
ಬೆಂಗಳೂರು: ದೇಶಾದ್ಯಂತ ಜನಸಾಮಾನ್ಯರು ಮಾತ್ರವಲ್ಲದೆ ರಾಜಕಾರಣಿಗಳೂ ಕರೊನಾ ಸೋಂಕಿತರಾಗುತ್ತಿದ್ದಾರೆ. ಇದಕ್ಕೆ ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಕರೊನಾ ಸೋಂಕಿಗೆ ಒಳಗಾಗಿರುವುದು ಇನ್ನೊಂದು ಸೇರ್ಪಡೆಯಾಗಿದೆ.
ನಾನು ಕರೊನಾ ಪರೀಕ್ಷೆಗೆ ಒಳಗಾಗಿದ್ದು, ಪರೀಕ್ಷೆಯ ವರದಿಯಲ್ಲಿ ಪಾಸಿಟಿವ್ ಬಂದಿರುವುದರಿಂದ ಸೋಂಕು ದೃಢಪಟ್ಟಿದೆ. ಆದರೆ ಸದ್ಯ ನನಗೆ ಸೋಂಕಿನ ಯಾವುದೇ ಲಕ್ಷಣಗಳಿಲ್ಲ ಎಂಬುದಾಗಿ ಅವರು ಹೇಳಿಕೊಂಡಿದ್ದಾರೆ.
ಈ ಹಿನ್ನೆಲೆಯಲ್ಲಿ ನನ್ನ ನೇರ ಸಂಪರ್ಕಕ್ಕೆ ಬಂದಿರುವ ಎಲ್ಲರೂ ಎಚ್ಚರಿಕೆ ವಹಿಸಬೇಕೆಂದು ಅವರು ಮನವಿ ಮಾಡಿಕೊಂಡಿದ್ದಾರೆ.
Comments are closed.