ಕರ್ನಾಟಕ

ಗಾಂಜಾ ಮೆಡಿಸಿನ್ ಅಂತೆ..ಅದನ್ನು ಕಾನೂನು ಬದ್ಧ ಮಾಡಬೇಕಂತೆ ಈ ಯುವ ನಟನಿಗೆ!

Pinterest LinkedIn Tumblr

ಬೆಂಗಳೂರು: ಗಾಂಜಾ ಒಂದು ಡ್ರಗ್ಸ್ ಅಲ್ಲ ಅದೊಂದು ಮೆಡಿಸಿನ್ ಆಗಿದೆ. ನಾನೂ ಅದನ್ನು ತೆಗೆದುಕೊಳ್ಳುತ್ತೇನೆ ಎಂದು ಕನ್ನಡ ಚಿತ್ರರಂಗದ ಯುವನಟ ರಾಕೇಶ್ ಅಡಿಗ ಹೇಳಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ಡ್ರಗ್ಸ್ ಮಾಫಿಯಾ ಬಗ್ಗೆ ಖಾಸಗಿ ವಾಹಿನಿಗೆ ಮಾತನಾಡಿದ ಯುವನಟ ನಾನೂ ಗಾಂಜಾವನ್ನು ತೆಗೆದುಕೊಳ್ಳುತ್ತಿದ್ದೆ. ಈಗಲೂ ಅದರಿಂದ ಮಾಡಿದ ಕೇಕ್, ಕುಕಿಗಳನ್ನು ಯಾರದರೂ ಮಾಡಿಕೊಟ್ಟರೆ ತಿನ್ನುತ್ತೇನೆ ಎಂದು ರಾಕೇಶ್ ಬಹಿರಂಗವಾಗಿ ಹೇಳಿಕೆ ನೀಡಿದರು.

ಡ್ರಗ್ಸ್ ಮಾಫಿಯಾ ಹೆಸರಲ್ಲಿ ಸ್ಯಾಂಡಲ್ ವುಡ್ ನಲ್ಲಿ ಕೆಲವರನ್ನು ಮಾತ್ರ ಗುರುತಿಸುವುದು ಸರಿಯಲ್ಲ. ಮೊದಲು ಯಾರು ಅದನ್ನು ತೆಗೆದುಕೊಳ್ಳುತ್ತಾರೆ ಎಂಬುದಕ್ಕಿಂತ ಯಾರು ಅದನ್ನು ದೂರದಿಂದ ತಂದು ಮಾರುತ್ತಾರೆ ಅವರನ್ನು ಹಿಡಿಯಿರಿ. ಅಲ್ಲದೆ ನಾನೊಬ್ಬ ಸಾಮಾನ್ಯ ಪ್ರಜೆಯಾಗಿ ಹೇಳುವುದಾದರೆ ಗಾಂಜಾ ಒಂದು ಗಿಡವಾಗಿದ್ದು ಅದಕ್ಕೆ ತನ್ನದೇ ಇತಿಹಾಸವಿದೆ. ಇದರ ಬಗ್ಗೆ ಪ್ರಧಾನಿ ಮೋದಿಗೆ ಈ ಬಗ್ಗೆ ಪತ್ರ ಬರೆಯಲಾಗಿದೆ. ಆಯುಷ್ಮಾನ್ ಇಲಾಖೆ ಸಹ ಗಾಂಜಾ ಬಗ್ಗೆ ಸಂಶೋಧನೆ ನಡೆಸುತ್ತಿದೆ ಎಂದರು

ಅಮೆರಿಕಾದಲ್ಲಿ ಗಾಂಜಾ ಕಾನೂನುಬದ್ದಗೊಳಿಸಲಾಗಿದೆ. ಅಮೆರಿಕಾವನ್ನೇ ಎಲ್ಲಾ ವಿಚಾರಗಳಲ್ಲಿ ಹಿಂಬಾಲಿಸುವ ನಮ್ಮಲ್ಲಿ ಯಾಕೇ ವಿವಾರದಲ್ಲಿ ಅಮೇರಿಕಾವನ್ನು ಫಾಲೋ ಮಡಬಾರದು? ಗಾಂಜಾದಿಂದ ಆರ್ಥಿಕತೆ, ಔಷಧ ಉದ್ಯಮಕ್ಕೂ ಲಾಭವಿದೆ ಎಂದು ರಾಕೇಶ್ ಅಡಿಗ ಹೇಳಿದ್ದಾರೆ.

ಸದ್ಯ ಈ ಹೇಳಿಕೆ ಸ್ಯಾಂಡಲ್ ವುಡ್ ನಲ್ಲಿ ಬಾರೀ ಚರ್ಚೆಗೆ ಗ್ರಾಸವಾಗಿದ್ದು ಯುವ ನಟನ ಹೇಳಿಕೆ ವಿವಾದಕ್ಕೆ ಎಡೆ ಮಾಡಿಕೊಟ್ಟಿದೆ.

Comments are closed.