
ಬೆಂಗಳೂರು(ಆ.03): ರಾಜ್ಯ ಪೊಲೀಸ್ ಇಲಾಖೆಗೆ ಮೇಜರ್ ಸರ್ಜರಿ ಮಾಡಿರುವ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ, 17 ಮಂದಿ ಐಪಿಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಐಪಿಎಸ್ ಅಧಿಕಾರಿ ಎಮ್. ಎನ್ ಅನುಚೇತ್ ಅವರನ್ನು ವೈಟ್ ಫೀಲ್ಡ್ ವಿಭಾಗದಿಂದ ಕೇಂದ್ರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಹಾಗೆಯೇ ರೋಹಿಣಿ ಕಟೋಚ್ ಅವರನ್ನ ದಕ್ಷಿಣ ವಿಭಾಗದಿಂದ ಸಿಐಡಿಗೆ ವರ್ಗಾವಣೆ ಮಾಡಿದೆ.
ಇನ್ನು, ಹರೀಶ್ ಪಾಂಡೆಯವರನ್ನು ದಕ್ಷಿಣ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ವೈಟ್ ಫೀಲ್ಡ್ ವಿಭಾಗಕ್ಕೆ ಡಿ. ದೇವರಾಜು ವರ್ಗಾವಣೆ ಮಾಡಲಾಗಿದೆ. ಸಂಜೀವ್ ಪಾಟೀಲ್ ಪಶ್ಚಿಮ ವಿಭಾಗಕ್ಕೆ ವರ್ಗಾವಣೆ ಮಾಡಿ ನೇಮಕ ಮಾಡಲಾಗಿದೆ.
ಪಶ್ಚಿಮ ವಿಭಾಗ ಡಿಸಿಪಿ ರಮೇಶ್ ಬಾನೋತ್ ಸಿಐಡಿಗೆ ವರ್ಗಾವಣೆ ಮಾಡಿದ್ದಾರೆ. ಉತ್ತರ ವಿಭಾಗ ಡಿಸಿಪಿ ಶಶಿಕುಮಾರ್ ಸ್ಥಳಕ್ಕೆ ಧರ್ಮೇಂದರ್ ಕುಮಾರ್ ಮೀನಾ ವರ್ಗಾವಣೆ ಮಾಡಿ ಆದೇಶಿಸಲಾಗಿದೆ.
ವರ್ಗಾವಣೆಯಾದ ಅಧಿಕಾರಿಗಳ ಲೀಸ್ಟ್ ಹೀಗಿದೆ…
ಉಮೇಶ್ ಕುಮಾರ್-ಎಡಿಜಿಪಿ, ಸಿಐಡಿ, ಆರ್ಥಿಕ ಅಪರಾಧ
ರೂಪಾ ಡಿ – ಕಾರ್ಯದರ್ಶಿ (ಪಿಸಿಎಎಸ್) ಗೃಹ ಇಲಾಖೆ
ಎನ್. ಶಶಿಕುಮಾರ್- ಎಸ್ಪಿ, ವೈರ್ಲೆಸ್, ಬೆಂಗಳೂರು
ಡಾ. ರೋಹಿಣಿ ಕಟೋಚ್- ಎಸ್ಪಿ, ಸಿಐಡಿ
ಎಂ.ಎನ್. ಅನುಚೇತ್- ಡಿಸಿಪಿ, ಕೇಂದ್ರ ವಿಭಾಗ, ಬೆಂಗಳೂರು ನಗರ
ಬಿ. ರಮೇಶ್- ಎಸ್ಪಿ, ಸಿಐಡಿ
ಈಡಾ ಮಾರ್ಟಿನ್ ಮಾರ್ಬನ್ಯಾಂಗ್ – ಎಸ್ಪಿ, ಎಎನ್ಎಫ್, ಕಾರ್ಕಳ
ನಿಕ್ಕಂ ಪ್ರಕಾಶ್ ಅಮೃತ್- ಎಸ್ಪಿ, ರಾಯಚೂರು
ಇಲಕ್ಕಿಯಾ ಕರುಣಾಗರನ್ – ಎಸ್ಪಿ, ಕೆಜಿಎಫ್
ಧರ್ಮೇಂದರ್ ಕುಮಾರ್ ಮೀನಾ- ಡಿಸಿಪಿ, ಉತ್ತರ ವಿಭಾಗ, ಬೆಂಗಳೂರು ನಗರ
ಡಾ. ಸುಮನ್ ಪೆನ್ನೇಕರ್- ಉಪ ನಿರ್ದೇಶಕಿ, ಕರ್ನಾಟಕ ಪೊಲೀಸ್ ಅಕಾಡೆಮಿ, ಮೈಸೂರು
ಹರೀಶ್ ಪಾಂಡೆ- ಡಿಸಿಪಿ, ದಕ್ಷಿಣ ವಿಭಾಗ ಬೆಂಗಳೂರು ನಗರ
ಮೊಹಮ್ಮದ್ ಸುಜೀತ- ಡಿಸಿಪಿ, ಸಿಎಆರ್ ಬೆಂಗಳೂರು
ಸಿಮಿ ಮರಿಯಂ ಜಾರ್ಜ್- ಎಸ್ಪಿ, ಕಲ್ಬುರ್ಗಿ
ಡಾ. ಸಿ.ಬಿ. ವೇದಮೂರ್ತಿ- ಎಸ್ಪಿ, ಗುಪ್ತಚರ, ಬೆಂಗಳೂರು
ಡಿ. ದೇವರಾಜ- ಡಿಸಿಪಿ, ವೈಟ್ ಫೀಲ್ಡ್, ಬೆಂಗಳೂರು
ಸಂಜೀವ್ ಎಂ. ಪಾಟೀಲ್- ಡಿಸಿಪಿ, ಪಶ್ಚಿಮ ವಿಭಾಗ, ಬೆಂಗಳೂರು ನಗರ
Comments are closed.