ಕರ್ನಾಟಕ

ರಾಜ್ಯದಲ್ಲಿ ಮುಂದುವರಿದ ಮಳೆ: ಮೈದುಂಬಿ ಹರಿಯುತ್ತಿರುವ ನದಿಗಳು

Pinterest LinkedIn Tumblr


ಬೆಂಗಳೂರು(ಜುಲೈ 18): ಮಲೆನಾಡಿನ ಹಲವು ಭಾಗಗಳಲ್ಲಿ ಇವತ್ತು ಮಳೆಯಾಗಿದೆ. ಚಿಕ್ಕಮಗಳೂರು ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ವರುಣನ ಆರ್ಭಟ ಜೋರಾಗಿದೆ. ಚಿಕ್ಕಮಗಳೂರಿನ ಮೂಡಿಗೆರೆ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ, ಕುದುರೆಮುಖ, ಕರೆಕಟ್ಟೆ ಭಾಗಗಳಲ್ಲಿ ಧಾರಾಕಾರ ಮಳೆಯಾಗುತ್ತಿದೆ. ಶೃಂಗೇರಿ, ಕೊಪ್ಪ, ಎನ್.ಆರ್. ಪುರದಲ್ಲಿ ಸಾಧಾರಣ ಮಳೆಯಾಗುತ್ತಿದೆ. ಕಳಸ ಬಳಿ ಇರುವ ಹೆಬ್ಬಾಳೆ ಸೇತುವೆ ಮತ್ತೊಮ್ಮೆ ಮುಳುಗಡೆಯಾಗುತ್ತಿದೆ.

ಭದ್ರಾ, ತುಂಬಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿವೆ. ತುಂಗಾ, ಭದ್ರತಾ, ಲಿಂಗನಮಕ್ಕಿ, ಕಬಿನಿ ಮೊದಲಾದ ಜಲಾಶಯಗಳಿಗೆ ನೀರಿನ ಹರಿವು ಹೆಚ್ಚಾಗಿದೆ.

ಇನ್ನು, ಉತ್ತರ ಕನ್ನಡ ಜಿಲ್ಲೆಯಲ್ಲೂ ಕಳೆದ ಮೂರು ದಿನಗಳಿಂದ ನಿರಂತರ ಮಳೆಯಾಗುತ್ತಿದೆ. ಸಮುದ್ರದಲ್ಲಿ ನೀರಿನ ಆರ್ಭಟ ಹೆಚ್ಚಾಗಿದೆ. ಮೀನುಗಾರಿಕೆಯನ್ನು ಇಲ್ಲಿ ಸ್ಥಗಿತಗೊಳಿಸಲಾಗುತ್ತಿದೆ. ಇಲ್ಲಿರುವ ಪ್ರಮುಖ ಜಲಾಶಯಗಳು ಭರ್ತಿಯಾಗುತ್ತಿವೆ.

ಮೈಸೂರಿನ ಹೆಚ್.ಡಿ. ಕೋಟೆ ತಾಲೂಕಿನ ಬೀಚನಹಳ್ಳಿ ಗ್ರಾಮದಲ್ಲಿರುವ ಕಬಿನಿ ಜಲಾಶಯ ಭರ್ತಿಯಾಗಲು 12 ಅಡಿ ಅಗತ್ಯ ಇದೆ. 19.52 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇರುವ ಈ ಜಲಾಶಯದಲ್ಲಿ ಇವತ್ತಿನವರೆಗೂ 11.42 ಟಿಎಂಸಿ ನೀರು ಭರ್ತಿಯಾಗಿದೆ. ವಿಜಯಪುರದ ಆಲಮಟ್ಟಿಯಲ್ಲಿರುವ ಲಾಲ್ ಬಹದ್ದೂರ್ ಶಾಸ್ತ್ರಿ ಜಲಾಶಯ ಭರ್ತಿಯಾಗಲು 2 ಅಡಿ ಮಾತ್ರ ಬಾಕಿದೆ. ಶಿವಮೊಗ್ಗದ ಲಿಂಗನಮಕ್ಕಿ, ತುಂಗ ಮತ್ತು ಭದ್ರಾ ಜಲಾಶಯಗಳು ಬಹುತೇಕ ತುಂಬಿ ಹೋಗಿವೆ.

ಜಲಾಶಯಗಳ ಇಂದಿನ ಮಟ್ಟ – ಜುಲೈ 18:

ಮೈಸೂರಿನ ಕಬಿನಿ ಜಲಾಶಯ:ಒಳಹರಿವು 10,786 ಕ್ಯೂಸೆಕ್.
ಹೊರಹರಿವು 1,500 ಕ್ಯೂಸೆಕ್.
ಇಂದಿನ ನೀರಿನ ಮಟ್ಟ 2272.96 ಅಡಿ.
ಜಲಾಶಯದ ಗರಿಷ್ಠ ನೀರಿನ ಮಟ್ಟ 2284 ಅಡಿ.
ಜಲಾಶಯದ ಒಟ್ಟು ನೀರಿನ ಸಂಗ್ರಹ ಸಾಮರ್ಥ್ಯ 19.52 TMC.
ಜಲಾಶಯದಲ್ಲಿ ಇಂದು ಇರುವ ನೀರಿನ ಸಂಗ್ರಹ 11.42 TMC.
ಜಲಾಶಯ ಭರ್ತಿಗೆ 11 ಅಡಿ ಮಾತ್ರ ಬಾಕಿ.

ಶಿವಮೊಗ್ಗದ ತುಂಗಾ ಜಲಾಶಯ:
ಗರಿಷ್ಠ ಮಟ್ಟ- 588.24 ಮೀಟರ್.
ಇಂದಿನ ಮಟ್ಟ- 588.24 ಮೀಟರ್.
ಒಳ ಹರಿವು – 24,173ಕ್ಯೂಸೆಕ್.
ಹೊರ ಹರಿವು -24,173 ಕ್ಯೂಸೆಕ್.

ಶಿವಮೊಗ್ಗದ ಭದ್ರಾ ಜಲಾಶಯ:
ಗರಿಷ್ಠ ಮಟ್ಟ- 186 ಅಡಿ.
ಇಂದಿನ ಮಟ್ಟ- 150.50
ಒಳ ಹರಿವು – 13,217 ಕ್ಯೂಸೆಕ್.
ಹೊರ ಹರಿವು – 173 ಕ್ಯೂಸೆಕ್.

ಶಿವಮೊಗ್ಗದ ಲಿಂಗನಮಕ್ಕಿ ಜಲಾಶಯ:
ಗರಿಷ್ಠ ಮಟ್ಟ- 1819 ಅಡಿ.
ಇಂದಿನ ಮಟ್ಟ- 1769.40
ಒಳ ಹರಿವು -25,660 ಕ್ಯೂಸೆಕ್.
ಹೊರ ಹರಿವು -2587 ಕ್ಯೂಸೆಕ್.

ವಿಜಯಪುರದ- ಆಲಮಟ್ಟಿ ಜಲಾಷಯ:
ಗರಿಷ್ಠ ನೀರು ಸಂಗ್ರಹ ಎತ್ತರ- 519.60 ಮೀ.
ಇಂದಿನ ಮಟ್ಟ- 517.20 ಮೀ
ಗರಿಷ್ಠ ನೀರು ಸಂಗ್ರಹ ಸಾಮರ್ಥ್ಯ- 123.081 ಟಿಎಂಸಿ
ಇಂದಿನ ನೀರು ಸಂಗ್ರಹ- 86.972 ಟಿಎಂಸಿ
ಒಳಹರಿವು- 36180 ಕ್ಯೂಸೆಕ್
ಹೊರ ಹರಿವು- 46130 ಕ್ಯೂಸೆಕ್

Comments are closed.