ಕರ್ನಾಟಕ

ಸಂಸತ್ ಅಧಿವೇಶನ: ಅನಂತ್ ಕುಮಾರ್ ಹೆಗ್ಡೆ ಸೇರಿ 17 ಎಂಪಿಗಳಿಗೆ ಕೊರೋನಾ!

Pinterest LinkedIn Tumblr


ನವದೆಹಲಿ: ಸಂಸತ್ ಮುಂಗಾರು ಅಧಿವೇಶನಕ್ಕೂ ಮೊದಲು ಎಲ್ಲಾ ಸಂಸದರಿಗೆ ಕೊರೋನಾ ಪರೀಕ್ಷೆ ಮಾಡಿಸಲಾಗಿತ್ತು. ಇದರಲ್ಲಿ 17 ಸಂಸದರಿಗೆ ಕೊರೋನಾ ಸೋಂಕು ಇರುವುದು ಧೃಡಪಟ್ಟಿದೆ.

ಸೆಪ್ಟೆಂಬರ್ 13ರಂದು ಸಂಸದರಿಗೆ ಕೊರೋನಾ ಪರೀಕ್ಷೆ ನಡೆಸಲಾಗಿದ್ದು ಇದರಲ್ಲಿ 17 ಸಂಸದರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಬಿಜೆಪಿಯ 12 ಸಂಸದರು, ವೈಎಸ್ಆರ್ ಕಾಂಗ್ರೆಸ್ ನ 2, ಶಿವಸೇನೆ, ಡಿಎಂಕೆ ಮತ್ತು ಆರ್ಎಲ್ಪಿ ಪಕ್ಷದ ತಲಾ ಒಬ್ಬ ಸಂಸದರಿಗೆ ಕೊರೋನಾ ದೃಢಪಟ್ಟಿದೆ.

ಈ ಪೈಕಿ ಕೊರೋನಾಗೆ ತುತ್ತಾಗಿರುವ ಬಿಜೆಪಿಯ ಸಂಸದ ಸುಕಾಂತ್ ಮಜೂಂದಾರ್ ತಮಗೆ ಕೊರೋನಾ ಪಾಸಿಟಿವ್ ಬಂದಿರುವುದನ್ನು ಟ್ವೀಟ್ ಮೂಲಕ ತಿಳಿಸಿದ್ದಾರೆ. ಇನ್ನು ಸಂಸದ ಅನಂತ್ ಕುಮಾರ್ ಹೆಗಡೆ ಮತ್ತು ಮೀನಾಕ್ಷಿ ಲೇಕಿಗೂ ಕೊರೋನಾ ವಕ್ಕರಿಸಿದೆ.

ಇದಕ್ಕೂ ಮುನ್ನ ಅಮಿತಾ ಶಾ ಸೇರಿದಂತೆ ಏಳು ಕೇಂದ್ರ ಸಚಿವರು ಮತ್ತು 25 ಸಂಸದರು ಕೊರೋನಾಗೆ ತುತ್ತಾಗಿದ್ದರು.

Comments are closed.