ಕರ್ನಾಟಕ

ಸಮ್ಮಿಶ್ರ ಸರಕಾರ ಉರುಳಿಸಲು ಡ್ರಗ್ ಮಾಫಿಯಾ ಕಾರಣ: ಕುಮಾರಸ್ವಾಮಿ

Pinterest LinkedIn Tumblr


ತುರುವೇಕೆರೆ: ನನ್ನ ನೇತೃತ್ವದ ಮೈತ್ರಿ ಸರ್ಕಾರ ಉರುಳಲು ಡ್ರಗ್ ಮಾಫಿಯಾ ಕಾರಣ ಎಂದು ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಹೊಸ ಬಾಂಬ್ ಸಿಡಿಸಿದ್ದಾರೆ.

ಮಾಯಸಂದ್ರ ಹೋಬಳಿ ಗುಡ್ಡೇನಹಳ್ಳಿ ಜಮೀನಿನ ವಿಚಾರವಾಗಿ ವಾಜಿ ಶಾಸಕ ಎಂ.ಟಿ. ಕೃಷ್ಣಪ್ಪ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಪ್ರತಿಭಟನೆ ಹಿನ್ನೆಲೆಯಲ್ಲಿ ಸೋಮವಾರ ತಾಲೂಕಿಗೆ ಆಗಮಿಸಿದ್ದ ಅವರು, ಪ್ರವಾಸಿ ಮಂದಿರದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ನಾನು ಸಿಎಂ ಆಗಿದ್ದಾಗ ಡ್ರಗ್ಸ್ ದಂಧೆಗೆ ಕಡಿವಾಣ ಹಾಕಲು ಕಠಿಣ ಕ್ರಮ ಕೈಗೊಂಡಿದ್ದೆ. ನನ್ನ ಸರ್ಕಾರ ಬೀಳಿಸೋಕೆ ಡ್ರಗ್ ಮಾಫಿಯಾ ಹಣವನ್ನು ಬಿಜೆಪಿ ಬಳಸಿಕೊಂಡಿತ್ತು. ಕ್ರಿಕೆಟ್ ಬೆಟ್ಟಿಂಗ್, ಡಾನ್ಸ್ ಬಾರ್, ಪಬ್‌ಗಳ ಹಣ ಕೂಡ ಬಂದಿತ್ತು. ಇದನ್ನು ಬಳಸಿಕೊಂಡು ಮೈತ್ರಿ ಸರ್ಕಾರ ಕೆಡವಲಾಯಿತು ಎಂದು ಹರಿಹಾಯ್ದರು.

ಮಾಧ್ಯಮಗಳಲ್ಲಿ ಇಂತಹ ವಿಚಾರ ಹೆಚ್ಚು ಚರ್ಚೆ ಆಗಬಾರದು. ಇದು ಎಳೆಮಕ್ಕಳ ಮೇಲೆ ದುಷ್ಪರಿಣಾಮ ಬೀರಬಹುದು. ಈ ಹಗರಣದ ಹಿಂದೆ ಯಾರೇ ಪ್ರಭಾವಿ ವ್ಯಕ್ತಿಗಳಿದ್ದರೂ ಅವರ ವಿರುದ್ಧ ಕಠಿಣ ಕ್ರಮ ಜರುಗಬೇಕು. ನಾನು ಚಿತ್ರರಂಗದಲ್ಲಿದ್ದಾಗ ಡ್ರಗ್ ಮಾಫಿಯಾ ಇರೋದು ನನಗೆ ಗೊತ್ತಿಲ್ಲ ಎಂದು ಹೇಳಿದರು. ತಹಸೀಲ್ದಾರ್ ನಯೀಂ ಉನ್ನೀಸಾಗೆ ಗುಡ್ಡೇನಹಳ್ಳಿ ಜಮೀನು ವಿಚಾರವಾಗಿ ರೈತರಿಗೆ ನ್ಯಾಯ ಕೊಡಿಸಲು ಮನವಿ ಸಲ್ಲಿಸಿದರು.

ಮಾಜಿ ಶಾಸಕರಾದ ಎಂ.ಟಿ.ಕೃಷ್ಣಪ್ಪ, ಎಚ್. ನಿಂಗಪ್ಪ, ಜೆಡಿಎಸ್ ಜಿಲ್ಲಾಧ್ಯಕ್ಷ ಆಂಜಿನಪ್ಪ, ಮುಖಂಡರಾದ ರಾಜೀವ್ ಕೃಷ್ಣಪ್ಪ, ವೆಂಕಟೇಶ್‌ಕೃಷ್ಣಪ್ಪ, ಕೋಳಾಲ ಗಂಗಾಧರ್, ಬಾಣಸಂದ್ರ ರಮೇಶ್, ವೆಂಕಟಾಪುರ ಯೋಗೀಶ್ ಇದ್ದರು. ಬಿಗಿ ಬಂದೋಬಸ್ತ್: ವಾಜಿ ಮುಖ್ಯಮಂತ್ರಿ ಕುವಾರಸ್ವಾಮಿ ಆಗಮನಕ್ಕೂ ಮುಂಚೆ ಜೆಡಿಎಸ್‌ನ ಸಾವಿರಾರು ಕಾರ್ಯಕರ್ತರು ವಾಯಸಂದ್ರ ರಸ್ತೆಯುದ್ದಕ್ಕೂ ನೆರೆದಿದ್ದರು. ಆದರೆ 144 ಸೆಕ್ಷನ್ ಇದ್ದಿದ್ದರಿಂದ ಕುವಾರಸ್ವಾಮಿ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿ ನಡೆಸಿ ಕಾರ್ಯಕರ್ತ ಶರತ್ ಮನೆಯಲ್ಲಿ ಕಾಫಿ ಸೇವಿಸಿ ತೆರಳಿದರು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್‌ಗಳನ್ನು ನಿರ್ಮಿಸಿ ಭದ್ರತೆಗೆ ಪೊಲೀಸ್ ಬಂದೋಬಸ್ತ್ ವಾಡಲಾಗಿತ್ತು.

ಎಂ.ಟಿ.ಕೃಷ್ಣಪ್ಪ ಅಭ್ಯರ್ಥಿ: ತಾಲೂಕಿನಲ್ಲಿ ಜೆಡಿಎಸ್ ಬಲಿಷ್ಠವಾಗಿದೆ. ಪಕ್ಷದಲ್ಲಿ ಗೊಂದಲ ವಿಲ್ಲ, ಹೀಗಾಗಿ ವಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಅವರೇ ಮುಂದಿನ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ. ಅನುವಾನವೇ ಬೇಡ. ಕಳೆದ ಚುನಾವನೆಯಲ್ಲಿ ಕೃಷ್ಣಪ್ಪ ಸೋಲಲು ಜೆಡಿಎಸ್ ಬಂಡಾಯ ಅಭ್ಯರ್ಥಿಗಳೇ ಕಾರಣ ಹೊರತು ಕಾರ್ಯಕರ್ತರಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದರು.

ಶಾಸಕರೇ ಬಗೆಹರಿಸಬಹುದಿತ್ತು : ಅಧಿಕಾರಿಗಳು ಸರ್ಕಾರದ ಒತ್ತಡಕ್ಕೆ ಒಳಗಾಗದೆ ರೈತರ ಪರ ಕೆಲಸ ನಿರ್ವಹಿಸಿದ್ದಿದ್ದರೆ ತಾಲೂಕಿನಲ್ಲಿ 144 ಸೆಕ್ಷನ್ ಹಾಕಿ ಬಿಗುವಿನ ವಾತಾವರಣ ನಿಮಾಣವಾಗುತ್ತಿರಲಿಲ್ಲ ಎಂದು ಎಚ್.ಡಿ.ಕುಮಾರಸ್ವಾಮಿ ಹೇಳಿದರು. ಶಾಸಕ ಮಸಾಲ ಜಯರಾಂ ಅವರೇ ಜವಾಬ್ದಾರಿ ಅರಿತು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮ ತೆಗೆದುಕೊಂಡಿದ್ದರೆ ಜಮೀನು ಪ್ರಕರಣ ಬಗೆಹರಿಸಬಹುದಿತ್ತು. ಇದಕ್ಕಾಗಿ ಜೆಡಿಎಸ್ ಇಷ್ಟೊಂದು ದೊಡ್ಡ ಹೋರಾಟ ಹಮ್ಮಿಕೊಳ್ಳುವ ಪ್ರಮೇಯವೇ ಬರುತ್ತಿರಲಿಲ್ಲ ಎಂದರು. ಡಿ.ಜೆ.ಹಳ್ಳಿ, ಕೆ.ಜಿ. ಹಳ್ಳಿ ಪ್ರಕರಣದಲ್ಲೇ ಇಂತಹ 144 ಸೆಕ್ಷನ್ ಜಾರಿಗೆ ತಂದ ಉದಾಹರಣೆಯಿಲ್ಲ. ಆದರೆ ಕ್ಷುಲ್ಲಕ ಕಾರಣಗಳಿಗೆ ನಿಷೇಧಾಜ್ಞೆ ಜಾರಿಗೆ ತಂದು ಸಾರ್ವಜನಿಕರಲ್ಲಿ ಭೀತಿ ಉಂಟುಮಾಡುವ ಕಾರಣವೇನಿತ್ತು. ನಾನು ಕಾನೂನನ್ನು ಗೌರವಿಸುತ್ತೇನೆ, ಯಾವುದೇ ಪಾದಯಾತ್ರೆ, ಪ್ರತಿಭಟನೆ ಮಾಡುವುದಿಲ್ಲ. ರೈತರಿಗೆ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ಪಕ್ಷ ಸದಾ ಮುಂಚೂಣಿಯಲ್ಲಿರುತ್ತದೆ ಎಂದರು.

Comments are closed.