ಕರ್ನಾಟಕ

ದೀಪಾವಳಿ ಮುಗಿಯುತ್ತಿದ್ದಂತೆ ಅಲ್ಪ ಇಳಿಕೆ ಕಂಡ ಚಿನ್ನದ ದರ

Pinterest LinkedIn Tumblr

ಬೆಂಗಳೂರು: ಕೊರೊನಾ ಸಂಕಷ್ಟದ ನಡುವೆ ಸುರಕ್ಷಿತ ಹೂಡಿಕೆ ಎಂಬ ಕಾರಣಕ್ಕೆ ಗಣನೀಯ ಪ್ರಮಾಣದಲ್ಲಿಏರಿಕೆ ಕಂಡಿದ್ದ ಚಿನ್ನ ಕಳೆದ ಕೆಲ ದಿನಗಳಿಂದ ಹಾವು ಏಣಿಯಾಟದಲ್ಲಿ ತೊಡಗಿದೆ. ದೀಪಾವಳಿ ಹಬ್ಬ ಮುಗಿಯುತ್ತಿದ್ದಂತೆ ಚಿನ್ನದ ದರ ಅಲ್ಪ ಇಳಿಕೆ ಕಂಡಿದೆ.

ದೀಪಾವಳಿ ಹಬ್ಬದ ಸಮಯದಲ್ಲಿ ಜನರು ಚಿನ್ನದ ಖರೀದಿಗೆ ಮುಂದಾಗಿದ್ದು, ಚಿನ್ನದ ದರದಲ್ಲಿ ಏರಿಳಿತ ಕಾಣುತ್ತಿದೆ. ಕಳೆದ ವಾರ ಚಿನ್ನದ ದರ ಒಂದೇ ದಿನ ಭಾರೀ ಇಳಿಕೆ ಕಂಡಿತ್ತು. ನಂತರ ನಾಲ್ಕು ದಿನ ಏರಿಕೆ ಕಂಡಿತ್ತು. ಆದಾಗ್ಯೂ ಕಳೆದ ವಾರ ಚಿನ್ನದ ದರ 770 ರೂಪಾಯಿ ಇಳಿಕೆ ಕಂಡಂತಾಗಿದೆ.

ಸೋಮವಾರ ಚಿನ್ನದ ದರ ಅಲ್ಪ ಇಳಿಕೆ ಕಂಡಿದೆ. ಆಭರಣ ಚಿನ್ನ 10 ಗ್ರಾಂಗೆ 10 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಚಿನ್ನದ ದರ 47,700 ರೂಪಾಯಿ ಆಗಿದೆ. ಇನ್ನು ಶುದ್ಧ ಚಿನ್ನ 20 ರೂಪಾಯಿ ಇಳಿಕೆ ಕಂಡಿದ್ದು, ಈ ಮೂಲಕ 52,030 ರೂಪಾಯಿ ಆಗಿದೆ.

ಬೆಳ್ಳಿ ದರದ ವಿಚಾರಕ್ಕೆ ಬರುವುದಾದರೆ ಕಳೆದವಾರ ಕೆಜಿ ಬೆಳ್ಳಿ 1,820 ರೂಪಾಯಿ ಇಳಿಕೆ ಕಂಡಿತ್ತು. ಸೋಮವಾರ ಬೆಳ್ಳಿ ಬೆಲೆ 10 ರೂಪಾಯಿ ಏರಿಕೆ ಕಂಡಿದ್ದು ಈ ಮೂಲಕ ಕೆಜಿ ಬೆಳ್ಳಿಗೆ 63,310 ರೂಪಾಯಿ ಆಗಿದೆ.

ಅನೇಕ ವಿಚಾರಗಳು ಚಿನ್ನದ ಬೆಲೆಯನ್ನು ನಿರ್ಧರಿಸುತ್ತವೆ. ಹಣ ದುಬ್ಬರ, ಅಂತಾರಾಷ್ಟ್ರೀಯ ಮಾರುಕಟ್ಟೆ ಬೆಲೆ, ಬಡ್ಡಿ ದರ, ಜ್ಯುವೆಲರಿ ಮಾರುಕಟ್ಟೆ ಮತ್ತು ವ್ಯಾಪಾರ ಯುದ್ಧಗಳು ಚಿನ್ನದ ಬೆಲೆ ಏರಿಳಿತಕ್ಕೆ ನೇರ ಕಾರಣವಾಗುತ್ತವೆ. ಸದ್ಯ ಕೊರೋನಾ ವೈರಸ್​ ಇರುವುದರಿಂದ ಜನರಿಗೆ ಬೇರೆಲ್ಲೂ ಹೂಡಿಕೆ ಮಾಡಲು ಕ್ಷೇತ್ರಗಳು ಸಿಗುತ್ತಿಲ್ಲ. ಹೀಗಾಗಿ, ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದಾರೆ. ಇದರಿಂದ ಸಹಜವಾಗಿಯೇ ಚಿನ್ನದ ದರದಲ್ಲಿ ಏರಿಕೆ ಕಂಡಿತ್ತು.

ವಿಶ್ವದ ಆರ್ಥಿಕತೆ ತಲೆಕೆಳೆಗಾಗಿದೆ. ಹೀಗಾಗಿ ಯಾವ ಮಾರುಕಟ್ಟೆಯ ಮೇಲೂ ಖಚಿತವಾಗಿ ಏನನ್ನೂ ಹೇಳಲೂ ಸಾಧ್ಯವಾಗುತ್ತಿಲ್ಲ. ಹೀಗಾಗಿ ಮುಂದಿನ ದಿನಗಳಲ್ಲಿ ಚಿನ್ನದ ದರ ಏರಿಕೆ ಆಗಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ.

Comments are closed.