ಕರ್ನಾಟಕ

ಹೆಂಡತಿಯ ಜೊತೆಗಿನ ಖಾಸಗಿ ವಿಡಿಯೋವನ್ನು ವಾಟ್ಸಾಪ್​ನಲ್ಲಿ ಶೇರ್, ಫೇಸ್ಬುಕ್​ನಲ್ಲಿ ಅಪ್ಲೋಡ್​ ಮಾಡಿದ ಪತಿ

Pinterest LinkedIn Tumblr


ಪತ್ನಿಯ ಜೊತೆಗಿನ ಖಾಸಗಿ ವಿಡಿಯೋವನ್ನು ಮೊಬೈಲ್​ನಲ್ಲಿ ಚಿತ್ರೀಕರಿಸಿದ್ದ ಪತಿ ಅದನ್ನು ಸ್ನೇಹಿತರೊಂದಿಗೆ ವಾಟ್ಸಾಪ್​ನಲ್ಲಿ ಶೇರ್ ಮಾಡಿದ ಘಟನೆ ಕೆ.ಆರ್.ಪುರದ ಬಳಿಯ ಹೊಂಗಸಂದ್ರದಲ್ಲಿ ನಡೆದಿದೆ. ಹೊಂಗಸಂದ್ರದ ನಿವಾಸಿ ಹರಿಕೃಷ್ಣ ಎಂಬಾತನು ಪತ್ನಿಯ ಶೀಲವನ್ನು ಶಂಕಿಸಿ ಈ ಕೃತ್ಯವನ್ನು ಎಸಗಿದ್ದಾನೆ. ಅಲ್ಲದೇ ಫೇಸ್ಬುಕ್​ನಲ್ಲಿ ಅಪ್ಲೋಡ್​ ಕೂಡ ಮಾಡಿದ್ದಾನೆ.

ಇದರಿಂದ ನೊಂದ ಪತ್ನಿ ವೈಟ್​ ಫೀಲ್ಡ್​ CEN ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸಂತ್ರಸ್ತ ಮಹಿಳೆ 2015ರಲ್ಲಿ ಮೊದಲನೇ ಗಂಡನಿಂದ ವಿಚ್ಛೇದನ ಪಡೆದಿದ್ದು ನಂತರ ಖಾಸಗಿ ಕಂಪನಿಯಲ್ಲಿ ಪರಿಚಯವಾಗಿದ್ದ ಹರಿಕೃಷ್ಣನನ್ನು ಮದುವೆಯಾಗಿದ್ದರು.

ವಿಚ್ಛೇದನದ ನಂತರವೂ ಮೊದಲಪತಿಯ ಜೊತೆ ಸಂಬಂಧ ಹೊಂದಿದ್ದೀಯಾ ಅಂತ ಆರೋಪಿ ಹರಿಕೃಷ್ಣ ಕಿರುಕುಳ ನೀಡುತ್ತಿದ್ದ. ಮಹಿಳೆಯು ಕಿರುಕುಳದ ಬಗ್ಗೆ ಬೊಮ್ಮನಹಳ್ಳಿ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದು ಪೊಲೀಸರು ಬುದ್ಧಿವಾದ ಹೇಳಿ ಕಳಿಸಿದ್ದರು. ನಂತರ ಪತಿ ಹರಿಕೃಷ್ಣ ಪತ್ನಿಯೊಂದಿಗಿನ ಖಾಸಗಿ ದೃಶ್ಯವನ್ನು ಫೇಕ್ ಅಕೌಂಟ್​ನಲ್ಲಿ ಅಪ್ಲೋಡ್​ ಮಾಡುವಂತಹ ದುಷ್ಕೃತ್ಯವೆಸಗಿದ್ದಾನೆ.

Comments are closed.