ಕರ್ನಾಟಕ

ದೇಶವೆಂದರೆ ಮಣ್ಣಲ್ಲ, ಅಲ್ಲಿನ ಜನ; ಕುಮಾರಸ್ವಾಮಿ

Pinterest LinkedIn Tumblr


ಬೆಂಗಳೂರು (ಆಗಸ್ಟ್‌ 14); ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಜನರು, ಬಹುಸಂಸ್ಕೃತಿಯ ಮೆರವಣಿಗೆ, ಭಾವೈಕ್ಯದ ದೀವಿಗೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್‌.ಡಿ. ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ.

ಭಾರತ ನಾಳೆ 74ನೇ ಸ್ವಾತಂತ್ಯ್ರ ದಿನಾಚರಣೆಯನ್ನು ಆಚರಿಸಲಿದೆ. ದೇಶದಾದ್ಯಂತ ಸ್ವಾತಂತ್ಯ್ರ ದಿನಾಚರಣೆಗಾಗಿ ಈಗಾಗಲೇ ಸಿದ್ದತೆಗಳು ಆರಂಭವಾಗಿವೆ. ಕೊರೋನಾ ಭೀತಿಯ ನಡುವೆಯೂ ಈ ವರ್ಷದ ಸ್ವಾತಂತ್ಯ್ರದ ದಿನವನ್ನು ಸಂಭ್ರಮದಿಂದ ಆಚರಿಸಲು ಕೇಂದ್ರ ಸರ್ಕಾರವೂ ನಿರ್ಧರಿಸಿದೆ.

ಈ ನಡುವೆ ಸ್ವಾತಂತ್ಯ್ರ ದಿನಕ್ಕೆ ಟ್ವೀಟ್‌ ಮೂಲಕ ಶುಭಕೋರಿರುವ ಕುಮಾರಸ್ವಾಮಿ, “ಅಸಂಖ್ಯಾತ ಜನರ ನಿಸ್ವಾರ್ಥ ತ್ಯಾಗ – ಬಲಿದಾನಗಳ ಫಲವೇ ಬಹುತ್ವದ ಆತ್ಮವುಳ್ಳ ಭಾರತಕ್ಕೆ ದಕ್ಕಿದ ಸ್ವಾತಂತ್ರ್ಯ. ಇದನ್ನು ಜತನದಿಂದ ಕಾಯ್ದುಕೊಂಡು ಹೋಗುವುದೇ ಅವರಿಗೆ ನಾವು ಸಲ್ಲಿಸಬಹುದಾದ ನಿಜ ಗೌರವ ಮತ್ತು ಅರ್ಥ ಪೂರ್ಣ ಸ್ವಾತಂತ್ರ್ಯ ಸಂಭ್ರಮವಾಗಲಿದೆ” ಎಂದಿದ್ದಾರೆ.

ಮತ್ತೊಂದು ಟ್ವೀಟ್‌ನಲ್ಲಿ”ದೇಶವೆಂದರೆ ಕೇವಲ ಮಣ್ಣಲ್ಲ, ದೇಶವೆಂದರೆ ಅಲ್ಲಿನ ಜನರು, ಬಹುಸಂಸ್ಕೃತಿಯ ಮೆರವಣಿಗೆ, ಭಾವೈಕ್ಯದ ದೀವಿಗೆ”. ಸಮಸ್ತ ನಾಗರಿಕರಿಗೆ 74ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು. ವ್ಯಕ್ತಿಗತ ಅಂತರದೊಂದಿಗೆ ಈ ಬಾರಿಯ ಸ್ವಾತಂತ್ರ್ಯೋತ್ಸವವನ್ನು ಸಂಭ್ರಮಿಸೋಣ” ಎಂದು ಕರೆ ನೀಡಿದ್ದಾರೆ.

Comments are closed.