ಕರ್ನಾಟಕ

ಆರ್ಥಿಕ ಸಂಕಷ್ಟ: ನಟಿ ರಾಗಿಣಿ ದ್ವಿವೇದಿಯ 2 ಕಾರನ್ನು ಮಾರಾಟಕ್ಕಿಟ್ಟ ತಂದೆ

Pinterest LinkedIn Tumblr


ಬೆಂಗಳೂರು: ಜೈಲು ಸೇರುವ ಮುನ್ನ ರಾಣಿಯಂತೆ ಮೆರೆಯುತ್ತಿದ್ದ ರಾಗಿಣಿ ದ್ವಿವೇದಿ ಡ್ರಗ್ಸ್ ಪ್ರಕರಣದಲ್ಲಿ ಜೈಲು ಸೇರಿದ್ದಾಳೆ, ಹೊರಗೆ ಬರಲು ತುಪ್ಪದ ಹುಡುಗಿಗೆ ಜಾಮೀನೂ ಸಿಗುತ್ತಿಲ್ಲ. ಸಂಸಾರಕ್ಕೆ ದುಡಿಮೆಯ ಮೂಲವಾಗಿದ್ದ ರಾಗೀಣಿ ದ್ವಿವೇದಿ ಜೈಲು ಪಾಲಾದ ಮೇಲೆ ಮನೆಯಲ್ಲಿ ತೀವ್ರ ಆರ್ಥಿಕ ಸಂಕಷ್ಟ ಎದುರಾಗಿದೆ.

ಈ ಸಂಕಷ್ಟವನ್ನು ಸರಿದೂಗಿಸಲು ರಾಗಿಣಿ ತಂದೆ ಯಲಹಂಕದ ಮನೆಯನ್ನು ಮಾರಾಟಕ್ಕಿಟ್ಟಿದ್ದರು. ಆದರೆ ಅದು ಸೇಲ್ ಆಗದ ಕಾರಣ ಈಗ ಮಗಳು ಓಡಾಡಿದ ಎರಡು ಕಾರುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ರಾಗಿಣಿಯ ಕಾನೂನಾತ್ಮಕ್ಕೆ ಹೋರಾಟದ ಖರ್ಚು ವೆಚ್ಚಗಳಿಗಾಗಿ ಕಾರನ್ನು ಮಾರಲೇ ಬೇಕಾದ ಪರಿಸ್ಥಿತಿ ಸದ್ಯ ಆ ಸಂಸಾರಕ್ಕೆ ಇದೆ. ಹೀಗಾಗಿ ಅವರು ಬಳಸುತ್ತಿದ್ದ ಇನ್ನೋವಾ ಕಾರನ್ನು 9 ಲಕ್ಷ ರೂಪಾಯಿಗೂ, ಮಾರುತಿ ಸುಝುಕಿಯ SX4 ಕಾರನ್ನು ಮೂರು ಲಕ್ಷಕ್ಕೂ ಮಾರಾಟಕ್ಕಿಟ್ಟಿದ್ದಾರೆ.

ಕಳೆದೆರಡು ತಿಂಗಳಿಂದ ಮಗಳಿಲ್ಲದೆ ಆರ್ಥಿಕ ಸಂಕಷ್ಟದಲ್ಲಿರುವ ಪೋಷಕರಿಗೆ ಇದರಿಂದ ಬರುವ ಹಣ ಸಹಾಯವಾಗಬಹುದು.

Comments are closed.