ಬೆಂಗಳೂರು(ಜುಲೈ 11): ಕೊವಿಡ್ ನಿಯಂತ್ರಣಕ್ಕೆ ಭಾನುವಾರ ಲಾಕ್ ಡೌನ್ ಮಾಡಿರುವಂತೆ ಶನಿವಾರವೂ ಮಾಡಿ ಎಂದು ಶಾಸಕರು, ಕಾರ್ಪೊರೇಟರ್ಗಳು ಮನವಿ ಮಾಡಿದ್ಧಾರೆ. ಬೆಂಗಳೂರಿನ ಎಂಟು ವಲಯ ಗಳಲ್ಲಿ ಸಭೆ ನಡೆಸುತ್ತಿರುವ ಸಚಿವರುಗಳಿಗೆ ಅಲ್ಲಿನ ಶಾಸಕರು ಮತ್ತು ಕಾರ್ಪೊರೇಟರ್ಗಳು ಈ ರೀತಿ ಕೋರಿಕೊಂಡಿದ್ದಾರೆ. ಭಾನುವಾರದ ಲಾಕ್ಡೌನ್ನಿಂದ ಕೊರೋನಾ ಕಡಿಮೆ ಆಗಿದೆ. ಅದರಂತೆ ಶನಿವಾರ ಕೂಡ ಲಾಕ್ ಡೌನ್ ಮಾಡಿದ್ರೆ ಮತ್ತಷ್ಟು ಕೊರೋನಾ ಹರಡುವಿಕೆಯನ್ನು ಕಡಿಮೆ ಮಾಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಆದರೆ ಸಭೆಯಲ್ಲಿ ಲಾಕ್ ಡೌನ್ ಒಂದೇ ಪರಿಹಾರ ಅಲ್ಲ. ಬೇರೆ ಏನಾದರೂ ಪರ್ಯಾಯ ಮಾರ್ಗ ಅನುಸರಿಸಿ ಕೊವೀಡ್ ನಿಯಂತ್ರಣ ಮಾಡಬೇಕು ಎಂಬ ಅಭಿಪ್ರಾಯವೂ ವ್ಯಕ್ತವಾಯಿತು.
ಪ್ರತಿ ದಿನ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯದ ಬಗ್ಗೆ ಸಿಎಂ ಯಡಿಯೂರಪ್ಪಗೆ ಸಚಿವರು ವರದಿ ನೀಡುತ್ತಿದ್ದಾರೆ. ಈಗಾಗಲೆ ಪ್ರಾರಂಭಿಕ ಹಂತದ ವರದಿಯಲ್ಲಿ ಹಲವು ಸಚಿವರುಗಳು ಶನಿವಾರ ಲಾಕ್ ಡೌನ್ ಬಗ್ಗೆ ಸಿಎಂ ಯಡಿಯೂರಪ್ಪಗೆ ವರದಿ ನೀಡಿದ್ದಾರೆ.
ಸಭೆಯಲ್ಲಿ ಈ ರೀತಿಯ ಅಭಿಪ್ರಾಯ ವ್ಯಕ್ತವಾಗಿದೆ. ಈ ಬಗ್ಗೆ ಪರಿಶೀಲಿಸಿ ನಿರ್ಧಾರ ಕೈಗೊಳ್ಳಿ ಎಂದು ಸಚಿವರು ಸಿಎಂ ಗಮನಕ್ಕೆ ತಂದಿದ್ದಾರೆ. ಆದರೆ ಸಿಎಂ ಯಡಿಯೂರಪ್ಪ ಮಾತ್ರ ಇದುವರೆಗೂ ಶನಿವಾರದ ಲಾಕ್ ಡೌನ್ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ. ಯಾಕೆಂದರೆ ಆರ್ಥಿಕ ಸುಧಾರಣೆ ಹಾಗು ಜನರ ಜೀವನಕ್ಕೆ ಸಮಸ್ಯೆ ಆಗುತ್ತೆ ಎಂದು ಸಿಎಂ ಯಡಿಯೂರಪ್ಪ ಶನಿವಾರದ ಲಾಕ್ ಡೌನ್ ಬಗ್ಗೆ ಯಾವುದೇ ತೀರ್ಮಾನ ಮಾಡಿಲ್ಲ.
ಈಗ ಸಚಿವರುಗಳು ಕೊಟ್ಟಿರುವ ವರದಿ ಮೇಲೆ ಸಿಎಂ ಯಡಿಯೂರಪ್ಪ ಶನಿವಾರದ ಲಾಕ್ ಡೌನ್ ಬಗ್ಗೆ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ. ಸದ್ಯ ವಲಯವಾರು ಸಚಿವ ವಿ ಸೋಮಣ್ಣ, ಡಿಸಿಎಂ ಅಶ್ವಥ್ ನಾರಾಯಣ, ಸಚಿವ ಗೋಪಾಲಯ್ಯ, ಸಚಿವ ಆರ್ ಅಶೋಕ್ ಸೇರಿದಂತೆ ಸಚಿವರು ಮೀಟಿಂಗ್ ಮಾಡಿ ಒಂದು ಸುತ್ತಿನ ಸಭೆಯ ವರದಿಯನ್ನು ಸಿಎಂಗೆ ಸಲ್ಲಿಸಿದ್ದಾರೆ. ಸಿಎಂ ಯಡಿಯೂರಪ್ಪ ಈ ಬಗ್ಗೆ ಚರ್ಚಿಸಿ ಶನಿವಾರ ಲಾಕ್ ಡೌನ್ ಮಾಡುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.
ಕಳೆದ ವಾರದಿಂದ ರಾಜ್ಯದಲ್ಲಿ ಭಾನುವಾರದ ಲಾಕ್ಡೌನ್ ನಿಯಮ ಜಾರಿಗೊಳಿಸಲಾಗಿದೆ. ಭಾನುವಾರ ಮತ್ತು ಶನಿವಾರ ಎರಡೂ ದಿನಗಳನ್ನ ಲಾಕ್ಡೌನ್ ಮಾಡಬೇಕೆಂಬ ಕೂಗು ಕಳೆದ ವಾರವೇ ಕೇಳಿಬಂದಿತ್ತು. ಆದರೆ, ಮುಖ್ಯಮಂತ್ರಿಗಳು ಭಾನುವಾರದ ಲಾಕ್ಡೌನ್ಗೆ ಮಾತ್ರ ನಿರ್ಧರಿಸಿದ್ದಾರೆ. ಈಗ ಮತ್ತೆ ಆ ಕೂಗು ಬಲವಾಗಿ ಕೇಳಿಬರುತ್ತಿದೆ.
Comments are closed.