ಕರ್ನಾಟಕ

ಇನ್ಫೋಸಿಸ್‌ನಿಂದ ಅಮೆರಿಕ ಮೂಲದ ಟೆಕ್‌ ಕಂಪನಿ ಖರೀದಿ

Pinterest LinkedIn Tumblr


ಬೆಂಗಳೂರು: ಐಟಿ ದಿಗ್ಗಜ ಇನ್ಫೋಸಿಸ್‌, ಅಮೆರಿಕ ಮೂಲದ ತಂತ್ರಜ್ಞಾನ ಕಂಪನಿ ಕಲಾಯ್‌ಡೋಸ್ಕೋಪ್‌ ಇನ್ನೊವೇಶನ್‌ ಅನ್ನು 42 ದಶಲಕ್ಷ ಡಾಲರ್‌ಗೆ (302 ಕೋಟಿ ರೂ.) ಖರೀದಿಸಲಿದೆ.

ಕಲಾಯ್‌ಡೋಸ್ಕೋಪ್‌ ಪ್ರಾಡಕ್ಟ್ ಡಿಸೈನ್‌ ಎಂಜಿನಿಯರಿಂಗ್‌ ಮತ್ತು ಅಭಿವೃದ್ಧಿ ಕಂಪನಿಯಾಗಿದೆ. ಈ ಸ್ವಾಧೀನದೊಂದಿಗೆ ಇನ್ಫೋಸಿಸ್‌ಗೆ ಅಮೆರಿಕದಲ್ಲಿ ವೈದ್ಯಕೀಯ ಸಲಕರಣೆ, ಗ್ರಾಹಕ ಮತ್ತು ಕೈಗಾರಿಕಾ ಮಾರುಕಟ್ಟೆಗಳಲ್ಲಿ ಪ್ರಾಡಕ್ಟ್ ಡಿಸೈನ್‌ ತಂತ್ರಜ್ಞಾನ ಮತ್ತು ಎಂಜಿನಿಯರಿಂಗ್‌ ಸೇವೆ ಒದಗಿಸಲು ಅನುಕೂಲವಾಗಲಿದೆ.

ಕಲಾಯ್‌ಡೋಸ್ಕೋಪ್‌ ಮೈಕ್ರೊಸರ್ಜಿಕಲ್‌ ಸಾಧನಗಳ ವಿನ್ಯಾಸಗಳನ್ನು ಅಭಿವೃದ್ಧಿಪಡಿಸುತ್ತಿದೆ. ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿಸ್ವಾಧೀನ ಪ್ರಕ್ರಿಯೆ ಪೂರ್ಣವಾಗುವ ಸಾಧ್ಯತೆ ಇದೆ.

ಕೊರೊನಾ ವೈರಸ್‌ ನಡುವೆಯೂ ಭಾರತದ ಎರಡನೇ ಅತೀ ದೊಡ್ಡ ಸಾಫ್ಟ್‌ವೇರ್‌ ಸೇವಾ ಸಂಸ್ಥೆ ಇನ್ಫೋಸಿಸ್‌ ಮೊದಲ ತ್ರೈಮಾಸಿಕದಲ್ಲಿ 4,233 ಕೋಟಿ ರೂಪಾಯಿ ಲಾಭ ಗಳಿಸಿದೆ. ಜೂನ್‌ 30ಕ್ಕೆ ಅಂತ್ಯಗೊಂಡ ಮೊದಲ ತ್ರೈಮಾಸಿಕದಲ್ಲಿ ಇನ್ಫೋಸಿಸ್‌ನ ಲಾಭ ಗಳಿಕೆ ಶೇ. 11.4ರಷ್ಟು ಹೆಚ್ಚಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ ಸಂಸ್ಥೆಗೆ 3,798 ಕೋಟಿ ರೂಪಾಯಿ ಲಾಭವಾಗಿತ್ತು. ಆದರೆ ತ್ರೈಮಾಸಿಕದಿಂದ ತ್ರೈಮಾಸಿಕಕ್ಕೆ ಲೆಕ್ಕ ಹಾಕಿದರೆ ಸಂಸ್ಥೆಯ ಲಾಭದಲ್ಲಿ ಅಲ್ಪ ಇಳಿಕೆಯಾಗಿದೆ. ಮಾರ್ಚ್‌ 31ಕ್ಕೆ ಅಂತ್ಯಗೊಂಡ ಕಳೆದ ಆರ್ಥಿಕ ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಇನ್ಫೋಸಿಸ್‌ 4,321 ಕೋಟಿ ರೂಪಾಯಿ ಆದಾಯ ಗಳಿಸಿತ್ತು. ಇದಕ್ಕೆ ಹೋಲಿಸಿದರೆ ಲಾಭದ ಪ್ರಮಾಣ ಶೇ. 2.03ರಷ್ಟು ಇಳಿಕೆಯಾಗಿದೆ.

Comments are closed.