
ಕೋಲಾರ: ಪ್ರಿಯಕರನಿಂದ ಹಾಡುಹಗಲಲ್ಲೇ ಅಪಹರಣವಾಗಿದ್ದ ಯುವತಿ ತುಮಕೂರಿನಲ್ಲಿ ಶುಕ್ರವಾರ ಪತ್ತೆಯಾಗಿದ್ದಾಳೆ.
ತುಮಕೂರಿನಲ್ಲಿ ಪೊಲೀಸರನ್ನು ನೋಡಿ ಯುವತಿ ಹಾಗೂ ಕಾರನ್ನು ಅಲ್ಲಿಯೇ ಬಿಟ್ಟು ಯುವಕ ಪರಾರಿಯಾಗಿದ್ದಾನೆ. ಸದ್ಯ ಯುವತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಕಿಡ್ನಾಪ್ ಮಾಡಿದ್ದ ಹುಡುಗರಿಗೆ ಹುಡುಕಾಟ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ ಏನು?
ಕೋಲಾರದ ಕಿಲಾರಿಪೇಟೆಯ ಶಿವ ಎಂಬ ಯುವಕ ಕೋಲಾರ ನಗರದ ಎಂಬಿ ರಸ್ತೆಯಲ್ಲಿರುವ ರೆಡ್ಡಿ ಎಲೆಕ್ಟ್ರಿಕಲ್ ಬಳಿ ಗುರುವಾರ ಮಧ್ಯಾಹ್ನ 12 ಗಂಟೆ ಹೊತ್ತಿಗೆ ಯುವತಿಯನ್ನು ಕಿಡ್ನಾಪ್ ಮಾಡಿದ್ದ. ಶಿವ ಕಳೆದ ಹಲವು ವರ್ಷಗಳಿಂದ ದೇವಾಂಗಪೇಟೆಯ ಸಿರಿಶಾ ಎಂಬ ಯುವತಿಯನ್ನು ಪ್ರೀತಿಸುತ್ತಿದ್ದ. ಆದರೆ ಇತ್ತೀಚೆಗೆ ಯುವತಿ ಪಾಲಕರು ಇವರಿಬ್ಬರ ಪ್ರೀತಿಗೆ ನಿರಕಾರಿಸಿದ್ದರು. ಆದರೆ ಸಿರಿಶಾಳನ್ನು ಬಿಟ್ಟುಕೊಡಲು ಸಿದ್ಧನಿಲ್ಲದ ಶಿವ, ಇನ್ನೋವಾ ಕಾರಿನಲ್ಲಿ ಬಂದು, ಯುವತಿಯನ್ನು ಪಕ್ಕಾ ಸಿನಿಮೀಯ ಸ್ಟೈಲ್ನಲ್ಲೇ ಅಪಹರಿಸಿದ್ದ.
ಯುವತಿಯ ಜತೆಗಿದ್ದ ಪುಟ್ಟ ಬಾಲಕಿಯ ಚೀರಾಟದಿಂದ ಸ್ಥಳೀಯರು ಬಂದು ಸುತ್ತುವರೆದರು. ಆದರೆ ಅಷ್ಟರಲ್ಲಾಗಲೇ ಶಿವ ಆಕೆಯನ್ನು ಹೊತ್ತೊಯ್ದಿದ್ದ. ಯುವತಿಯನ್ನು ಕಿಡ್ನಾಪ್ ಮಾಡಿದ ದೃಶ್ಯ ರೆಡ್ಡಿ ಎಲೆಕ್ಟ್ರಿಕಲ್ನಲ್ಲಿ ಅಳವಡಿಸಿದ್ದ, ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಆ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟೆ ವೈರಲ್ ಆಗಿದ್ದು, ಸ್ಥಳಕ್ಕೆ ಗಲ್ಪೇಟೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದರು.
Comments are closed.