ಕರ್ನಾಟಕ

ಮಹಿಳೆಯ ಹತ್ಯೆ, ಅತ್ಯಾಚಾರ: ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆ

Pinterest LinkedIn Tumblr


ಹಾಸನ: ಕೈಮುಗಿದು, ಕಾಲಿಡಿದುಕೊಂಡರೂ, ಕರುಣೆ ತೋರದ ಕಾಮುಕ 35ರಿಂದ 40 ವರ್ಷದ ಮಹಿಳೆಯ ತಲೆಮೇಲೆ ಕಲ್ಲು ಎತ್ತಿ ಹಾಕಿ ಹತ್ಯೆ ಮಾಡಿ, ಅತ್ಯಾಚಾರ ಎಸಗಿ ಪರಾರಿಯಾಗಿರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಪೊಲೀಸರು ಆರೋಪಿ ಬಂಧನಕ್ಕೆ ಬಲೆ ಬೀಸಿದ್ದಾರೆ.

ನಗರ ಗಾಂಧಿಬಜಾರ್‌ನ ಅಂಗಡಿ ಮುಂದೆ ಮಲಗಿದ್ದ ಮಹಿಳೆ ಎಬ್ಬಿಸಿ ಸೋಮವಾರ ರಾತ್ರಿ 12.45ರ ವೇಳೆಗೆ ಜೀನ್ಸ್‌ ಪ್ಯಾಂಟ್‌ ಮತ್ತು ಬಿಳಿಶರ್ಟ್ ಧರಿಸಿದ್ದ ವ್ಯಕ್ತಿ ಅದೇನೋ ಹೇಳಿದಾಗ ಆಕೆ ಕೈಮುಗಿಯುತ್ತಾಳೆ, ಕಾಲು ಹಿಡಿಯುತ್ತಾಳೆ ಆದರೂ ಲೆಕ್ಕಿಸದೆ ತಲೆಯ ಮೇಲೆ ಕಲ್ಲುಎತ್ತಿ ಹಾಕಿ ಬಳಿಕ ಅತ್ಯಾಚಾರ ಎಸಗಿ ಪರಾರಿಯಾಗಿರುವ ದೃಶ್ಯ ಸೆರೆಯಾಗಿದೆ.

ಮೃತಳ ಶವವನ್ನು ಜಿಲ್ಲಾಸ್ಪತ್ರೆ ಶವಾಗಾರದಲ್ಲಿ ಇರಿಸಲಾಗಿದ್ದು, ನಗರಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Comments are closed.