ರಾಷ್ಟ್ರೀಯ

ದೇವಸ್ಥಾನದಲ್ಲಿ ಚುಂಬನ ದೃಶ್ಯ ಚಿತ್ರೀಕರಣ: ತನಿಖೆಗೆ ಆದೇಶ

Pinterest LinkedIn Tumblr


ಭೋಪಾಲ್: ನೆಟ್ ಫ್ಲಿಕ್ಸ್ ನಲ್ಲಿ ಪ್ರಕಟವಾಗುತ್ತಿರುವ ಎ ಸೂಟಬಲ್ ಬಾಯ್ ಎಂಬ ವೆಬ್ ಸೀರೀಸ್ ನಲ್ಲಿ ಚುಂಬನದ ದೃಶ್ಯಗಳನ್ನು ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಮಧ್ಯಪ್ರದೇಶ ಸರ್ಕಾರ ಈ ಕುರಿತು ತನಿಖೆಗೆ ಆದೇಶಿಸಿದೆ.

ವೆಬ್ ಸೀರೀಸ್ ನಲ್ಲಿರುವ ದೃಶ್ಯಗಳನ್ನು ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆಯೇ ಹಾಗೂ ಧಾರ್ಮಿಕ ನಂಬಿಕೆಗಳಿಗೆ ಧಕ್ಕೆ ಉಂಟು ಮಾಡಿದೆಯೇ ಎಂಬ ಬಗ್ಗೆ ತನಿಖೆಗೆ ಆದೇಶಿಸಲಾಗಿದೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಹೇಳಿದ್ದಾರೆ.

ವೆಬ್ ಸೀರೀಸ್ ನ ವಿರುದ್ಧ ಕಾನೂನು ಕ್ರಮ ಜರುಗಿಸುವ ಮುನ್ಸೂಚನೆಯನ್ನೂ ಸಹ ನರೋತ್ತಮ್ ಮಿಶ್ರಾ ನೀಡಿದ್ದಾರೆ.

ವೆಬ್ ಸೀರೀಸ್ ನಲ್ಲಿ ಪ್ರಕಟವಾಗಿರುವ ಚುಂಬನ ದೃಶ್ಯವನ್ನು ಮಧ್ಯಪ್ರದೇಶದ ಮಹೇಶ್ವರ್ ಟೌನ್ ನ ದೇವಾಲಯದಲ್ಲಿ ಚಿತ್ರೀಕರಿಸಲಾಗಿದೆ ಎಂದು ಬಿಜೆಪಿ ಯುವಮೋರ್ಚಾದ ಪದಾಧಿಕಾರಿಗಳು ಆರೋಪಿಸಿದ್ದರು. ಎ ಸೂಟಬಲ್ ಬಾಯ್ ಎಂಬ ವೆಬ್ ಸೀರೀಸ್ ನಲ್ಲಿ ದೇವಾಲಯದಲ್ಲಿ ಭಜನೆಗಳ ನಡುವೆಯೇ ಜೋಡಿಯೊಂದು ಚುಂಬಿಸುತ್ತಿದ್ದ ದೃಶ್ಯ ಪ್ರಸಾರವಾಗಿತ್ತು.

Comments are closed.