ಕರ್ನಾಟಕ

ಚಿನ್ನ ಪ್ರಿಯರಿಗೆ ಶಾಕ್….ದಿಢೀರನೇ ಬೆಲೆ ಏರಿಕೆ ಕಂಡ ಚಿನ್ನ !

Pinterest LinkedIn Tumblr

 

ಬೆಂಗಳೂರು: ಚಿನ್ನದ ಬೆಲೆ ಒಮ್ಮೆಲೇ ಜಾಸ್ತಿ ಆಗುವ ಮೂಲಕ ಚಿನ್ನ ಪ್ರಿಯರಿಗೆ ಶಾಕ್ ನೀಡಿದೆ. ಈ ತಿಂಗಳ ಇಳಿಕೆಯತ್ತ ಮುಖ ಮಾಡಿದ್ದ ಚಿನ್ನ ಇಂದು ಒಮ್ಮೆಗೆ ಬೆಲೆ ಹೆಚ್ಚಿಸಿದೆ. ನಿರೀಕ್ಷೆಗೂ ಮೀರಿ ದಿಢೀರನೇ ಬೆಲೆ ಏರಿಕೆಯಾಗಿದ್ದು ಚಿನ್ನ ಖರೀದಿಸುವವರಿಗೆ ಶಾಕ್‌ ನೀಡಿದೆ.

ದೈನಂದಿನ ಬೆಲೆ ಏರಿಕೆ ಪ್ರಕ್ರಿಯೆಯಲ್ಲಿ ಇಂದು (ಗುರುವಾರ) ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 10 ಗ್ರಾಂ ಆಭರಣ ಚಿನ್ನದ (22 ಕ್ಯಾರಟ್‌) ಬೆಲೆ 47,610 ರೂಪಾಯಿ ನಿಗದಿಯಾಗಿದೆ. ಕಳೆದ ಮಂಗಳವಾರ ಚಿನ್ನದ ಬೆಲೆ 47,600 ರೂಪಾಯಿಗೆ ತಲುಪಿತ್ತು. ಆದರೆ ನಿನ್ನೆ 340 ರೂಪಾಯಿ ಕಡಿಮೆಯಾಗಿ 47,260ಗೆ ನಿಗದಿಯಾಗಿತ್ತು. ಆದರೆ ಇಂದು ಒಮ್ಮೆಲೇ 350 ರೂಪಾಯಿ ಏರಿಕೆಯಾಗಿ 47,610 ರೂ ತಲುಪಿ ಚಿನ್ನಪ್ರಿಯರಿಗೆ ಶಾಕ್‌ ನೀಡಿದೆ.

10 ಗ್ರಾಂ ಅಪರಂಜಿ ಚಿನ್ನದ (24 ಕ್ಯಾರಟ್‌) ಬೆಲೆಯಲ್ಲಿ ಕಳೆದ ಮೂರು ದಿನಗಳಿಂದ ಇಳಿಕೆ ಕಂಡು ಆಭರಣಪ್ರಿಯರಿಗೆ ಸಂತಸ ನೀಡಿತ್ತು. ಸೋಮವಾರ ಚಿನ್ನದ ಬೆಲೆ 51,950ಗೆ ತಲುಪಿ, ಮಂಗಳವಾರ 51,930 ರೂಪಾಯಿ ನಿಗದಿಯಾಗಿತ್ತು. ಬುಧವಾರ 370 ರೂಪಾಯಿ ಇಳಿಕೆಯಾಗಿ 51,560ಗೆ ತಲುಪಿದ ಹಿನ್ನೆಲೆ ಚಿನ್ನಾಭರಣ ಪ್ರಿಯರು ಫುಲ್ ಖುಷಿಯಾಗಿದ್ದರು. ಆದರೆ ಈ ಖುಷಿ ಅನುಭವಿಸುವ ಮುನ್ನವೇ ಮತ್ತೆ 370 ರೂಪಾಯಿಗೆ ಏರಿಕೆಯಾಗಿ ಇಂದಿನ ಚಿನ್ನದ ಬೆಲೆ ಮತ್ತೆ 51,930ಗೆ ತಲುಪಿದೆ.

ಬೆಳ್ಳಿ ದರ:
ಬೆಳ್ಳಿ ಬೆಲೆಯಲ್ಲಿ ಕಳೆದ ಸೋಮವಾರ ಬರೋಬ್ಬರಿ 1600 ರೂಪಾಯಿ ಏರಿಕೆ ಕಂಡು 61700ಗೆ ತಲುಪಿ ಶಾಕ್ ನೀಡಿತ್ತು. ಮಂಗಳವಾರ ಮತ್ತೆ 61,900 ರೂಪಾಯಿಗೆ ಏರಿಕೆಯಾಗಿತ್ತು. ಆದರೆ ಬುಧವಾರ 200 ಕಡಿಮೆಯಾಗಿ 61,700 ರೂಪಾಯಿ ತಲುಪಿತ್ತು. ಆದರೆ ಇಂದು ಮತ್ತೆ 300ರೂಪಾಯಿ ಏರಿಕೆಯಾಗಿ 62,000ಗೆ ತಲುಪಿದೆ. ದೇಶಾದ್ಯಂತ ಅನೇಕ ಕಡೆ ಬೆಳ್ಳಿ ಬೆಲೆಯಲ್ಲಿ ಏಕರೂಪವಿದೆ. ಆದರೆ, ಭುವನೇಶ್ವರ, ಕೊಯಂಬತ್ತೂರ್‌ ಮತ್ತು ಮಧುರೈನಲ್ಲಿ ಪ್ರತಿ ಕೆಜಿ ಬೆಳ್ಳಿಗೆ ನಿನ್ನೆಯ ದರಕ್ಕಿಂತ 900 ಇಳಿಕೆ ಕಂಡು 66,100 ರೂಪಾಯಿ ನಿಗದಿಯಾಗಿದೆ. ದೇಶದ ಇತರೆ ಕಡೆಗಳಿಗೆ ಹೋಲಿಸಿದರೆ ಈ ನಗರಗಳಲ್ಲಿ ಬೆಳ್ಳಿ ದರ ಅತೀ ಹೆಚ್ಚು ದಾಖಲಾಗಿದೆ.

ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆ:
ಬೆಂಗಳೂರು: ₹47,610 (22 ಕ್ಯಾರಟ್‌) ₹51,930 (24 ಕ್ಯಾರಟ್‌)
ಚೆನ್ನೈ: ₹47,900 (22 ಕ್ಯಾರಟ್‌) ₹52,260 (24 ಕ್ಯಾರಟ್‌)
ದಿಲ್ಲಿ: ₹49,660 (22 ಕ್ಯಾರಟ್‌), ₹54,160 (24 ಕ್ಯಾರಟ್‌)
ಹೈದರಾಬಾದ್‌: ₹47,610 (22 ಕ್ಯಾರಟ್‌) ₹51,930 (24 ಕ್ಯಾರಟ್‌)
ಕೋಲ್ಕತ: ₹49,990 (22 ಕ್ಯಾರಟ್‌), ₹52,690 (24 ಕ್ಯಾರಟ್‌)
ಮಂಗಳೂರು: ₹47,610 (22 ಕ್ಯಾರಟ್‌) ₹51,930 (24 ಕ್ಯಾರಟ್‌)
ಮುಂಬಯಿ: ₹49,910 (22 ಕ್ಯಾರಟ್‌), ₹50,910 (24 ಕ್ಯಾರಟ್‌ )
ಮೈಸೂರು: ₹47,610 (22 ಕ್ಯಾರಟ್‌) ₹51,930 (24 ಕ್ಯಾರಟ್‌)

ಒಟ್ಟಾರೆ ದೇಶದ ಪ್ರಮುಖ ಮಹಾನಗರಗಳಲ್ಲಿ ಹಳದಿ ಲೋಹದ ಬೆಲೆಯಲ್ಲಿ ಏರಿಕೆ ಕಂಡು ಬಂದಿದ್ದರೆ, ಬೆಳ್ಳಿ ದರ ಕೆಲವೆಡೆ ಇಳಿಕೆ ಕಂಡು ಅನೇಕ ಕಡೆಗಳಲ್ಲಿ ಏರಿಕೆಯಾಗಿದೆ. ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂಪಾಯಿ ಮೌಲ್ಯವನ್ನಾಧರಿಸಿ ಆಯಾ ದಿನದ ಬಂಗಾರ ಹಾಗೂ ಬೆಳ್ಳಿ ದರ ನಿರ್ಧಾರವಾಗುತ್ತದೆ.

Comments are closed.