ಕರ್ನಾಟಕ

ಡ್ರಗ್ಸ್ ಪ್ರಕರಣದಲ್ಲಿ ನನ್ನ ಕೈವಾಡವಿದ್ದರೆ ನನಗೆ ಮರಣದಂಡನೆ ಶಿಕ್ಷೆಯಾಗಲಿ: ಜಮೀರ್​ ಅಹ್ಮದ್​

Pinterest LinkedIn Tumblr


ಬೆಂಗಳೂರು: ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿಸಿ ನನ್ನನ್ನು ರಾಜಕೀಯವಾಗಿ ಮುಗಿಸುವ ಹುನ್ನಾರ ನಡೆದಿದೆ. ಒಂದು ವೇಳೆ ಈ ಪ್ರಕರಣದಲ್ಲಿ ನನ್ನ ಕೈವಾಡ ಸಾಬೀತಾದರೆ ನನಗೆ ಗಲ್ಲು ಶಿಕ್ಷೆಯಾಗಲಿ ಎಂದು ಶಾಸಕ ಜಮೀರ್​ ಅಹ್ಮದ್​ ಹೇಳಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಜಮೀರ್ ಡ್ರಗ್ಸ್​ ಕೇಸ್​ನಲ್ಲಿ ನಾನು ಪೊಲೀಸ್ ಠಾಣೆಯಲ್ಲಿ ಈಗಾಗಲೇ ಮಾನನಷ್ಟ ಮೊಕದ್ದಮೆ ಹಾಕಿದ್ದೇನೆ. ನ್ಯಾಯಾಲಯದ ಮುಖಾಂತರ ಹೋರಾಟ ನಡೆಸುತ್ತಿದ್ದೇನೆ, ಅಲ್ಲದೆ ಈ ಕುರಿತು ಪೊಲೀಸ್​ನವರು ತನಿಖೆ ನಡೆಸುತ್ತಿದ್ದಾರೆ, ನಮ್ಮ ರಾಜ್ಯದ ಪೊಲೀಸರು ಯಾವ ರಾಜ್ಯದಲ್ಲೂ ಇಲ್ಲ. ನಂಬರ್ ಒನ್ ಪೊಲೀಸರು ಎಂದರೆ ಕರ್ನಾಟಕ ಪೊಲೀಸ್. ಅವರ ಬಗ್ಗೆ ವಿಶ್ವಾಸ ಇದೆ. ಎಂದು ಹೇಳಿದರು.

ಪ್ರಶಾಂತ್ ಸಂಬರಗಿ ಒಳ್ಳೆ ಕೆಲಸ ಮಾಡುತ್ತಿದ್ದಾರೆ, ಮಾಡಲಿ. ಅವರು ನನ್ನ ಮೇಲೆ ಎಲ್ಲೂ ಡ್ರಗ್ಸ್ ಆರೋಪ ಮಾಡಿಲ್ಲ, ಮೂರ್ನಾಲ್ಕು ವರ್ಷದಿಂದ ಹಿಂದೆ ನನಗೆ ಫಾಜೀಲ್ ಪರಿಚಯ ಯಿದ್ದ ಆಗಾಗ ಮನಗೆ ಬಂದು ಹೋಗುತ್ತಿದ್ದ. ಕಳೆದ ನಾಲ್ಕು ವರ್ಷಗಳಿಂದ ಅವನು ನನಗೆ ಕಂಡೇ ಇಲ್ಲ.

ಕಳ್ಳ ನನ್ನ ಜೊತೆ ನಿಂತು ಫೋಟೋ ತೆಗೆಸಿಕೊಂಡರೆ ನಾನು ಕಳ್ಳ ಅನ್ನೋಕೆ ಆಗುತ್ತಾ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಹಾಗಾಗಿ ನನ್ನ ಜೊತೆ ಯಾರೋ ಫೋಟೋ ತೆಗೆಸಿಕೊಳ್ಳುತ್ತಾರೆ. ಆದ್ದರಿಂದ ನಾನು ಭಾಗಿಯಾಗಿರುತ್ತೀನಾ..? ಎಂದು ಪ್ರಶ್ನೆ ಮಾಡಿದರು.

ನನ್ನ ಕ್ಷೇತ್ರದ ಜನರ ಮೇಲೆ ಆಣೆ ಮಾಡಿ ಹೇಳ್ತೀನಿ, ನನ್ನ ಕ್ಷೇತ್ರದ ಜನರಿಗೆ ಕಳಂಕ ತರುವ ಯಾವುದೇ ಕೆಲಸ ಮಾಡಲ್ಲ. ಡ್ರಗ್ಸ್ ದಂಧೆಯಲ್ಲಿ ಫಾಝಿಲ್ ತಪ್ಪು ಮಾಡಿದ್ದರೆ ಗಲ್ಲು ಶಿಕ್ಷೆ ಕೊಡಲಿ. ಅದೇ ರೀತಿ ನಾನು ಭಾಗಿಯಾಗಿದ್ದರೆ ನನಗೂ ಗಲ್ಲು ಶಿಕ್ಷೆ ಆಗಬೇಕು ಎಂದು ಈ ಹಿಂದೆಯೇ ನಾನು ಮಾಧ್ಯಮಗಳಲ್ಲಿ ಹೇಳಿದ್ದೇನೆ. ಇದರಲ್ಲಿ ಯಾರೇ ಇದ್ದರು ಅವರಿಗೆ ಕಾನೂನಿನ ಮೂಲಕ ಕಠಿಣ ಶಿಕ್ಷೆಯಾಗಬೇಕು ಅಂತ ಹೇಳಿದ್ರು.

ವರ್ಷಕ್ಕೆ ಒಮ್ಮೆ ಉಮ್ರಾಗೆ ನಾನು ಹೋಗಿದ್ದೇನೆ. ಅವನ ಹಾಗೆ ಲಕ್ಷಾಂತರ ಜನ ಅಲ್ಲಿಗೆ ಬರುತ್ತಾರೆ, ಅವನೂ ಬಂದಿರಬಹುದು. ನಮ್ಮ ಕರ್ನಾಟ ರಾಜ್ಯದಿಂದ ಸಾವಿರಾರು ಜನ ಬರುತ್ತಾರೆ. ನಾನು ನಮಾಜ್ ಮಾಡಲು ಹೋದಾಗ ಎಲ್ಲರು ಬಂದುಫೋಟೋ ತೆಗೆಸಿಕೊಳ್ಳುತ್ತಾರೆ. ಅದೇ ರೀತಿ ಅವನು ನನ್ನೊಡನೆ ಫೋಟೋ ತೆಗೆಸಿಕೊಂಡಿರಬೇಕು, ಆದರೆ ನನಗೂ ಅವನಿಗೂ ಯಾವುದೇ ಸಂಬಂಧವಿಲ್ಲ ಎಂದಿದ್ದಾರೆ.

ನಾನು ಯಾವುದೇ ತಪ್ಪನ್ನೂ ಮಾಡಿಲ್ಲ. ಸಂಜನಾ ನನ್ನ ಜೊತೆ ಹೋಗಿದ್ದಾರೆ ಅಂತ ಆರೋಪ ಮಾಡಿದ್ದಾರೆ. ಸಂಜನಾ ಏನಾದರೂ ದಾಖಲೆ ಕೊಟ್ಟಿದ್ದಾರ, ಈಗ ಸಂಜನಾ ಬಿಟ್ಟು ಫಾಝಿಲ್ ಇಟ್ಟುಕೊಂಡಿದ್ದೀರ, ನಾನು ಎಲ್ಲೂ ತಪ್ಪು ಮಾಡಿಲ್ಲ. ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಸಂಜನಾ ಜೊತೆ ಜಮೀರ್ ಹೋಗಿದ್ದರೂ ಅಂತ ಸಂಬರಗಿ ಹೇಳಿದ್ದು, ಹೀಗಾಗಿ ಅವರನ್ನೇ ಕೇಳಿ. ಸಂಜನಾ ಜೊತೆ ನಾನು ಹೋಗಿರೋ ಒಂದು ಫೋಟೋ ತೋರಿಸಲಿ ಎಂದು ಹೇಳಿದರು.

Comments are closed.