ಕರ್ನಾಟಕ

ಮುರುಗೇಶ್ ನಿರಾಣಿಯಿಂದ ಹಿಂದೂ ದೇವತೆಗಳ ಬಗ್ಗೆ ಅವಹೇಳ; ಪೊಲೀಸ್ ಮಹಾ ನಿರ್ದೇಶಕರಿಗೆ ನೀಡಿದ ಸ್ಪಷ್ಟನೆ ನೋಡಿ…

Pinterest LinkedIn Tumblr

ಬೆಂಗಳೂರು: ಸನಾತನ ಧರ್ಮದ ನಂಬಿಕೆಗಳನ್ನು ಅವಹೇಳನ ಮಾಡಿ ವಾಟ್ಸಪ್ ಮೆಸ್ಸೇಜ್ ಮಾಡಿದ ಸಂಬಂಧ ಸಾಮಾಜಿಕ ಕಾರ್ಯಕರ್ತರ ಹನುಮೇಗೌಡರ ದೂರಿಗೆ ಸಂಬಂಧಿಸಿದಂತೆ ಮಾಜಿ ಸಚಿವ ಮುರುಗೇಶ್ ನಿರಾಣಿ ಪೊಲೀಸ್ ಮಹಾ ನಿರ್ದೇಶಕ ಪ್ರವೀಣ್ ಸೂದ್ ಅವರಿಗೆ ಸ್ಪಷ್ಟನೆ ನೀಡಿದ್ದಾರೆ.

ಸನಾತನ ಧರ್ಮದ ನಂಬಿಕೆಗಳನ್ನು ಅವಹೇಳನ ಮಾಡಿ ಬಿಜೆಪಿ ನಾಯಕ ಮುರುಗೇಶ್ ನಿರಾಣಿ ನಂಬರ್​ನಿಂದ ಹೊರಬಿದ್ದ ವಾಟ್ಸ್ಯಾಪ್ ಮೆಸೇಜ್​ಗೆ ಸಂಬಂಧಿಸಿದಂತೆ ಸಾಮಾಜಿಕ ಕಾರ್ಯಕರ್ತ ಎನ್. ಹನುಮೇಗೌಡ ನಿರಾಣಿ ವಿರುದ್ಧ ದೂರು ದಾಖಲಿಸಿದ್ದರು. ದೂರಿಗೆ ಸಂಬಂಧಿಸಿದಂತೆ ಮುರುಗೇಶ್ ನಿರಾಣಿ ಡಿಐಜಿ ಪ್ರವೀಣ್ ಸೂದ್ ಅವರಿಗೆ ಸ್ಪಷ್ಟನೆ ನೀಡಿದ್ದಾರೆ.

ಪೊಲೀಸ್ ಮಹಾ ನಿರ್ದೇಶಲಕರಿಗೆ ಪತ್ರ ಬರೆದು ಸ್ಪಷ್ಟಣೆ ನೀಡಿರುವ ನಿರಾಣಿ, ಜುಲೈ 21 ರಂದು ನನ್ನ ನಂಬರ್​ನಿಂದ ನನ್ನ ಆಪ್ತ ಕಾರ್ಯದರ್ಶಿ ಮುರುಗೇಶ್ ನಿರಾಣಿ ಮಿಡಿಯಾ ಎಂಬ ವಾಟ್ಸ್ಯಾಪ್ ಗ್ರೂಪ್​ಗೆ ಕಣ್ತಪ್ಪಿನಿಂದ ಯಾರೋ ಕಳುಹಿಸಿದ ಸಂದೇಶವನ್ನು ಮರು ಫಾರ್ವರ್ಡ್ ಮಾಡಿದ್ದಾರೆ. ಈ ಅಚಾತುರ್ಯ ತಮ್ಮ ಗಮನಕ್ಕೆ ಬಂದ ತಕ್ಷಣ ಸಂದೇಶವನ್ನು ಡಿಲೀಟ್ ಮಾಡಲಾಗಿದೆ. ಈ ಸಂದೇಶದ ಬಗ್ಗೆ ಕೆಲವು ಮಾಧ್ಯಮಗಳು ಸುದ್ದಿ ಪ್ರಚಾರ ಮಾಡುತ್ತಿರುವುದು ಗಮನಕ್ಕೆ ಬಂದಿದೆ. ತಕ್ಷಣ ನಾನು ರಾಜ್ಯದ ಜನತೆಯ ಕ್ಷಮೆ ಕೋರಿ ಮಾಧ್ಯಮ ಪ್ರಕಟಣೆ ಬಿಡುಗಡೆ ಮಾಡಿದ್ದೇನೆ ಎಂದು ಹೇಳಿದ್ದಾರೆ.

Comments are closed.