ಕರ್ನಾಟಕ

ಮೈಸೂರು ದಸರಾ; ಸೆಪ್ಟೆಂಬರ್ 8ಕ್ಕೆ ದಸರಾ ಉನ್ನತ ಮಟ್ಟದ ಸಭೆ

Pinterest LinkedIn Tumblr


ಮೈಸೂರು(ಸೆಪ್ಟೆಂಬರ್​.03): ಕೊರೋನಾ ಆರ್ಭಟ ನಡುವೆ ವಿಶ್ವವಿಖ್ಯಾತ ಮೈಸೂರು ದಸರಾ ನಡೆಯುತ್ತೋ ಇಲ್ಲವೋ ಎನ್ನುವ ಅನುಮಾನಗಳ‌ ನಡುವೆಯೇ ಇದೇ ಸೆಪ್ಟೆಂಬರ್​ 8 ಕ್ಕೆ ದಸರಾ ಉನ್ನತ ಮಟ್ಟದ ಸಭೆ ನಿಗದಿಯಾಗಿದೆ. ಮೈಸೂರು ದಸರಾ ಮಹೋತ್ಸವ 2020 ರ‌ ತಯಾರಿ ನಡೆಸಿರುವ ಜಿಲ್ಲಾಡಳಿತ ಯಾವ ರೀತಿ ದಸರಾ ಆಚರಿಸಬೇಕು ಎನ್ನುವ ಗೊಂದಲದಲ್ಲಿದೆ. ದಸರಾ ಉನ್ನತ ಮಟ್ಟದ ಸಭೆಯು ಬೆಂಗಳೂರಿನ ವಿಧಾನಸೌಧದಲ್ಲಿ ನಡೆಯಲಿದೆ.‌ ಮುಖ್ಯಮಂತ್ರಿ ಬಿ‌ ಎಸ್ ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ‌‌ನಡೆಯಲಿರುವ ದಸರಾ ಉನ್ನತ ಮಟ್ಟದ ಸಭೆಯಲ್ಲಿ ದಸರಾವನ್ನ ಸರಳವಾಗಿ‌ ನಡೆಸಬೇಕೋ ಅಥವಾ ಸಾಂಪ್ರದಾಯಿಕವಾಗಿ ನಡೆಸಬೇಕೋ ಎನ್ನುವ ಬಗ್ಗೆ ನಿರ್ಧಾರವಾಗಲಿದೆ. ಈ ಜೊತೆಗೆ ಅರಮನೆಗೆ ಸೀಮಿತ ಮಾಡಬೇಕೋ ಅಥವಾ ಹೊರಗೆ ಎಂದಿನಂತೆ ದಸರಾ ಮಾಡಬೇಕೋ ಎನ್ನುವ ಬಗ್ಗೆಯೂ ತೀರ್ಮಾನ‌ ಆಗಲಿದೆ.

ಈ ಸಭೆಯಲ್ಲಿ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಗೃಹ ಸಚಿವ ಬಸವರಾಜ್ ಬೊಮ್ಮಾಯಿ, ಚಾಮರಾಜನಗರ ನಗರ ಜಿಲ್ಲಾ ಉಸ್ತುವಾರಿ ಸಚಿವ ಸುರೇಶ್ ಕುಮಾರ್, ಸಂಸದ ಪ್ರತಾಪ್ ಸಿಂಹ, ಮೈಸೂರು ಜಿಲ್ಲೆಯ ಎಲ್ಲಾ ಶಾಸಕರು, ಮೈಸೂರು ಮೇಯರ್, ಜಿಲ್ಲಾ ಪಂಚಾಯತ್ ಅಧ್ಯಕ್ಷರು, ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಮಹಾನಗರ ಪಾಲಿಕೆ ಆಯುಕ್ತರು ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗಿಯಾಗಲಿದ್ದಾರೆ.

ಸಭೆಯಲ್ಲಿ ಮೈಸೂರು ದಸರಾ ಆಚರಣೆಗೆ ಎಬಿಸಿಡಿ ಪ್ಲಾನ್ ಪ್ರಮುಖ ಚರ್ಚೆ ವಿಚಾರ ಆಗಲಿದೆ. ‌ಮೈಸೂರು ಜಿಲ್ಲಾಡಳಿತದಿಂದ ನಾಲ್ಕು ಪ್ಲಾನ್ ಸಿದ್ದವಾಗಿದ್ದು,‌ ಕೊರೋನಾ ನಡುವೆ ಸರ್ಕಾರ ದಸರಾ ಆಚರಿಸಲು ಸಿದ್ದವಾಗಿರುವ ಪ್ಲಾನ್‌ಗಳನ್ನ ಮುಖ್ಯಮಂತ್ರಿಗಳ ಮುಂದೆ ಇಡಲಿದ್ದಾರೆ.

ಪ್ಲಾನ್ A – ದಸರಾವನ್ನ ಕೇವಲ ಜಂಬೂಸವಾರಿ ಮೆರವಣಿಗೆಗೆ ಸೀಮಿತ ಮಾಡೋದು ಅದು ಅರಮನೆ ಒಳಗೆ ಮಾತ್ರ.

ಪ್ಲಾನ್ B- ದಸರಾ ಉದ್ಘಾಟನೆ ಹಾಗೂ ಜಂಬೂಸವಾರಿ ಕಾರ್ಯಕ್ರಮ ಮಾಡೋದು.

ಪ್ಲಾನ್ C – ಎಲ್ಲ ದಸರಾ ಕಾರ್ಯಕ್ರಮ ನಡೆಸೋದು ಸಾರ್ವಜನಿಕರಿಗೆ ನಿರ್ಬಂಧ ಹೇರಿಕೆ ಮಾಡೋದು.

ಪ್ಲಾನ್ D- ಎಲ್ಲ ದಸರಾ ಕಾರ್ಯಕ್ರಮ ನಿಗದಿಯಂತೆ ನಡೆಸುವುದು ಕೊರೋನಾ ನಿಯಮದ ಪ್ರಕಾರ ಸಾಮಾಜಿಕ ಅಂತರ ಹಾಗೂ ಕಡಿಮೆ ಜನರಿಗೆ ಆಹ್ವಾನ ಮಾಡುವುದು.
ಈ ನಾಲ್ಕು ಆಯ್ಕೆ ಬಿಟ್ಟು ಮತ್ತೆ ಆಯ್ಕೆ ಇದೆ ಹಾಗು ಸಿಎಂ ಸಲಹೆ ಕೊಡುತ್ತಾರೆ ಎನ್ನುವದನ್ನು ನೋಡಿ ದಸರಾ ಆಚರಣೆ ಬಗ್ಗೆ ಅಂತಿಮ‌ ತೀರ್ಮಾನ ಆಗಲಿದೆ.

Comments are closed.