ಕರ್ನಾಟಕ

ಡ್ರೋನ್​​ ಪ್ರತಾಪ್​​ ವಿರುದ್ಧ ಮತ್ತೊಂದು ದೂರು

Pinterest LinkedIn Tumblr


ಬೆಂಗಳೂರು(ಆ.03): ಇತ್ತೀಚೆಗೆ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ತಲೆಮರೆಸಿಕೊಂಡಿದ್ದ ಡ್ರೋನ್ ಪ್ರತಾಪ್​ ಬೆಂಗಳೂರು ಪೊಲೀಸರು ಮೈಸೂರಿನಲ್ಲಿ ಬಂಧಿಸಿದ್ದರು. ಸಾಂಸ್ಕೃತಿಕ ನಗರಿ ಮೈಸೂರಿನಿಂದ ಡ್ರೋನ್​​ ಪ್ರತಾಪ್​​​​​ನನ್ನು ಬೆಂಗಳೂರಿಗೆ ಕರೆ ತಂದಿದ್ದ ಪೊಲೀಸರು ಸ್ಟಾರ್​​ ಹೋಟೆಲ್​​ವೊಂದರಲ್ಲಿ ಕ್ವಾರಂಟೈನ್​​ ಮಾಡಿದ್ದರು. ಇಂದಿಗೆ ಕ್ವಾರಂಟೈನ್​​ ಅವಧಿ ಮುಗಿದಿದೆ. ಹೀಗಾಗಿ ಸಿವಿಲ್ ಡಿಫೆನ್ಸ್ ಕಮಾಂಡೆಂಟ್ ಚೇತನ್ ಕುಮಾರ್​​​ ಡ್ರೋನ್​​ ಪ್ರತಾಪ್​​ ವಿಚಾರಣೆ ನಡೆಸಿದರು.

ಡ್ರೋನ್​​ ಪ್ರತಾಪ್​​ ವಿಚಾರಣೆ ವೇಳೆ ಚೇತನ್​​ ಕುಮಾರ್​​ ಕ್ವಾರಂಟೈನ್​​ ಉಲ್ಲಂಘಿಸಿದ ಬಳಿಕ ಬೆಂಗಳೂರಿನಿಂದ ಮೈಸೂರಿಗೆ ಹೋಗಲು ಯಾರು ಸಹಕರಿಸಿದರು ಎಂಬ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಚೇತನ್​​ ಕುಮಾರ್​ ಅವರಿಗೆ ವಿಚಾರಣೆಗೆ ಸರಿಯಾಗಿ ಸಹಕರಿಸದೇ ಡ್ರೋನ್​​ ಪ್ರತಾಪ್​ ಉಡಾಫೆ ತೋರಿದ್ದಾನೆ.

ವಿಚಾರಣೆ ಬಳಿಕ ಸುದ್ದಿಗಾರರೊಂದಿಗೆ ಮಾತಾಡಿದ ಸಿವಿಲ್ ಡಿಫೆನ್ಸ್ ಕಮಾಂಡೆಂಟ್ ಚೇತನ್ ಕುಮಾರ್​​, ಡ್ರೋನ್​​ ಪ್ರತಾಪ್​​ ಹೋಮ್​​ ಕ್ವಾರಂಟೈನ್​​ ನಿಯಮ ಉಲ್ಲಂಘಿಸಿ ಯಾವುದೇ ಟಿವಿ ಕಾರ್ಯಕ್ರಮಕ್ಕೆ ಹೋಗಿದ್ದರು. ಹಾಗಾಗಿ ಇವರನ್ನು ಬಂಧಿಸಿ ಸ್ಟಾರ್​​ ಹೋಟೆಲ್​​ವೊಂದರಲ್ಲಿ ಸಾಂಸ್ಥಿಕ ಕ್ವಾರಂಟೈನ್​​ ಮಾಡಿದ್ದೆವು. ಹೋಟೆಲ್​​​ನಲ್ಲಿ ಕ್ವಾರಂಟೈನ್​​ ಆದಾಗಲೂ ಇವರು ನಿಯಮ ಉಲ್ಲಂಘನೆ ಮಾಡಿದ್ದಾರೆ. ಆದ್ದರಿಂದ ಅಶೋಕ ನಗರ ಪೊಲೀಸ್​ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಿಸಿದ್ದೇವೆ ಎಂದರು.

ಇನ್ನು, ತಾನು ಕ್ವಾರಂಟೈನ್​​ ಆಗುದ್ದ ಸ್ಟಾರ್​ ಹೋಟೆಲ್​​ಗೆ ತನ್ನ ವಕೀಲರನ್ನು ಕರೆಸಿಕೊಂಡು ಡ್ರೋನ್​ ಪ್ರತಾಪ್​​​ 2 ಗಂಟೆಗಳ ಕಾಲ ಚರ್ಚಿಸಿದ್ದಾರೆ. ಈ ಮೂಲಕ ಮತ್ತೊಮ್ಮೆ ಕ್ವಾರಂಟೈನ್​​ ನಿಮಯ ಉಲ್ಲಂಘಿಸಿದ್ದಾರೆ ಎನ್ನಲಾಗಿದೆ.

ಸದ್ಯ ಡ್ರೋನ್​ ಪ್ರತಾಪ್​​​ ಕ್ವಾರಂಟೈನ್​ ಅವಧಿ ಮುಗಿದಿದೆ. ಈಗಾಗಲೇ ಚೇತನ್​​ ಕುಮಾರ್​​ ಅವರು ಕೂಡ ಡ್ರೋನ್​​ ಪ್ರತಾಪ್​​ ವಿಚಾರಣೆ ಮಾಡಿದ್ದಾರೆ. ಇವರ ಆದೇಶದ ಮೇರೆಗೆ ತಲಘಟ್ಟಪುರ ಪೊಲೀಸರು ಡ್ರೋನ್​​ ಪ್ರತಾಪ್​​ನನ್ನು ವಶಕ್ಕೆ ಪಡೆಯಲು ಮುಂದಾಗಿದ್ಧಾರೆ. ಈ ಮುನ್ನ ಮತ್ತೊಮ್ಮೆ ಡ್ರೋನ್​ ಪ್ರತಾಪ್​​ ಕೊರೋನಾ ಟೆಸ್ಟ್​ ಮಾಡಿಸಲಾಗಿದೆ. ರಿಪೋರ್ಟ್​ ನೆಗಿಟಿವ್​​ ಬಂದಿದೆ.

ಡ್ರೋನ್ ಪ್ರತಾಪ್ ಕಳೆದ ತಿಂಗಳು ಜುಲೈ 15 ರಂದು ಹೈದರಾಬಾದ್​​ನಿಂದ ಬೆಂಗಳೂರಿಗೆ ಬಂದಿದ್ದ. ಹೊರ ರಾಜ್ಯದಿಂದ ಬಂದ ಹಿನ್ನೆಲೆಯಲ್ಲಿ ನಗರದ ತಲಘಟ್ಟಪುರದ ಅಪಾರ್ಟ್ ಮೆಂಟ್​ವೊಂದರಲ್ಲಿ ಪ್ರತಾಪ್ ಹೋಂ ಕ್ವಾರಂಟೈನ್ ಆಗಿದ್ದ. ನಿಯಮದ ಪ್ರಕಾರ ಆತ 14ದಿನಗಳ ಕಾಲ ಕ್ವಾರಂಟೈನ್​ ಆಗಬೇಕಿತ್ತು. ಆದರೆ, ಕ್ವಾರಂಟೈನ್ ಆದ ಮರುದಿನವೇ ಖಾಸಗಿ ಚಾನೆಲ್​ನ ಸಂದರ್ಶನದಲ್ಲಿ ಪ್ರತಾಪ್ ಪಾಲ್ಗೊಂಡಿದ್ದ.

ಪ್ರತಾಪ್​ ಕ್ವಾರಂಟೈನ್ ನಿಯಮಗಳ ಸ್ಪಷ್ಟ ಉಲ್ಲಂಘನೆ ಮಾಡಿದ್ದಾನೆ ಎನ್ನುವುದು ಸ್ಪಷ್ಟವಾಗಿದೆ. ಹೀಗಾಗಿ, ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಬಿಬಿಎಂಪಿ ಅಧಿಕಾರಿಗಳು ದೂರು ದಾಖಲಿಸಿದ್ದಾರೆ. ಎಫ್ಐಆರ್ ದಾಖಲಿಸಿಕೊಂಡಿರುವ ಪೊಲೀಸರು ಡ್ರೋನ್ ಪ್ರತಾಪ್​ಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

Comments are closed.