
ವಾಷಿಂಗ್ಟನ್: ಭಾರೀ ಜಿದ್ದಾಜಿದ್ದಿಗೆ ಕಾರಣವಾಗಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆ ಮುಗಿದಿದ್ದು, ಡೊನಾಲ್ಡ್ ಟ್ರಂಪನ್ನು ಸೋಲಿಸುವ ಮೂಲಕ ಈ ಬಾರಿ ಶ್ವೇತ ಭವನದ ಚುಕ್ಕಾಣಿಯನ್ನು ಡೆಮಾಕ್ರಾಟಿಕ್ ಅಧ್ಯಕ್ಷೀಯ ಅಭ್ಯರ್ಥಿ ಜೋ ಬೈಡನ್ ಹಿಡಿಯುವುದು ಬಹುತೇಕ ನಿಚ್ಚಳವಾಗಿದ್ದು, ಇತಿಹಾಸ ಸೃಷ್ಟಿಸಲಿದ್ದಾರೆ ಎಂದು ವರದಿಯೊಂದು ಹೇಳಿದೆ.
ಅಮೆರಿಕದ ಇತಿಹಾಸದಲ್ಲಿ ಇತರ ಯಾವುದೇ ಅಧ್ಯಕ್ಷೀಯ ಅಭ್ಯರ್ಥಿಗಳಿಗಿಂತ ಹೆಚ್ಚಿನ ಮತಗಳನ್ನು ಪಡೆದು ಜೋ ಬೈಡನ್ ಗೆದ್ದಿದ್ದಾರೆ. ಈ ಮೂಲಕ ಮಾಜಿ ಅಧ್ಯಕ್ಷ ಬರಾಕ್ ಒಬಾಮ ಅವರು ನಿರ್ಮಿಸಿದ್ದ ದಾಖಲೆಯನ್ನು ಜೋ ಬೈಡನ್ ಮುರಿದಿದ್ದಾರೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ.
ನವೆಂಬರ್ 4 ರಂದು ಬೈಡನ್ 70.7 ಮಿಲಿಯನ್ ಮತಗಳನ್ನು ಪಡೆದಿದ್ದು ಇದು ಈ ಈತನಕ ಅಧ್ಯಕ್ಷ ಸ್ಥಾನಕ್ಕಾಗಿ ಸ್ಪರ್ಧಿಸಿರುವ ಅಭ್ಯರ್ಥಿಗಳು ಪಡೆದಿರುವ ಮತಗಳಿಗಿಂತ ಹೆಚ್ಚು ಎಂದು ನ್ಯಾಶನಲ್ ಪಬ್ಲಿಕ್ ರೇಡಿಯೊ(ಎನ್ಪಿಆರ್)ವರದಿ ಮಾಡಿದೆ.
2008ರಲ್ಲಿ ಬರಾಕ್ ಒಬಾಮಾ 6 ಕೋಟಿಯ 94 ಲಕ್ಷದ 98 ಸಾವಿರದ 516 ಮತಗಳನ್ನು ಗಳಿಸಿ ದಾಖಲೆ ನಿರ್ಮಿಸಿದ್ದರು. ಈ ಬಾರಿ ಜೊ ಬಿಡೆನ್ ಈಗಾಗಲೇ ಅವರಿಗಿಂತ 3 ಲಕ್ಷ ಹೆಚ್ಚು ಮತಗಳನ್ನು ಗಳಿಸಿದ್ದಾರೆ.
ಈ ಬಾರಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜೊ ಬೈಡನ್ ಮಧ್ಯೆ ತೀವ್ರ ಜಿದ್ದಾಜಿದ್ದಿ ಏರ್ಪಟ್ಟಿದ್ದು ಎಲೆಕ್ಟೊರಲ್ ವೋಟಿಂಗ್ ನಲ್ಲಿ ಜೊ ಬಿಡೆನ್ ಮುಂದಿದ್ದಾರೆ. ಜನಪ್ರಿಯ ಮತಗಳಲ್ಲಿ ಟ್ರಂಪ್ ಅವರು 2 ಲಕ್ಷದ 7 ಸಾವಿರ ಮತಗಳಷ್ಟು ಬಿಡೆನ್ ಗಿಂತ ಮುಂದಿದ್ದಾರೆ.
ಇನ್ನೂ ಕೆಲವು ಪ್ರಮುಖ ರಾಜ್ಯಗಳಲ್ಲಿ ಮತ ಎಣಿಕೆ ಪೂರ್ಣಗೊಂಡಿಲ್ಲ. ಕ್ಯಾಲಿಫೋರ್ನಿಯಾದಲ್ಲಿ ಇನ್ನೂ ಮತ ಎಣಿಕೆ ಪೂರ್ಣಗೊಂಡಿಲ್ಲ. ಡೊನಾಲ್ಡ್ ಟ್ರಂಪ್ ಅವರು ಸಹ ಬರಾಕ್ ಒಬಾಮಾ ದಾಖಲಿಸಿದ್ದ 67.32 ಮಿಲಿಯನ್ ಮತಗಳ ಹತ್ತಿರದಲ್ಲಿದ್ದಾರೆ.
ಆರಂಭಿಕ ಮತಗಳು ಮತ್ತು ಮೇಲ್ ಇನ್ ಬ್ಯಾಲೆಟ್ ನಲ್ಲಿ 100 ಮಿಲಿಯನ್ ಗಿಂತಲೂ ಹೆಚ್ಚು ಮತಗಳು ಸಿಕ್ಕಿದ್ದು ಇನ್ನೂ 23 ಮಿಲಿಯನ್ ವೋಟ್ ಗಳು ಹೊಂದಾಣಿಕೆಯಾಗಬೇಕಿದೆ. ಇದು ಹೊಂದಾಣಿಕೆಯಾದರೆ ಜೊ ಬೈಡನ್ ಮತಗಳು ಹೆಚ್ಚಾಗುವ ಸಾಧ್ಯತೆಯಿದೆ.
Comments are closed.