ಕರ್ನಾಟಕ

ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೆರವು ನೀಡಲು ಯುಎಇಗೆ ತೆರಳುತ್ತಿದ್ದ ವೇಳೆ ಏರ್ಪೋರ್ಟಿನಲ್ಲಿ ಬಿ.ಆರ್. ಶೆಟ್ಟಿಯನ್ನು ತಡೆದ ಅಧಿಕಾರಿಗಳು

Pinterest LinkedIn Tumblr

ಬೆಂಗಳೂರು, ನ.15; ತಮ್ಮ ಕಂಪೆನಿಗಳ ಬಗ್ಗೆ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ನೆರವು ನೀಡುವುದಕ್ಕಾಗಿ 8 ತಿಂಗಳ ನಂತರ ಯುಎಇಗೆ ತೆರಳಲು ಹೊರಟಿದ್ದ ಎನ್‌ ಎಂ ಸಿ ಹೆಲ್ತ್ ಮತ್ತು ಫಿನಬ್ಲರ್ ಕಂಪೆನಿಗಳ ಮಾಲೀಕ ಬಿ.ಆರ್. ಶೆಟ್ಟಿ ಅವರಿಗೆ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಲಸೆ ಅಧಿಕಾರಿಗಳು ಶನಿವಾರ ಬೆಳಗ್ಗೆ ತಡೆ ಒಡ್ಡಿದ್ದಾರೆ.

ಬಿ.ಆರ್. ಶೆಟ್ಟಿ ಅವರು ಇತ್ತಿಹಾದ್ ವಿಮಾನದಲ್ಲಿ ಯುಎಇಗೆ ತೆರಳಲು ಮುಂದಾಗಿದ್ದಾಗ ಈ ಘಟನೆ ನಡೆದಿದೆ.

ಬಿ.ಆರ್. ಶೆಟ್ಟಿ ಮತ್ತು ಅವರ ಕಂಪನಿಗಳು ಹಣಕಾಸಿನ ಅಕ್ರಮ ಹಾಗೂ ಶತಕೋಟಿ ಡಾಲರ್‌ ವಂಚನೆ ವೆಸಗಿದೆ ಎಂಬ ಆರೋಪ ಎದುರಿಸುತ್ತಿದೆ.

ಇತ್ತಿಹಾದ್ ಇವೈ 217 ವಿಮಾನ ಮೂಲಕ ಅಬುಧಾಬಿಗೆ ತೆರಳಲು ಅವರು ಮಾಡಿದ ಪ್ರಯತ್ನ ವಿಫಲವಾಗಿದೆ. ಯುಎಇಗೆ ಹಿಂದಿರುಗುವ ಭರವಸೆ” ನೀಡಿದ್ದೆ. ಈ ಭರವಸೆಯ ಈಡೇರಿಕೆಗಾಗಿ ಅಲ್ಲಿಗೆ ತೆರಳಿದ್ದೆ. ತಮಗೆ ಯುಎಇಯ ನ್ಯಾಯ ವ್ಯವಸ್ಥೆಯಲ್ಲಿ ಸಂಪೂರ್ಣ ನಂಬಿಕೆ ಇದೆ ಎಂದು ಅವರು ಖಲೀಜ್ ಟೈಮ್ಸ್ ಗೆ ತಿಳಿಸಿದ್ದಾರೆ.

ಬಿ.ಆರ್.ಶೆಟ್ಟಿ ಅವರೊಂದಿಗೆ ಅವರ ಪತ್ನಿ ಡಾ.ಚಂದ್ರಕುಮಾರಿ ಶೆಟ್ಟಿ ಕೂಡ ಇದ್ದರು. ವಲಸೆ ಅಧಿಕಾರಿಗಳು ಚಂದ್ರಕುಮಾರಿಗೆ ಅವರ ಪ್ರಯಾಣಕ್ಕೆ ಅನುಮತಿ ನೀಡಿದರು. ಶನಿವಾರ ಮುಂಜಾನೆ 2.45ರ ವಿಮಾನದಲ್ಲಿ ಅವರು ತೆರಳಿದ್ದಾರೆ. ಈ ವಿಮಾನ ಭಾನುವಾರ ಬೆಳಗ್ಗೆ 5.40ಕ್ಕೆ ಅಬುದಾಬಿಗೆ ತಲುಪಿದೆ ಎಂದು ಬಿ.ಆರ್.ಶೆಟ್ಟಿ ತಿಳಿಸಿದ್ದಾರೆ.

ಬಿ.ಆರ್. ಶೆಟ್ಟಿ ಅವರು ಬ್ಯಾಂಕ್ ಆಫ್ ಬರೋಡಾ ಸೇರಿದಂತೆ ಭಾರತೀಯ ಬ್ಯಾಂಕುಗಳಿಗೆ 250 ಮಿಲಿಯನ್ ಡಾಲರ್ ಸಾಲವನ್ನು ಪಾವತಿಸಬೇಕಾಗಿದೆ. ಈ ಸಾಲಗಳನ್ನು ವಸೂಲಿ ಮಾಡುವ ಪ್ರಯತ್ನದಲ್ಲಿ ಎನ್‌ಎಂಸಿ ಸಂಸ್ಥಾಪಕರ ಮೇಲೆ ಪ್ರಯಾಣ ನಿರ್ಬಂಧಗಳ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

ಬ್ಯಾಂಕ್ ಆಫ್ ಬರೋಡಾ ಬ್ಯಾಂಕಿನಿಂದ ಸಾಲ ಪಡೆಯುವಾಗ ವೈಯಕ್ತಿಕವಾಗಿ ಭದ್ರತೆ ಇಟ್ಟ ಆಸ್ತಿಗಳನ್ನು ಮಾರಾಟ ಮಾಡದಂತೆ ಈಗಾಗಲೇ ಭಾರತೀಯ ನ್ಯಾಯಾಲಯವೊಂದು ಶೆಟ್ಟಿ ಮತ್ತು ಅವರ ಪತ್ನಿಗೆ ನಿರ್ಬಂಧ ವಿಧಿಸಿದೆ.

ಎನ್‌ ಎಮ್‌ ಸಿ ಹೆಲ್ತ್ ಕಂಪೆನಿಯನ್ನು ಬಿ.ಆರ್. ಶೆಟ್ಟಿ 1975ರಲ್ಲಿ ಸ್ಥಾಪಿಸಿದರು. ಅದು ಒಂದು ಆಸ್ಪತ್ರೆಯಿಂದ ಯುಎಇಯ ಅತಿ ದೊಡ್ಡ ಖಾಸಗಿ ಆರೋಗ್ಯಸೇವೆ ಪೂರೈಕೆದಾರ ಸಂಸ್ಥೆಯಾಗಿ ಬೆಳೆದಿದೆ. ಆದರೆ ಈ ಮಧ್ಯೆ ಕಂಪನಿಯ ಹಣಕಾಸು ವ್ಯವಹಾರ ಅಕ್ರಮದಿಂದ ಕೂಡಿದೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ತನಿಖೆ ಆರಂಭಗೊಂಡಿದೆ.

‘‘ಯುಎಇಯ ನ್ಯಾಯ ವ್ಯವಸ್ಥೆಯ ಬಗ್ಗೆ ನನಗೆ ಸಂಪೂರ್ಣ ವಿಶ್ವಾಸವಿದೆ ಹಾಗೂ ವಂಚನೆ ನಡೆಸಿದವರು ಕಾನೂನು ಕ್ರಮಕ್ಕೆ ಗುರಿಯಾಗುವುದನ್ನು ಎದುರು ನೋಡುತ್ತಿದ್ದೇನೆ’’ ಎಂದು ಅವರು ಶನಿವಾರ ನೀಡಿದ ಹೇಳಿಕೆಯೊಂದರಲ್ಲಿ ತಿಳಿಸಿದ್ದರು.

‘‘ಕಂಪೆನಿಗಳು, ಅವುಗಳ ಉದ್ಯೋಗಿಗಳು, ಶೇರುದಾರರು ಮತ್ತು ಕಂಪೆನಿಗಳೊಂದಿಗೆ ಸಂಬಂಧ ಹೊಂದಿರುವ ಇತರರಿಗೆ ಆಗಿರಬಹುದಾದ ಅನ್ಯಾಯವನ್ನು ಸರಿಪಡಿಸುವ ನಿಟ್ಟಿನಲ್ಲಿ ಎಲ್ಲ ಸಂಬಂಧಿತ ಪ್ರಾಧಿಕಾರಗಳಿಗೆ ಬೆಂಬಲ ನೀಡಲು ನಾನು ಯುಎಇಗೆ ಮರಳುತ್ತಿದ್ದೇನೆ’’ ಎಂದು ಬಿ.ಆರ್.
ಶೆಟ್ಟಿ ಹೇಳಿದ್ದರು.

Comments are closed.