
ಮೈಸೂರು: ಹತ್ತು ದಿನಗಳ ಹಿಂದೆ ಮೈಸೂರಿನಲ್ಲಿ ಅರೆಬೆಂದ ಸ್ಥಿತಿಯಲ್ಲಿ ಪತ್ತೆಯಾಗಿದ್ದ ಯವತಿ ಕೊಲೆ ಪ್ರರಕಣ ಭೇದಿಸುವಲ್ಲಿ ಮೈಸೂರಿನ ಪೊಲೀಸರು ಯಶಸ್ವಿಯಾಗಿದ್ದಾರೆ.
ಯುವತಿಯನ್ನು ಅತ್ಯಾಚಾರ ಮಾಡಿ ಸುಟ್ಟು ಹಾಕಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪಿರಿಯಾಪಟ್ಟಣ ಪೊಲೀಸರು ಯಶಸ್ವಿಯಾಗಿದ್ದಾರೆ. ಕೊಲೆ ಘಟನೆ ಭೇದಿಸಲು ಆಕೆಯ ಕಾಲಿನ ಗಜ್ಜೆಗಳು ಹಾಗೂ ಮೊಬೈಲ್ ಟವರ್ ಸಿಗ್ನಲ್ ಸಹಕಾರಿಯಾಗಿದೆ. ಒಂದು ಕಾಲದಲ್ಲಿ ಪ್ರೀತಿಸಿದ್ದವನೇ ಮದುವೆ ನಿರಾಕರಿಸಿ ಈ ಕೃತ್ಯ ಎಸಗಿರೋದು ಕುಟುಂಬಸ್ಥರಲ್ಲಿ ಕಣ್ಣೀರು ತಂದಿದೆ.
ಅಂದು ನವೆಂಬರ್ 8 ಭಾನುವಾರ ಮುಂಜಾನೆ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ತಾಲೂಕಿನ ಜನರು ಬೆಚ್ಚಿ ಬಿದ್ದಿದ್ದಿದ್ದರು. ಪಿರಿಯಾಪಟ್ಟಣ ತಾಲೂಕು ಕೆಲ್ಲೂರು ಗ್ರಾಮದ ಹೊರ ವಲಯದಲ್ಲಿ ಸುಮಾರು 18 ವರ್ಷ ಪ್ರಾಯದ ಯುವತಿ ಶವ ಬೆಂಕಿಯಲ್ಲಿ ಬೇಯುತ್ತಿತ್ತು. ಮುಖ ಸೇರಿದಂತೆ ದೇಹದ ಮೇಲರ್ಧ ಭಾಗ ಸುಟ್ಟಿದ್ದರಿಂದ ಯುವತಿಯ ಗುರುತು ಪತ್ತೆಯಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದ ಪಿರಿಯಾಪಟ್ಟಣ ಪೊಲೀಸರು ಕೂಡ ಶವದ ವಾರಸುದಾರರಿಗಾಗಿ ತನಿಖೆ ಮುಂದುವರೆಸಿದ್ದರು. ಆದರೆ ಈಗ 9 ದಿನಗಳ ನಂತರ ಇಡೀ ಘಟನೆಯ ಇಂಚಿಂಚು ಅಂಶ ಬಯಲಾಗಿದೆ. ಪ್ರಿಯಕರನೇ ಯುವತಿಯನ್ನು ಅತ್ಯಾಚಾರ ಮಾಡಿ ಕೊಂದು ಸುಟ್ಟಿದ್ದು, ಆರೋಪಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.
ಪಿರಿಯಾಪಟ್ಟಣದ ಕೆಲ್ಲೂರು ಬಳಿ ಸುಟ್ಟು ಕರಕಲಾದ ಯುವತಿಯನ್ನು ನಂಜನಗೂಡು ತಾಲೂಕು ಹುಲ್ಲಹಳ್ಳಿ ಗ್ರಾಮದ ಭಾಗ್ಯ (18) ಎಂದು ಗುರುತಿಸಲಾಗಿದೆ. ನವೆಂಬರ್ 8 ರಂದು ಪಿರಿಯಾಪಟ್ಟಣ ತಾಲೂಕಿನ ಕೆಲ್ಲೂರು ರಸ್ತೆ ಬದಿ ಉರಿಯುತ್ತಿದ್ದ ಸ್ಥಿತಿಯಲ್ಲಿ ಭಾಗ್ಯ ಶವ ಪತ್ತೆಯಾಗಿತ್ತು. ಇದೇ ನಂಜನಗೂಡು ತಾಲ್ಲೂಕಿನ ಕರಳಪುರ ಗ್ರಾಮದ ಸಿದ್ದರಾಜು ಆಕೆಯನ್ನು ಅತ್ಯಾಚಾರ ಮಾಡಿ ಕೊಂದು ಸುಟ್ಟು ಹಾಕಿರುವ ಸಂಗತಿ ಈಗ ಬಯಲಾಗಿದೆ.
ಆರೋಪಿ ಸಿದ್ದರಾಜು ಹಾಗೂ ಭಾಗ್ಯ 4-5 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಇತ್ತೀಚೆಗೆ ಸಿದ್ದರಾಜು ಭಾಗ್ಯಳನ್ನು ಬಿಟ್ಟು ಬೇರೆ ಹೆಣ್ಣಿನ ಕಡೆ ಮನಸ್ಸು ಮಾಡಿದ್ದ. ಆದರೆ ಭಾಗ್ಯ ಮಾತ್ರ ತನ್ನನ್ನು ಮದುವೆ ಆಗುವಂತೆ ಸಿದ್ದರಾಜುಗೆ ಒತ್ತಡ ಹೇರಿದ್ದಳಂತೆ. ಮದುವೆಗೆ ಒತ್ತಡ ಏರುತ್ತಿದ್ದ ಭಾಗ್ಯಳನ್ನ ಕರೆದೊಯ್ದು ಅತ್ಯಾಚಾರ ಮಾಡಿ ಕೊಲೆ ಮಾಡಿದ್ದಾನೆ. 9 ದಿನಗಳಿಂದ ತಲೆ ಮರಿಸಿಕೊಂಡಿದ್ದ ಆರೋಪಿ ಸಿದ್ದರಾಜು ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.
ಭಾಗ್ಯಳನ್ನು ಕೊಲೆಮಾಡಿ ಬೆಂಕಿ ಹಚ್ಚಿ ಪರಾರಿಯಾದ ಸಿದ್ದರಾಜುಗೆ ಸ್ನೇಹಿತ ಚಾಮಲಾಪುರ ಹುಂಡಿಯ ಪ್ರಸನ್ನ ಕುಮಾರ್ ಸಹಾಯ ಮಾಡಿದ್ದಾನೆ. ವಕೀಲರೊಬ್ಬರ ಕಚೇರಿಯಲ್ಲಿ ಟೈಪಿಸ್ಟ್ ಆಗಿದ್ದ ಭಾಗ್ಯಳನ್ನು ಸಂಚು ರೂಪಿಸಿ ಕೊಲೆ ಮಾಡಲಾಗಿದೆ. ನವೆಂವರ್ 7 ರಂದು ಮಧ್ಯಾಹ್ನ ಭಾಗ್ಯಳನ್ನ ತನ್ನ ಕಾರಿನಲ್ಲಿ ಸಿದ್ದರಾಜು ಕರೆದೊಯ್ದಿದ್ದಾನೆ. ಆ ವೇಳೆ ಸಿದ್ದರಾಜು ಹಾಗೂ ಭಾಗ್ಯ ಜೊತೆ ಪ್ರಸನ್ನ ಕೂಡ ತೆರಳಿದ್ದ. ಅಂದು ರಾತ್ರಿ ಭಾಗ್ಯಳನ್ನು ಕೊಂದು ಕೆಲ್ಲೂರು ಬಳಿ ಸುಟ್ಟ ನಂತರ ತಾನು ಧರ್ಮಸ್ಥಳಕ್ಕೆ ತೆರಳಿದ್ದಾನೆ.
ಸೋಮವಾರ ಭಾಗ್ಯ ತಂದೆ ಮಹದೇವಶೆಟ್ಟಿ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ಮಗಳ ಮಿಸ್ಸಿಂಗ್ ಕಂಪ್ಲೇಂಟ್ ದಾಖಲು ಮಾಡಿದ್ದರು. ಜೊತೆಗೆ ಆರೋಪಿ ಸಿದ್ದರಾಜುವನ್ನು ಮನೆಗೆ ಕರೆದು ವಿಚಾರಿಸಿದ್ದಾರೆ. ಸಿದ್ದರಾಜು ಮಾತ್ರ ತನಗೆ ಏನೂ ಗೊತ್ತಿಲ್ಲ ಅಂತ ಕಥೆ ಹೇಳಿದ್ದ. ಇತ್ತ ಭಾಗ್ಯಳ ಮೊಬೈಲ್ ಟವರ್ ಟ್ರೇಸ್ ಮಾಡಿದ ಪೊಲೀಸರು ಸಿದ್ದರಾಜು ಸುತ್ತಲೇ ತನಿಖೆ ಚುರುಕು ಮಾಡಿದ್ದರು. ಪೋಷಕರು ಕೂಡ ಭಾಗ್ಯ ಧರಿಸಿದ್ದ ಗೆಜ್ಜೆಯಿಂದ ಮಗಳ ಗುರುತು ಪತ್ತೆ ಮಾಡಿದ್ದರು. ಕಡೆಗೆ ಆರೋಪಿ ಅಂದರ್ ಆಗಿದ್ದು ಸ್ನೇಹಿತ ಪ್ರಸನ್ನ ಕುಮಾರ್ಗಾಗಿ ಶೋಧ ಮುಂದುವರೆದಿದೆ.
Comments are closed.