ಕರ್ನಾಟಕ

ರಾಜ್ಯದಲ್ಲಿ ಕೇವಲ 2 ವಾರದಲ್ಲಿ ಬರೋಬ್ಬರಿ 600 ಮಂದಿಯನ್ನು ಬಲಿಪಡೆದ ಕೊರೋನಾ !

Pinterest LinkedIn Tumblr

ಬೆಂಗಳೂರು: ರಾಜ್ಯದಲ್ಲಿ ತೀವ್ರ ಪ್ರಮಾಣದಲ್ಲಿ ಸ್ಫೋಟಗೊಳ್ಳುತ್ತಿರುವ ಕೊರೋನಾ ವೈರಸ್ ಕೇವಲ 2 ವಾರದಲ್ಲಿ ಬರೋಬ್ಬರಿ 600 ಮಂದಿಯನ್ನು ಮಹಾಮಾರಿ ವೈರಸ್ ಬಲಿಪಡೆದುಕೊಂಡಿದೆ.

ಜುಲೈ.1-14ರವಗೆಗೂ 600 ಮಂದಿ ಕೊರೋನಾ ವೈರಸ್’ಗೆ ಬಲಿಯಾಗಿದ್ದು, ಇದರೊಂದಿಗೆ ರಾಜ್ಯದಲ್ಲಿ ಒಟ್ಟು ಸಾವಿನ್ನಪ್ಪಿದವರ ಸಂಖ್ಯೆ 842ಕ್ಕೆ ಏರಿಕೆಯಾಗಿದೆ. ಪ್ರಸ್ತುತ ರಾಜ್ಯದಲ್ಲಿ ಸಾವಿನ ಶೇಕಡಾವಾರು 1.82ಕ್ಕೆ ತಲುಪಿದೆ.

ಸೋಂಕು ಹಾಗೂ ಸಾವನ್ನಪ್ಪುತ್ತಿರುವ ನಡುವಲ್ಲೂ ಗುಣಮುಖರಾಗುತ್ತಿರುವವರ ಸಂಖ್ಯೆ ಪ್ರತೀನಿತ್ಯ ಏರಿಕೆಯಾಗುತ್ತಿದೆ. ನಿನ್ನೆ ಒಂದೇ ದಿನ ರಾಜ್ಯದಲ್ಲಿ 1,143 ಮಂದಿ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಬಿಡುಗಡೆಗೊಂಡಿದ್ದು, ಇದರಲ್ಲಿ ಬೆಂಗಳೂರು ಒಂದರಲ್ಲೇ 664 ಮಂದಿ ಬಿಡುಗಡೆಯಾಗಿದ್ದಾರೆ. ಇನ್ನು ರಾಜ್ಯದಲ್ಲಿ ನಿನ್ನೆ ಒಂದೇ ದಿನ ಬರೋಬ್ಬರಿ 2,496 ಮಂದಿಯಲ್ಲಿ ಹೊಸದಾಗಿ ಸೋಂಕು ಪತ್ತೆಯಾಗಿದ್ದು, ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 44,077ಕ್ಕೆ ತಲುಪಿದೆ.

ಬೆಂಗಳೂರು ನಗರದಲ್ಲಿ ನಿನ್ನೆ 1,267 ಮಂದಿಯಲ್ಲಿ ಸೋಂಕು ಪತ್ತೆಯಾಗಿದ್ದು, ಸೋಂಕಿತರ ಜೊತೆಗೆ ಸಂಪರ್ಕದಲ್ಲಿದ್ದವರನ್ನು ಇದೀಗ ಪತ್ತೆ ಹಚ್ಚಲಾಗುತ್ತಿದೆ. ಮಂಗಳವಾರ 87 ಮಂದಿ ಬಲಿಯಾಗಿದ್ದರೆ, ಇದರಲ್ಲಿ ಬೆಂಗಳೂರು ನಗರದ 56 ಮಂದಿ ಸೇರಿದ್ದಾರೆ. ಇನ್ನು ಜಿಲ್ಲೆಗಳಲ್ಲಿ ಸಾವಿನ ಶೇಕಡಾವಾರು 1.63ರಷ್ಟಿದೆ.

ನಿನ್ನೆ ಮೈಸೂರು ನಗರದಲ್ಲಿ 125 ಪ್ರಕರಣಗಳು ಪತ್ತೆಯಾಗಿದ್ದರೆ, ಕಲಬುರಗಿಯಲ್ಲಿ 121, ಧಾರವಾಡ 100, ಬಳ್ಳಾರಿ 99, ಕೊಪ್ಪಳ 98, ದಕ್ಷಿಣ ಕನ್ನಡ 91, ಬಾಗಲಕೋಟೆ 78, ಉಡುಪಿ 73, ಉತ್ತರ ಕನ್ನಡ ಮತ್ತು ಬೆಳಗಾವಿಯಲ್ಲಿ 64 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ.

Comments are closed.