
ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಭಾರೀ ಬೆಳವಣಿಗೆಯಾಗಿದೆ. ಬದ್ಧ ರಾಜಕೀಯ ಶತ್ರು ಮನೆತನಗಳ ನಡುವೆ ಈಗ ಪ್ರೀತಿಯ ಗಾಳಿ ಬಿಸುತ್ತಿದೆ. ಯಡಿಯೂರಪ್ಪ-ದೇವೇಗೌಡ ಮನೆತನಗಳ ಮಧ್ಯೆ ಗೆಳೆತನ ಬೆಳೆಯುತ್ತಿದೆ.
ದೋಸ್ತಿ ಭಾಗವಾಗಿಯೇ ದೇವೇಗೌಡರಿಗೆ ಸರ್ಕಾರದಿಂದ 60 ಲಕ್ಷದ ಕಾರ್ ಗಿಫ್ಟ್ ನೀಡಿದ್ದಾರೆ. 30 ಲಕ್ಷದ ಕಾರ್ಗಾಗಿ ವಿಪಕ್ಷ ನಾಯಕ ಸಿದ್ದರಾಮಯ್ಯ ಒಂದು ವರ್ಷ ಕಾದಿದ್ದರು. ದಿಢೀರ ದೊಡ್ಡಗೌಡರಿಗೆ ದುಬಾರಿ ಕಾರ್ ಗಿಫ್ಟ್ ಕೊಟ್ಟಿರೋದ್ರಿಂದ ರಾಜಕೀಯ ವಲಯದಲ್ಲಿ ದೊಡ್ಡ ಮಟ್ಟದ ಚರ್ಚೆಯಾಗುತ್ತಿದೆ.
ಈ ಬಾರಿ ಸದನದಲ್ಲೂ ಕುಮಾರಸ್ವಾಮಿ ಸರ್ಕಾರದ ಪರ ಮೃದು ಧೋರಣೆ ತೋರಿದ್ರು. ಅಲ್ದೆ ಸರ್ಕಾರ ವಿರುದ್ಧ ಹೆಚ್ಡಿಕೆ ಒಂದೇ ಒಂದು ಮಾತಡಿಲ್ಲ. ಅಲ್ದೆ ಈ ಬಾರಿ ಬಿಜೆಪಿ ಹಿರಿಯರ ಕ್ಷೇತ್ರಗಳಿಗಿಂತಲೂ HDK ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡಿದ್ರು.
ನಾಯಕತ್ವ ಬದಲಾವಣೆ ಸುದ್ದಿ ಮಧ್ಯೆಯೂ ಹೆಚ್ಡಿಕೆ, ಯಡಿಯೂರಪ್ಪ ಅವರನ್ನು ಭೇಟಿಯಾ ಸಮಾಧಾನ ಹೇಳಿ ಬಂದಿದ್ರು. ಇದೀಗ ಈ ರೀ-ಕನೆಕ್ಟ್ ಆದ ಫ್ರೆಂಡ್ಶಿಪ್ ಹಿಂದಿದ್ಯಾ ರಾಜಕಾರಣದ ಸ್ಫೋಟಕ ರಹಸ್ಯ? ಎಂಬ ಅನುಮಾನ ಶುರುವಾಗಿದೆ. ಹೊಸ ಫ್ರೆಂಡ್ಶಿಪ್ ಮೂಲಕ ಹೈಕಮಾಂಡ್ಗೆ ಮೆಸೇಜ್ ಕೊಟ್ರಾ ಬಿಎಸ್ವೈ? ನಾಯಕತ್ವ ಬದಲಾವಣೆ ಚರ್ಚೆ ಮಧ್ಯೆಯೇ ಗೌಡರ ಜೊತೆ ಕೈ ಕುಲುಕಿದ್ರಾ ಸಿಎಂ? ಅಗತ್ಯ ಬಿದ್ದರೆ ಬಿಜೆಪಿ-ಜೆಡಿಎಸ್ ಮೈತ್ರಿಗೂ ಯಡಿಯೂರಪ್ಪ ಸೈ ? ಅಂತಾರಾ ಎಂಬ ಪ್ರಶ್ನೆ ಎದುರಾಗಿದೆ.
Comments are closed.