ಕರ್ನಾಟಕ

ಕೌಟುಂಬಿಕ ಕಲಹ ಹಿನ್ನೆಲೆ ಮಕ್ಕಳೊಂದಿಗೆ ಕಾಲುವೆಗೆ ಹಾರಿ ಶಿಕ್ಷಕಿ ಆತ್ಮಹತ್ಯೆ

Pinterest LinkedIn Tumblr


ದಾವಣಗೆರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಶಿಕ್ಷಕಿಯೊಬ್ಬರು ಇಬ್ಬರು ಮಕ್ಕಳೊಂದಿಗೆ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಇಲ್ಲಿಂದ ವರದಿಯಾಗಿದೆ.

ಮೃತರನ್ನು ಶ್ರೀದೇವಿ (38), ಅನುಷಾ (10) ಮತ್ತು ನೂತನ್ (8) ಎಂದು ಗುರುತಿಸಲಾಗಿದೆ ಕೌಟುಂಬಿಕ ಕಲಹವೇ ಈ ಘಟನೆಗೆ ಕಾರಣವೆಂದು ಪೊಲೀಸರು ಶಂಕಿಸಿದ್ದಾರೆ.

ಮೃತ ತಾಯಿ ಶ್ರೀದೇವಿ ದಾವಂಗೆರೆ ಪಟ್ಟಣದ ಜಯನಗರ ನಿವಾಸಿಯಾಗಿದ್ದು ವರು ನಗರದಲ್ಲಿ ಪ್ರೌಢಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದರು,

ಮನೆ ಕಟ್ಟುವ ವಿಚಾರದಲ್ಲಿ ಪತಿ-ಪತ್ನಿಯ ನಡುವೆ ವಿವಾದವಿತ್ತೆನ್ನಲಾಗಿದ್ದು ಸೋಮವಾರ ರಾತ್ರಿ ಇದೇ ವಿಚಾರ ಗೆ ತೀವ್ರ ವಾಗ್ವಾದಕ್ಕೆ ಕಾರಣವಾಗಿದೆ. ಇದರಿಂದ ನಿರಾಶರಾದ ಶ್ರೀದೇವಿ ಆತ್ಮಹತ್ಯೆಯಂತಹಾ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮೂಲವೊಂದು ತಿಳಿಸಿದೆ. ಅವರನ್ನು ರಕ್ಷಿಸಲು ನೆರೆಹೊರೆಯವರು ಸ್ಥಳಕ್ಕೆ ತಲುಪುವ ಹೊತ್ತಿಗೆ ಮೂವರೂ ಮುಳುಗಿ ಸಾವನ್ನಪ್ಪಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗುವುದು ಎಂದು ಮೂಲಗಳು ತಿಳಿಸಿವೆ.

Comments are closed.