ಕರ್ನಾಟಕ

ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಮನೆಯವರಿಂದ ನಾಲ್ವರ ಹತ್ಯೆ

Pinterest LinkedIn Tumblr


ರಾಯಚೂರು: ಪ್ರೀತಿಸಿ ಮದುವೆಯಾದ ಕಾರಣಕ್ಕೆ ಯುವತಿಯ ಸಂಬಂಧಿಕರು ಯುವಕನ ಕಡೆಯ ನಾಲ್ವರನ್ನು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ರಾಯಚೂರಿನ ಸಿಂಧನೂರಿನ ಸುಕಾಲಪೇಟೆಯಲ್ಲಿ ಶನಿವಾರ ನಡೆದಿದ್ದು, ಘಟನೆಗೆ ಇಡೀ ಜಿಲ್ಲೆಯೇ ಬೆಚ್ಚಿ ಬಿದ್ದಿದೆ.

ಪ್ರೀತಿಸಿ ಮದುವೆಯಾಗಿದ್ದಕ್ಕೆ ಯುವತಿ ಸಂಬಂಧಿಕರು ಉದ್ರಿಕ್ತಗೊಂಡು ಯುವಕನ ಕಡೆಯ ಕುಟುಂಬದ ನಾಲ್ವರನ್ನು ಕೊಲೆ ಮಾಡಿದ್ದಾರೆ. ನಾಗರಾಜ, ಹನುಮೇಶ, ಸುಶೀಲಮ್ಮ ಹಾಗೂ ಶ್ರೀದೇವಿ ಹತ್ಯೆಗೀಡಾದ ದುರ್ದೈವಿಗಳು. ಘಟನೆಯಲ್ಲಿ ಇನ್ನಿಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಯುವತಿಯ ಕಡೆಯರಾದ ಅಂಬಣ್ಣ ಹಾಗೂ ಪಕ್ಕೀರಪ್ಪ ಎನ್ನುವವರು ಈ ಭೀಕರ ಕೃತ್ಯ ಎಸಗಿದ ಆರೋಪಿಗಳಾಗಿದ್ದಾರೆ.

ಕಳೆದ ಐದು ತಿಂಗಳ ಹಿಂದೆ ಒಂದೇ ಕೋಮಿನ ಯುವಕ- ಯುವತಿ ಪ್ರೀತಿಸಿ ಮದುವೆಯಾಗಿದ್ದರು. ಮದುವೆಗೆ ಯುವತಿಯ ಮನೆಯವರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ವಿರೋಧದ ನಡುವೆಯೂ ಇವರಿಬ್ಬರು ಮದುವೆಯಾಗಿದ್ದರು. ಇದೇ ಹಿನ್ನೆಲೆಯಿಂದ ಇಂದು ಬೆಳಗ್ಗೆ ಎರಡೂ ಕುಟುಂಬಗಳ ಮಧ್ಯೆ ಗಲಾಟೆ ಆಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿ ಯುವತಿಯ ಮನೆಯವರಾದ ಅಂಬಣ್ಣ ಹಾಗೂ ಪಕ್ಕೀರಪ್ಪ ಎಂಬುವವರು ಯುವಕನ ಕುಟುಂಬದವರ ಮೇಲೆ ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ. ಇದರಿಂದ ನಾಲ್ವರು ಮೃತಪಟ್ಟು, ಮತ್ತಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಜೀವಭಯದಿಂದ ಯುವಕ ಮತ್ತು ಯುವತಿ ಪೋಲೀಸ್ ಠಾಣೆಗೆ ಹೋಗಿದ್ದರಿಂದ ಅವರಿಬ್ಬರು ಸುರಕ್ಷಿತವಾಗಿದ್ದಾರೆ.

Comments are closed.