ಕರ್ನಾಟಕ

ಯುವತಿಯರು ಬೆತ್ತಲೆ ಫೋಟೋ ಕೊಡದಿದ್ದರೆ ಈತ ಏನ್ ಮಾಡುತ್ತಿದ್ದ ಗೊತ್ತಾ?

Pinterest LinkedIn Tumblr


ಬೆಂಗಳೂರು: ಸೋಶಿಯಲ್​ ಮೀಡಿಯಾಗಳಲ್ಲಿ ಯುವತಿಯರನ್ನು ಪರಿಚಯಿಸಿಕೊಂಡು, ಅವರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಾ, ಪರಿಚಯಿಸಿಕೊಂಡು ಬಳಿಕ ಯುವತಿಯರ ಹತ್ತಿರ ಬೆತ್ತಲೆ ಫೋಟೋ ಕಳುಹಿಸುವಂತೆ ಪೀಡಿಸುತ್ತಿದ್ದ ಯುವಕನೋರ್ವನನ್ನು ಬೆಂಗಳೂರು ವೈಟ್​ಫೀಲ್ಡ್​ ಸಿಇಎನ್​ ಪೊಲೀಸರು ಬಂಧಿಸಿದ್ದಾರೆ.

ಬಂಧಿತನನ್ನು ಜಗದೀಶ್ ಎಂದು ಗುರುತಿಸಲಾಗಿದ್ದು, ಯುವತಿ ನೀಡಿದ ದೂರಿನನ್ವಯ ಬಂಧಿಸಲಾಗಿದೆ.

ಬಂಧಿತ ಆರೋಪಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ರಾಪ್ತ ಯುವತಿಯರನ್ನು ಗುರಿ ಮಾಡಿಕೊಂಡು, ಅವರೊಂದಿಗೆ ಚಾಟಿಂಗ್ ಮಾಡುತ್ತಾ, ಬಾಲಕಿಯರ ಬೆತ್ತಲೆ ಫೋಟೋ ಕಳುಹಿಸುವಂತೆ ಪೀಡಿಸುತ್ತಿದ್ದ. ಬೆತ್ತಲೆ ಫೊಟೋ ಕಳುಹಿಸಲು ಒಪ್ಪದ ಹೆಣ್ಣುಮಕ್ಕಳನ್ನು ಕೆಟ್ಟದಾಗಿ ಬಿಂಬಿಸಿಅವರ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ‘I am Available’ ಎಂದು ಪೋಸ್ಟ್​ ಹಾಕಿ ಹುಡುಗಿಯರ ನಂಬರ್ ಹರಿಯಬಿಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚೆಗೆ ವೈಟ್​ಫೀಲ್ಡ್​ನ ಅಪ್ರಾಪ್ತ ಹುಡುಗಿಯೊಬ್ಬಳನ್ನು ಸಾಮಾಜಿಕ ಜಾಲತಾಣದ ಮೂಲಕ ಪರಿಚಯಿಸಿಕೊಂಡ ಆರೋಪಿ ಜಗದೀಶ್, ಆಕೆಯ ಬಳಿಯೂ ಬೆತ್ತಲೆ ಫೋಟೋಗೆ ಬೇಡಿಕೆ ಇಟ್ಟಿದ್ದ. ಆಕೆ ಫೋಟೋ ನೀಡಲು ಒಪ್ಪದಿದ್ದಾಗ ಆಕೆಯ ಹೆಸರಲ್ಲಿ ನಕಲಿ ಖಾತೆ ಸೃಷ್ಟಿಸಿ ಆಕೆಯ ಫೋನ್ ನಂಬರ್​ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದ. ಇದರಿಂದ ಬೇಸತ್ತ ಅಪ್ರಾಪ್ತೆ ತನ್ನ ಪೋಷಕರಿಗೆ ಮಾಹಿತಿ ನೀಡಿದ್ದು, ಪೋಷಕರು ನೀಡಿದ ದೂರಿನನ್ವಯ ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಧ್ಯ ಆರೋಪಿ ಜಗದೀಶ್​ನನ್ನು ಬಂಧಿಸಿರುವ ವೈಟ್​ಫೀಲ್ಡ್​ ಪೊಲೀಸರು ಆರೋಪಿಯ ಫೋನ್​ ವಶಪಡಿಸಿಕೊಂಡಿದ್ದಾರೆ.

Comments are closed.