ಕರ್ನಾಟಕ

ತಂಗಿಯ 70 ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಕದ್ದು ಸಿಕ್ಕಿಬಿದ್ದ ಅಣ್ಣ..!

Pinterest LinkedIn Tumblr


ಮೈಸೂರು: ಅಣ್ಣನೇ ಸೋದರಿಯ 3.5 ಲಕ್ಷ ರೂ. ಮೌಲ್ಯದ 70 ಗ್ರಾಂ. ತೂಕದ ಚಿನ್ನದ ಮಾಂಗಲ್ಯ ಸರ ಕದ್ದು ಸಿಕ್ಕಿ ಬಿದ್ದಿದ್ದಾನೆ. ಹೂಟಗಳ್ಳಿಯ ಕೆಎಚ್‌ಬಿ ಕಾಲನಿ ನಿವಾಸಿ ಸಂತೋಷ್‌ ಕುಮಾರ್‌(33) ಬಂಧಿತನಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಸಂತೋಷ್‌ ಕುಮಾರ್‌ ತನ್ನ ತಂಗಿಯ ಜತೆ ಮೃಗಾಲಯ ಬಳಿಯ ಬಟ್ಟೆ ಅಂಗಡಿಗೆ ಬಂದಿದ್ದು, ಬಟ್ಟೆ ಖರೀದಿ ವೇಳೆ ವ್ಯಾನಿಟಿ ಬ್ಯಾಗ್‌ ಅನ್ನು ತನ್ನ ಬಳಿ ಇಟ್ಟುಕೊಂಡು ಹೊರಡುವ ವೇಳೆ ಕೊಟ್ಟಿದ್ದ. ಈ ವೇಳೆ ಬ್ಯಾಗ್‌ನಲ್ಲಿದ್ದ ಮಾಂಗಲ್ಯ ಸರವನ್ನು ಅಪಹರಿಸಿದ್ದಾನೆ.

ಮನೆಗೆ ಹೋದ ಮೇಲೆ ಬ್ಯಾಗ್‌ ಪರಿಶೀಲಿಸಿದ ತಂಗಿಗೆ ಸರ ನಾಪತ್ತೆಯಾಗಿರುವುದು ಕಂಡು ಬಂದಿದ್ದು, ತಕ್ಷಣ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ನಜರ್‌ಬಾದ್‌ ಠಾಣೆ ಪೊಲೀಸರು, ಸಂತೋಷ್‌ ಕುಮಾರ್‌ನ ಮೇಲೆ ಅನುಮಾನಗೊಂಡಿದ್ದಾರೆ. ಹಿನಕಲ್‌ ಸಿಗ್ನಲ್‌ ಬಳಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ಮಾಡಿದಾಗ, ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.

ಪತ್ತೆ ಕಾರ್ಯವನ್ನು ಮೈಸೂರು ನಗರದ ಡಿಸಿಪಿ ಗೀತಪ್ರಸನ್ನ, ದೇವರಾಜ ವಿಭಾಗದ ಎಸಿಪಿ ಶಶಿಧರ್‌ ನೇತೃತ್ವದಲ್ಲಿನಜರ್‌ಬಾದ್‌ ಠಾಣೆ ಪೊಲೀಸ್‌ ಇನ್ಸ್‌ಪೆಕ್ಟರ್‌ ಜಿ.ಎನ್‌.ಶ್ರೀಕಾಂತ್‌, ಎಸ್‌ಐ ಎಂ.ಎಲ್‌.ಸಿದ್ದೇಶ್‌, ಎಎಸ್‌ಐ ಕೃಷ್ಣ ಹಾಗೂ ಸಿಬ್ಬಂದಿಯಾದ ಮಧುಕೇಶ್‌. ಎಚ್‌. ಪ್ರಕಾಶ್‌.ಬಿ., ಚೇತನ್‌ .ಪಿ, ಸಂದೇಶ್‌ ಕುಮಾರ್‌, ಕಿರಣ್‌ ರಾಥೋಡ್‌, ಚೇತನ್‌.ಹೆಚ್‌.ಎಸ್‌, ಸೌಮ್ಯ ಇದ್ದರು.

Comments are closed.