ಕರ್ನಾಟಕ

ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಕೋಟಿ ಕೋಟಿ ಗಾಂಜಾ ವಶ!

Pinterest LinkedIn Tumblr


ಬೆಂಗಳೂರಿನಲ್ಲಿ ಕೋಟಿ ಕೋಟಿ ಗಾಂಜಾ ಪತ್ತೆ ಆಗ್ತಲೇ ಇದೆ. ಇದಕ್ಕೆ ಪೂರಕವಾಗಿ ವಿದೇಶದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ 1.38 ಕೋಟಿ ಮೌಲ್ಯದ ಗಾಂಜಾವನ್ನು KIAL ಕಸ್ಟಮ್ಸ್​ ಅಧಿಕಾರಿಗಳು ವಶ ಪಡಿಸಿಕೊಂಡಿದ್ದಾರೆ.

NCB ಅರೆಸ್ಟ್ ಮಾಡಿದ್ದ ಮುಂಬೈ ಗಾಂಜಾ ಪೆಡ್ಲರ್ ಅಹ್ಮದ್​ ಕೊಟ್ಟ ಮಾಹಿತಿ ಮೇರೆಗೆ, KIAL ಏರ್ಪೋಟ್ ನ ಕಸ್ಟಮ್ಸ್​ ಅಧಿಕಾರಿಗಳ ಬೃಹತ್ ಕಾರ್ಯಾಚರಣೆ ನಡೆಸಿ, 1.28 ಕೋಟಿ ಮೌಲ್ಯದ 8 ಕೆಜಿ ಮರಿಜುವಾನ, ಗಾಂಜಾ ಪತ್ತೆ ಮಾಡಿ ವಶ ಪಡೆಸಿಕೊಂಡಿದ್ದಾರೆ.

ವಿದೇಶದಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬಂದಿದ್ದ ಗಾಂಜಾ, NCB ಅರೆಸ್ಟ್​ ಮಾಡಿದ್ದ ಎಫ್​​​ ಅಹ್ಮಮದ್ ಕೊಟ್ಟ ಮಾಹಿತಿ ಮೇಲೆ ಕಸ್ಟಮ್ಸ್ ಅಧಿಕಾರಿಗಳು ಕೊರಿಯರ್ ವಿಭಾಗದಲ್ಲಿ ಪರಿಶೀಲಿಸಿದ್ದಾಗ ನಾಲ್ಕು ಎಲೆಕ್ಟ್ರಾನಿಕ್ಸ್​ ಉಪಕರಣಗಳಲ್ಲಿ ಅಡಗಿಸಿಟ್ಟಿದ್ದ ಗಾಂಜಾ ಸಿಕ್ಕಿ ಬಿದ್ದಿದೆ.

Comments are closed.