ಕರ್ನಾಟಕ

ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದಾಗಲೇ ಮಹಿಳೆ ಮತ್ತು ಯುವಕನನ್ನು ಕೊಚ್ಚಿ ಕೊಲೆ!

Pinterest LinkedIn Tumblr


ವಿಜಯಪುರ: ಅಲಿಯಾಬಾದ ಗ್ರಾಮದ ತೋಟದ ಮನೆಯಲ್ಲಿ ನಿನ್ನೆ ರಾತ್ರಿ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದ ವಿವಾಹಿತ ಮಹಿಳೆ ಮತ್ತು ಯುವಕನನ್ನು ಬರ್ಬರವಾಗಿ ಕೊಚ್ಚಿ ಹಾಕಲಾಗಿದೆ. ಮಹಿಳೆಯ ಅಪ್ರಾಪ್ತ ಮಗ ಮತ್ತು ಆಕೆಯ ತಂದೆಯೇ ಜೋಡಿ ಕೊಲೆ ಮಾಡಿದ್ದು, ಪೊಲೀಸರಿಗೆ ಶರಣಾಗಿದ್ದಾರೆ.

ಅಮರನಾಥ ಸೊಲ್ಲಾಪುರ(25) ಮತ್ತು ಸುನಿತಾ ತಳವಾರ(35 ) ಕೊಲೆಯಾದವರು. ಸುನಿತಾಳ ಪತಿ ವರ್ಷಗಳ ಹಿಂದೆ ಮೃತಪಟ್ಟಿದ್ದರು. ಆಕೆಯ ಜತೆ ಅಮರನಾಥ ಅನೇಕ ದಿನಗಳಿಂದ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಮಂಗಳವಾರ ರಾತ್ರಿ ಮಹಿಳೆಯ ಮನೆಗೆ ಯುವಕ ಬಂದಿದ್ದ.

ನಿನ್ನೆ ರಾತ್ರಿ ಸುನಿತಾಳ ಮನೆಗೆ ಅಮರನಾಥ ಬಂದಿದ್ದು, ಇವರಿಬ್ಬರೂ ಲೈಂಗಿಕ ಕ್ರಿಯೆಯಲ್ಲಿ ತೊಡಗಿದ್ದರು. ಆ ವೇಳೆ ಸುನಿತಾಳ ತಂದೆ ಮತ್ತು ಆಕೆಯ ಅಪ್ರಾಪ್ತ ವಯಸ್ಸಿನ ಮಗ ಹೊರಗಿನಿಂದ ಮನೆಗೆ ಬಂದಿದ್ದಾರೆ. ಅಕ್ರಮ ಸಂಬಂಧವನ್ನು ಕಣ್ಣಾರೆ ಕಂಡ ಅಜ್ಜ ಮತ್ತು ಮೊಮ್ಮಗ ಕೋಪಗೊಂಡಿದ್ದು, ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ಇಬ್ಬರನ್ನೂ ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.

ಇಂದು(ಬುಧವಾರ) ಮುಂಜಾನೆ ಈ ಘಟನೆ ಬೆಳಕಿಗೆ ಬಂದಿದ್ದು, ಅಪ್ರಾಪ್ತ ವಯಸ್ಸಿನ ಮಗ ಹಾಗೂ ಆಕೆಯ ತಂದೆ ರಾಮಗೊಂಡನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಜಯಪುರ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

Comments are closed.