ಕರ್ನಾಟಕ

ಸಂತಾನ ಭಾಗ್ಯಕ್ಕಾಗಿ ಆಸ್ಪತ್ರೆಗಳನ್ನು ಅಲೆದು ಸಾಕಾಗಿದೆಯೇ? ಒಮ್ಮೆ ಈ ನಾಟಿ ವೈದ್ಯಯನ್ನು ಭೇಟಿಯಾಗಿ…

Pinterest LinkedIn Tumblr


ರಾಮನಗರ: ಬಹುತೇಕರಿಗೆ ಸಂತಾನ ಲಕ್ಷ್ಮಿ ಎಂದೇ ಕರೆಸಿಕೊಂಡಿರುವ ಚನ್ನಪಟ್ಟಣದ ಬೇವೂರು ತಾಲೂಕಿನ ಕೆಟಿ ಲಕ್ಷ್ಮಮ್ಮ ಬಳಿ ಅನೇಕರು ಚಿಕಿತ್ಸೆ ಪಡೆದು ಮಕ್ಕಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ನೈಸರ್ಗಿಕವಾಗಿ ದೊರೆಯುವ ಗಿಡ ಮೂಲಿಕೆಗಳಿಂದ ತಯಾರು ಮಾಡಿದ ನಾಟಿ ಔಷಧ ನೀಡುವ ಮೂಲಕ ಖ್ಯಾತಿ ಪಡೆದುಕೊಂಡಿದ್ದಾರೆ.

 

ಕಳೆದ 15 ವರ್ಷಗಳಿಂದ ನಾಟಿ ಔಷಧಿ ನೀಡುತ್ತಿದ್ದಾರೆ. ಕಾಡಿನಲ್ಲಿ ಸಿಗುವ ಗಿಡಮೂಲಿಕೆ ಸಸ್ಯಗಳನ್ನು ಗುರುತಿಸಿ ಅದನ್ನು ಚಿಕಿತ್ಸೆಗೆ ಬಳಸಿಕೊಳ್ಳುತ್ತಾರೆ. ತಮ್ಮ ಪೂರ್ವಿಕರಿಂದ ಈ ನಾಟಿ ವಿದ್ಯೆಯನ್ನ ಇವರು ಕರಗತ ಮಾಡಿಕೊಂಡಿದ್ದಾರೆ. ಗಿಡಮೂಲಿಕೆ ಬಗ್ಗೆ ಮಾಹಿತಿ ನೀಡದ ಅವರು ಕಾಡಿನಲ್ಲಿ ಹೋಗಿ ಔಷಧಿಗಳನ್ನ ಸ್ವತ: ಅವರೇ ಹೋಗಿ ತರುತ್ತಾರೆ. ಮನೆಯಲ್ಲಿಯೇ ಕಾಡಿನಿಂದ ತಂದ ಗಿಡಮೂಲಿಕೆಯಿಂದ ಔಷಧಿ ತಯಾರು ಮಾಡುತ್ತಾರೆ. ನಂತರ ಮಕ್ಕಳಿಲ್ಲದೆ ಬರುವ ಸ್ತ್ರೀಯರಿಗೆ ಔಷಧಿಯನ್ನ ಮನೆಯ ಒಸಲಿನ ಮದ್ಯದಲ್ಲಿ ಕೂರಿಸಿ ನಾಟಿ ಔಷಧಿಯನ್ನ ನೀಡುತ್ತಾರೆ. ಅನೇಕ ಜನರು ಇವರಿಂದ ಲಾಭಾವನ್ನು ಪಡೆದಿದ್ದಾರೆ. ಅಲ್ಲದೇ, ಗ್ರಾಮಸ್ಥರು ಕೂಡ ಇವರ ಈ ಔಷಧಿ ಕ್ರಿಯೆಗೆ ಬೆರಗಾಗಿದ್ದಾರೆ.

ಲಕ್ಷ್ಮಮ್ಮ ಸಂಗ್ರಹಿಸಿಟ್ಟ ಮಾಹಿತಿ ಪ್ರಕಾರ ಕೂಡ ಇವರಿಗೆ ಇವರಲ್ಲಿ ಬಂದ ಮಹಿಳೆಯರು ಮಕ್ಕಳನ್ನು ಪಡೆದಿದ್ದಾರೆ. ಇವರ ಬಳಿ ಔಷಧ ತೆಗೆದುಕೊಂಡು ಹೋದವರು ಕೂಡ ಈ ಬಗ್ಗೆ ಖಚಿತ ಪಡಿಸಿದ್ದಾರೆ. ಬಾಗಲಕೋಟೆ, ಗದಗ, ಕೊಪ್ಪಳ, ಬೆಂಗಳೂರು, ತುಮಕೂರು, ಮಂಡ್ಯ, ಮೈಸೂರು, ರಾಮನಗರ ಜಿಲ್ಲೆಗಳು ಸೇರಿದಂತೆರಾಜ್ಯದ ವಿವಿದೆಡೆಯಿಂದ ಅನೇಕರು ಇವರಿಂದ ಔಷಧಿ ಪಡೆದು ಮಕ್ಕಳ ಭಾಗ್ಯ ಪಡೆದಿದ್ದಾರೆ.

ಸ್ತ್ರೀಯರ ಎಲ್ಲಾ ಸಮಸ್ಯೆಗಳಿಗೂ ಚಿಕಿತ್ಸೆ ನೀಡುವ ಇವರು ಋತುಮತಿಯಾದ ನಂತರ ಮಹಿಳೆಯರು ಬಂದು ಇವರು ಕೊಡುವ ನಾಟಿ ಔಷಧಿಯನ್ನ ಕುಡಿಯಬೇಕು ಎನ್ನುತ್ತಾರೆ ನಾಟಿ ವೈದ್ಯಲಕ್ಷ್ಮಮ್ಮ. ಜೊತೆಗೆ ನಾನು ಈ ಸೇವೆಯಲ್ಲಿ ಯಾವುದೇ ರೀತಿ ಹಣ ಪಡೆಯುವುದಿಲ್ಲ, ಬರುವ ಜನರಿಗೆ ಪ್ರೀತಿಯಿಂದ ಚಿಕಿತ್ಸೆ ಕೊಡುತ್ತೇನೆ. ಅವರಿಗೆ ಒಳ್ಳೆಯದಾದರೆ ಅಷ್ಟೇ ಸಾಕು ಎನ್ನುತ್ತಾರೆ ಲಕ್ಷ್ಮಮ್ಮ.

Comments are closed.