ಕರ್ನಾಟಕ

ಅಚಾತುರ್ಯದಿಂದ ಅಪ್ರಾಪ್ತ ಬಾಲಕಿಯಿಂದ ಅಪ್ಪನ ಹತ್ಯೆ

Pinterest LinkedIn Tumblr


ಬೆಂಗಳೂರು; ಅಚಾರ್ತದಿಂದ ಅಪ್ರಾಪ್ತ ಬಾಲಕಿಯಿಂದಲೇ ತಂದೆಯ ಕೊಲೆಯಾದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ಬುಧವಾರ ಮಧ್ಯರಾತ್ರಿ ನಡೆದಿದೆ.

ನಗರದ ಮೈಕೋ ಲೇಔಟ್​ನ ಸಪ್ತಿಕ್ ಬ್ಯಾನರ್ಜಿ (45) ಮೃತ ದುರ್ದೈವಿ ಎಂದು ಗುರುತಿಸಲಾಗಿದೆ. ಮೈಕೋ ಲೇಔಟ್​ನ ಮಾರುತಿ ಪ್ಯಾರಡೈಸ್ ಅಪಾರ್ಟ್ಮೆಂಟ್​ನಲ್ಲಿ ಸಪ್ತಿಕ್ ಬ್ಯಾನರ್ಜಿ 15 ವರ್ಷದ ಮಗಳು ಹಾಗೂ 12 ವರ್ಷದ ಮಗನ ಜೊತೆ ವಾಸವಾಗಿದ್ದರು.

ಮೂರ್ನಾಲ್ಕು ವರ್ಷದ ಹಿಂದೆ ಸಪ್ತಿಕ್ ಬ್ಯಾನರ್ಜಿ ಪತ್ನಿ ಮೃತಪಟ್ಟಿದ್ದರು. ಆ ನೋವಿನಲ್ಲಿದ್ದ ಸಪ್ತಿಕ್ ಖಿನ್ನತೆಗೊಳಗಾಗಿ, ಪ್ರತಿನಿತ್ಯ ಕುಡಿದು ಮನೆಗೆ ಬರುತ್ತಿದ್ದರು. ಹೀಗೆ ಕುಡಿದು ಬಂದು ಮಕ್ಕಳ ಜೊತೆ ಗಲಾಟೆ ಮಾಡ್ತಿದ್ದರು. ಪ್ರತಿನಿತ್ಯ ಗಲಾಟೆ ಮಾಡಿ ಮಧ್ಯರಾತ್ರಿ ಆದರೂ ಕುಡಿದು ಹಲ್ಲೆ ಕೂಡ ಮಾಡುತ್ತಿದ್ದರು.

ಪಿಯಾನೋ ಕೀ ಬೋರ್ಡ್ ವಾದಕನಾಗಿದ್ದ ಮೃತ ಸಪ್ತಿಕ್, ನೆನ್ನೆ ಮಧ್ಯರಾತ್ರಿಯಾದರೂ ಕುಡಿದು ಜೋರಾಗಿ ಪಿಯಾನೋ ನುಡಿಸ್ತಿದ್ದರು. ಆಗ ಮಧ್ಯರಾತ್ರಿಯಲ್ಲಿ ಪಿಯಾನೋ ನುಡಿಸದಂತೆ ಮಗಳು ಅಕ್ಷೇಪ ವ್ಯಕ್ತಪಡಿಸಿದ್ದಾಳೆ. ಇದರಿಂದ ಕುಪಿತನಾದ ಸಪ್ತಿಕ್ ಮಗಳನ್ನು ಚಾಕುವಿನಿಂದ ತಿವಿಯಲು ಮುಂದಾಗಿದ್ದಾನೆ. ಇದರಿಂದ ತಪ್ಪಿಸಿಕೊಳ್ಳಲು ಮಗಳು ತಂದೆಯನ್ನು ಜೋರಾಗಿ ತಳ್ಳಿದ್ದಾಳೆ. ಆಗ ಕಾಲು ಜಾರಿ ಬಿದ್ದ ಸಪ್ತಿಕ್​ಗೆ ಎದೆಗೆ ಚಾಕು ಚುಚ್ಚಿಕೊಂಡಿದೆ. ಬಳಿಕ ಆತ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಅಚಾನಕ್ಕಾಗಿ ಈ ಘಟನೆ ನಡೆದು ಹೋಗಿದೆ. ಮೈಕೋ ‌ಲೇಔಟ್ ಪೊಲೀಸ್ ಠಾಣೆಯಲ್ಲಿ 304 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

Comments are closed.