ಕೊರೊನಾ ಎಫೆಕ್ಟ್ ಐಶಾರಾಮಿ ಕಾರ್ಗಳನ್ನ ಹೊಂದಿರುವ ಟ್ರಾವೆಲ್ಸ್ ಉದ್ಯಮಕ್ಕೂ ಹೊಡೆತ ಬಿದ್ದಿದೆ. ಕೋಟಿಗಟ್ಟಲೆ ಬೆಲೆಯುಳ್ಳ ಕಾರ್ಗಳ ಆದಾಯವೀಗ ಸಾವಿರದಷ್ಟೂ ಇಲ್ಲದಾಗಿದೆ. ಬೆಂಗಳೂರಲ್ಲಿನಲ್ಲಿ ಐಷಾರಾಮಿ ಕಾರ್ಗಳನ್ನ ಹೊಂದಿದ 750ಕ್ಕೂ ಹೆಚ್ಚು ಟ್ರಾವೆಲ್ ಏಜೆನ್ಸಿಗಳಿವೆ.
20 ಸಾವಿರ ಐಶಾರಾಮಿ ಕಾರ್ಗಳು ಹಾಗೂ 2 ಸಾವಿರ ಅತ್ಯಂತ ಐಶಾರಾಮಿ ಕಾರ್ಗಳಿವೆ. ಸದ್ಯ ಕೊರೊನಾದಿಂದಾಗಿ ಕಾರ್ಪೋರೆಟ್ ಕಂಪನಿಗಳು ವರ್ಕ್ ಫ್ರಂ ಹೋಮ್, ವಿಮಾನ ಹಾರಾಟ ರದ್ದು, ಅಂತರಾಷ್ಟ್ರೀಯ ಮಟ್ಟದ ಕಾರ್ಯಕ್ರಮಗಳು ನಡೆಯದ ಹಿನ್ನೆಲೆ, ಟ್ರಾವೆಲ್ಸ್ ಉದ್ಯಮ ಸಂಕಷ್ಟದಲ್ಲಿ ಸಿಲುಕಿದೆ. ಕಾರ್ ಗಳಿಂದ ಆದಾಯವೂ ಇಲ್ಲದೇ, ಮಾರಲು ಆಗದೇ ಮಾಲಿಕರ ಪರದಾಡುವ ಪರಿಸ್ಥಿತಿ ಉದ್ಭವವಾಗಿದೆ.
ಫಾರಿನ್ ಡೆಲಿಗೇಟ್ಸ್ ಬಂದಾಗ ಸೇವೆ ನೀಡುತ್ತಿದ್ದ ಆಡಿ, ಬಿಎಂಡಬ್ಲ್ಯೂ , ಫಾರ್ಚುನರ್, ಬೆಂಜ್, ರೋಲ್ಸ್ ರಾಯ್ಸ್ ಸೇರಿದಂತೆ ಹಲವು ಐಶಾರಾಮಿ ಕಾರ್ ಗಳು ಬಾಡಿಗೆಯಿಲ್ಲದೆ ನಿಂತಲ್ಲೆ ನಿಂತಿವೆ. ಸುಮಾರು 50 ಸಾವಿರಕ್ಕೂ ಹೆಚ್ವಿನ ನೌಕರರ ಕುಟುಂಬಗಳು ಈ ಟ್ರಾವೆಲ್ಸ್ ಗಳನ್ನೇ ಅವಲಂಬಿಸಿದ್ದು, ಸದ್ಯ ಆರ್ಥಿಕ ಸಂಕಷ್ಟದಿಂದಾಗಿ ಸರ್ಕಾರ ಇತ್ತ ಗಮನ ಹರಿಸಬೇಕು ಎನ್ನುತ್ತಿದ್ದಾರೆ.
Comments are closed.