ಕರ್ನಾಟಕ

ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ; ಪ್ರಮೋದ್ ಮುತಾಲಿಕ್

Pinterest LinkedIn Tumblr


ಗದಗ(ಜುಲೈ.30): ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಅವರು ಈ ಮಟ್ಟಕ್ಕೆ ಬೆಳೆಯಬೇಕಾದ್ರೆ ಸಾಕಷ್ಟು ಪರಿಶ್ರಮವನ್ನು ಪಟ್ಟಿದ್ದಾರೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ. ಗದಗದಲ್ಲಿ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪನವರು ಕೋವಿಡ್- 19 ಪರಿಸ್ಥಿತಿಯನ್ನು ಬಹಳ ಚೆನ್ನಾಗಿ ನಿಭಾಯಿಸಿದ್ದಾರೆ. ಆದರೆ, ಇಂತಹ ಪರಿಸ್ಥಿತಿಯಲ್ಲಿ ರಾಜಕೀಯ ಮಾಡುವುದು ಸರಿಯಲ್ಲ. ಈಗ ನಾಡಿನ ಜನರು ಕೊರೋನಾ ಆತಂಕ ಹಾಗೂ ಭಯದಲ್ಲಿದ್ದಾರೆ. ಇಂಥ ಸಮಯದಲ್ಲಿ ರಾಜಕೀಯ ಬೇಳೆ ಬೇಯಿಸಿಕೊಳ್ಳುವುದು ಸರಿಯಲ್ಲ ಎಂದರು

ಬಿಜೆಪಿ ಪಕ್ಷದಲ್ಲಿ ರಾಜಕೀಯ ಪ್ರಮುಖ ಸ್ಥಾನಮಾನ ಸಿಗದಿರುವ ಕುರಿತು ಪ್ರಮೋದ್ ಮುತಾಲಿಕ್ ಮಾತನಾಡಿ, ರಾಜಕೀಯ ಪ್ರವೇಶ ಅಭಿಲಾಷೆ ವ್ಯಕ್ತಪಡಿಸಿದ್ದೆ, ಆದರೆ, ಆಗಲಿಲ್ಲ. ರಾಜಕೀಯ ಅಧಿಕಾರದಿಂದ ಹಿಂದುತ್ವಕ್ಕೆ ಬಲ ತುಂಬುವುದು ನನ್ನ ಅಜೆಂಡಾ ಇತ್ತು. ಆದರೆ, ಇವತ್ತಿನ ರಾಜಕಾರಣದಲ್ಲಿ ಭ್ರಷ್ಟರು, ದುಷ್ಟರು, ಲೂಟಿಕೋರರು ತುಂಬಿಕೊಂಡಿದ್ದಾರೆ ಎಂದು ತಿಳಿಸಿದರು.

ನಮ್ಮಂಥ ಪ್ರಾಮಾಣಿಕ, ಹಿಂದೂವಾದಿ ಹೋರಾಟಗಾರು ಬೇಡವಾಗಿದೆ. ಹೀಗಾಗಿ ನಾನು ರಾಜಕೀಯದಿಂದ ದೂರ ಉಳಿದಿದ್ದೇನೆ. ರಾಜಕಾರಣವೇ ಕುಲಗೆಟ್ಟು ಹೋಗಿದೆ ಎಂದರು

ಭಾರತ ಯುದ್ಧದ ಸಮಯದಲ್ಲಿ ಮೊದಲು ಅಕ್ರಮಣ ಮಾಡುವುದಿಲ್ಲ ಬದಲಾಗಿ ವೈರಿ ರಾಷ್ಟ್ರ ಆಕ್ರಮಣ ಮಾಡಿದ್ರೆ ಮಾತ್ರ ಯುದ್ದವನ್ನು ಮಾಡುತ್ತದೆ. ಹಾಗೇ ವಿರೋಧಿಗಳು ತಕ್ಕ ಪಾಠವನ್ನು ಕಲಿಯುತ್ತಾರೆ. ಈವಾಗ ಚೀನಾ ಅತಿಕ್ರಮಣ ಮಾಡಿದ್ರೆ ನಾವು ತಕ್ಕ ಪಾಠವನ್ನು ಕಲಿಸುತ್ತೇವೆ. ಹಿಂದಿನ ಕಾಂಗ್ರೆಸ್ ಸರಕಾರ ಇದಲ್ಲ. ಈವಾಗ ಇರುವುದು ಪ್ರಧಾನಿ ನರೇಂದ್ರ ಮೋದಿಯವರ ಸರ್ಕಾರ. ಚೀನಾ ಅಲ್ಲದೇ ಯಾರೆ ಬಂದರು ಉತ್ತರ ಕೊಡುವ ತಾಕತ್ತು ನಮ್ಮ ದೇಶಕ್ಕೆ ಇದೆ ಎಂದರು.

ಕೊಪ್ಪಳ ಜಿಲ್ಲೆಯ ಆಂಜನಾದ್ರಿ ಬೆಟ್ಟದಿಂದ ಬೆಳ್ಳಿ ಲೇಪಿತ ಶಿಲೆ ಹಾಗೂ ಪವಿತ್ರ ಜಲವನ್ನು ತೆಗೆದುಕೊಂಡು ಗದಗ ನಗರಕ್ಕೆ ಆಗಮಿಸಿದರು.‌ ಜೋಡು ಹನುಮಾನ ದೇವಸ್ಥಾನದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು.

ಅಯೋಧ್ಯೆಯಲ್ಲಿ ನಿರ್ಮಾಣ ಮಾಡಲಾಗುತ್ತಿರುವ ರಾಮ ಮಂದಿರ ದೇವಸ್ಥಾನಕ್ಕೆ ಆಂಜನಾದ್ರಿ ಬೆಟ್ಟದಿಂದ ಬೆಳ್ಳಿ ಲೇಪಿತ ಶಿಲೆಯನ್ನು ಕಳಿಸಲಾಗುತ್ತಿದೆ. ಆಂಜನಾದ್ರಿ ಬೆಟ್ಟ ಹನುಮಂತ ಜನಿಸಿದ ಭೂಮಿ ಹಾಗಾಗಿ ಹನುಮನ ಜನ್ಮಸ್ಥಳದಿಂದ ರಾಮ ಜನ್ಮಸ್ಥಳ ಅಯೋಧ್ಯೆ ಕಳುಹಿಸಿ ಕೊಡಲಾಗುತ್ತಿದೆ ಎಂದರು.

Comments are closed.