ಕರ್ನಾಟಕ

ಉಪ ಮುಖ್ಯಮಂತ್ರಿ ಅಶ್ವತ್ಥನಾರಾಯಣಗೆ ಕೊರೋನಾ ಸೋಂಕು ದೃಢ

Pinterest LinkedIn Tumblr


ಬೆಂಗಳೂರು: ಉಪ ಮುಖ್ಯಮಂತ್ರಿ ಡಾ. ಸಿಎನ್ ಅಶ್ವತ್ಥನಾರಾಯಣ ಅವರಿಗೆ ಕೊರೋನಾ ಸೋಂಕು ತಗಲಿರುವುದು ದೃಢಪಟ್ಟಿದೆ.

ಟ್ವೀಟ್‌ ನಲ್ಲಿ ಈ ಕುರಿತು ತಿಳಿಸಿರುವ ಅಶ್ವತ್ಥನಾರಾಯಣ ಅವರು, ವಿಧಾನಮಂಡಲ ಅಧಿವೇಶನಕ್ಕಾಗಿ ಇಂದು ಕೋವಿಡ್-19 ಪರೀಕ್ಷೆಗೆ ಒಳಗಾಗಿದ್ದು, ವರದಿಯು ಕೊರೋನಾ ಪಾಸಿಟಿವ್ ಎಂದು ತಿಳಿಸಿರುತ್ತದೆ. ನಾನು ಆರೋಗ್ಯವಾಗಿದ್ದು, ಮನೆಯಲ್ಲಿಯೇ ಪ್ರತ್ಯೇಕವಾಗಿರುತ್ತೇನೆ ಎಂದು ಹೇಳಿದ್ದಾರೆ.

ಇದುವರೆಗೆ ನನ್ನ ಜೊತೆ ಸಂಪರ್ಕದಲ್ಲಿದ್ದವರು ಎಚ್ಚರಿಕೆ ವಹಿಸಬೇಕೆಂದು ಅಶ್ವತ್ಥನಾರಾಯಣ ಟ್ವಿಟರ್‌ನಲ್ಲಿ ಮನವಿ ಮಾಡಿದ್ದಾರೆ.

Comments are closed.