ರಾಷ್ಟ್ರೀಯ

ದಪ್ಪ ಇರುವವರು ಎಚ್ಚರವಹಿಸಬೇಕು ಯಾಕೆ ಗೊತ್ತಾ?

Pinterest LinkedIn Tumblr

ನೀವು ದಪ್ಪ ಇದ್ದರೆ ಈ ವಿಷಯದಲ್ಲಿ ತುಂಬಾ ಎಚ್ಚರ ವಹಿಸಿ. ಮಾಸ್ಕ ಧರಿಸಿ, ಸಾಮಾಜಿಕ ಅಂತರ ಕಾಪಾಡಿಕೊಳ್ಳಿ.. ಹೌದು ದಪ್ಪ ಇರುವವರಿಗೆ ಕೊರೋನಾ ಬಲು ಬೇಗ ಅಟ್ಯಾಕ್ ಆಗುತ್ತೆ ಅಂತ ಸಂಶೋಧನೆ ತಿಳಿಸಿದೆ.

ಒಬೆಸಿಟಿ‌ ಸಮಸ್ಯೆ ಇರೋವ್ರು ಹುಷಾರ್ ಆಗಿದ್ರೆ ಒಳ್ಳೆದು. ದಪ್ಪ ಇರೋವ್ರಿಗೆ ಬೇಗ‌ ಅಟ್ಯಾಕ್ ಆಗತ್ತೆ ಕೊರೋನಾ ಸೋಂಕು ಅಂತ ಅಮೇರಿಕಾ ನಡೆಸಿರುವ ಅಧ್ಯಯನದಿಂದ ತಿಳಿದುಬಂದಿದೆ. ದಪ್ಪ ಇರೋದ್ರಿಂದ ಲಂಗ್ಸ್ ಎಕ್ಸ್ಪೆಂಡ್ ಆಗೋದಿಲ್ಲ. ಹೀಗಾಗಿ‌ ಕೊರೋನಾ ಲಂಗ್ಸ್‌ಗೆ ಅಟ್ಯಾಕ್ ಮಾಡೋದ್ರಿಂದ ದಪ್ಪ ಇರೋವ್ರಲ್ಲಿ ಡೆತ್ ರೇಟ್ ಹೆಚ್ಚು ಅಂತ ಈ ಸಂಶೋಧನೆ ನಡೆಸಿದ ವಿಜ್ನಾನಿಗಳು ತಿಳಿಸಿದ್ದಾರೆ. ಅಮೇರಿಕಾದಲ್ಲಿ ನಡೆಸಿರುವ ಅಧ್ಯಯನದಿಂದ ಹೊರ‌ಬಿತ್ತು ಭಯಾನಕಾರಿ ವಿಚಾರ. ದಪ್ಪಗಿರೋವ್ರೆ ಹೆಚ್ಚು ಸಾವಿಗೀಡಾಗ್ತಿದ್ದಾರೆ. 80 ಕ್ಕಿಂತ ಹೆಚ್ಚು ತೂಕ ಇರೋವ್ರನ್ನ ಕೊರೋನಾ ಹೆಚ್ಚು ಭಾದಿಸುತ್ತಿದೆ ಅಂತ ತಿಳಿದುಬಂದಿದೆ. ಕೋವಿಡ್ ಟಾಸ್ಕ್‌ಫೋರ್ಸ್ ಸದಸ್ಯ ಡಾ.ಸಿ.ಎನ್. ಮಂಜುನಾಥ್ ಮಾಹಿತಿಯನ್ನು ಬಹಿರಂಗ ಪಡಿಸಿದ್ದಾರೆ. ಒಬೆಸಿಟಿ ಇರೋವ್ರಲ್ಲಿ ಕೊರೋನಾ ಪರಿಣಾಮ ಹೆಚ್ಚಿರುತ್ತದೆ. ಇದಕ್ಕೆ ಯಾವುದೇ ವಯಸ್ಸಿನ ಮಿತಿಯಿಲ್ಲ. ಆದ್ದರಿಂದ ದಪ್ಪಗಿರುವವರು ಎಚ್ಚರ ವಹಿಸಿ.

Comments are closed.