತಾ ಜ್ಯುವೆಲ್ಲರಿ ಶಾಪ್ ಮೇಲೆ ಪೊಲೀಸರ ಹೆಸರಲ್ಲಿ ಗ್ಯಾಂಗ್ ವೊಂದು ದಾಳಿ ನಡೆಸಿತ್ತು. ದಾಳಿ ನಡೆಸಿ ಸುಮಾರು 300 ಗ್ರಾಂ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿತ್ತು. ಈ ಬಗ್ಗೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಜ್ಯುವೆಲ್ಲರಿ ದೋಚಿದ್ದ ಗ್ಯಾಂಗ್ ಬಂಧನಕ್ಕೆ ಬಲೆ ಬೀಸಿದ್ದರು. ಇದೇ ವೇಳೆ ಏಳು ಜನರ ಗ್ಯಾಂಗ್ ಬಂಧಿಸಿದ ಪೊಲೀಸರು ತೀವ್ರ ವಿಚಾರಣೆ ನಡೆಸಿದ್ದರು. ಈ ವೇಳೆ ಇಬ್ಬರು ಪೊಲೀಸ್ ಕಾನ್ಸ್‌ಟೇಬಲ್ ಗಳು ಸಹ ನಕಲಿ ದಾಳಿಯಲ್ಲಿ ಭಾಗಿಯಾಗಿದ್ದರು ಎಂಬುದು ಬೆಳಕಿಗೆ ಬಂದಿದೆ.

ಕಾಡುಗೋಡಿ ಪೊಲೀಸ್ ಠಾಣೆಯ ಆಶೋಕ್ ಮತ್ತು ಚೌಡೇಗೌಡ ಎಂಬುವರು ಖದೀಮರ ಜೊತೆಗೂಡಿ ನಕಲಿ ದಾಳಿ ನಡೆಸಿದ್ದರು ಎಂದು ತನಿಖೆಯಿಂದ ಬೆಳಕಿಗೆ ಬಂದಿದ್ದು ಹಲಸೂರು ಗೇಟ್ ಪೊಲೀಸರು ಆಶೋಕ್ ಎಂಬಾತನ ಬಂಧಿಸಿದ್ದಾರೆ. ಮತ್ತೊಬ್ಬ ಕಾನ್ಸ್‌ಟೇಬಲ್ ಚೌಡೇಗೌಡ ಎಸ್ಕೇಪ್ ಅಗಿದ್ದು, ಆತನ ಬಂಧನಕ್ಕೆ ಶೋಧ ನಡೆಸಿದ್ದಾರೆ. ಹಾಗೂ ಸೂರಜ್ ಯಾದವ್, ಶೇಖ್ ಮೊಹಮದ್, ಸಂದೀಪ್, ಆಶೋಕ್, ಸೈಯದ್ ಫೈರೋಜ್ ಮತ್ತು ನದೀಮ್ ಎಂಬುವರನ್ನ ಬಂಧಿಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ.

ಇನ್ನೂ ಈ ರಾಬರಿ ಪ್ಲಾನ್ ಮಾಡಿದ್ದು ಬಿಲ್ಡಿಂಗ್ ಮಾಲೀಕ ಜೀತು ಮಗ ಸೂರಜ್ ಎನ್ನಲಾಗಿದೆ. ಲೈಸನ್ಸ್ ಇಲ್ಲದೆ ನಡೆಸುತ್ತಿದ್ದ ಉದ್ಯಮವನ್ನ ಬಂಡವಾಳ ಮಾಡಿಕೊಂಡಿದ್ದ ಆಸಾಮಿಗಳು ಕಾರ್ತಿಕ್ ಅಂಗಡಿಯಲ್ಲಿ ದರೋಡೆ ಮಾಡಿದರೆ ದೂರು ನೀಡಲ್ಲ ಎಂದು ಭಾವಿಸಿ ದರೋಡೆ ಮಾಡಿದ್ರಂತೆ.

ಇನ್ನೂ ನಕಲಿ ದಾಳಿಯ ಸುಳಿವು ಕೊಟ್ಟಿದ್ದು ಕಾರು ಎನ್ನಲಾಗಿದೆ. ದರೋಡೆಗೆ ಕಾರು ಜ್ಯುವೆಲ್ಲರಿ ಬಳಿ ಬಂದಾಗ ಕೆಲಸಗಾರನೊಬ್ಬ ಕಾರಿನ ನಂಬರ್ ಜ್ಞಾಪಕ ಇಟ್ಟುಕೊಂಡಿದ್ದನಂತೆ. ಆ ನಂಬರ್ ಮೂಲಕ ಕಾರು ಪತ್ತೆ ಮಾಡಿದ ಪೊಲೀಸರು ದರೋಡೆ ಗ್ಯಾಂಗ್ ಬಲೆಗೆ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಹಲಸೂರು ಗೇಟ್ ಪೊಲೀಸರು ಪ್ರಕರಣದ ಬಗ್ಗೆ ತೀವ್ರ ತನಿಖೆ ಕೈಗೊಂಡಿದ್ದು ಪರಾರಿಯಾಗಿರೋ ಮತ್ತೊಬ್ಬ ಕಾನ್ಸ್‌ಟೇಬಲ್ ಗೆ ಬಲೆ ಬೀಸಿದ್ದಾರೆ.

Comments are closed.