
ಕೊಡಗು(ಜು.08): ಕೊಡಗು ಜಿಲ್ಲೆಯಲ್ಲಿ ತಾಲೂಕು ವೈದ್ಯಾಧಿಕಾರಿಗೂ ಕೊರೋನಾ ದಾಳಿ ಮಾಡಿದೆ. ಅಷ್ಟೇ ಅಲ್ಲದೇ ತಾಲೂಕು ವೈದ್ಯಾಧಿಕಾರಿಯ ವಾಹನ ಚಾಲಕನಿಗೂ ಕೊರೋನಾ ಮಹಾಮಾರಿ ಸುತ್ತಿಕೊಂಡಿದೆ. ಮೊನ್ನೆಯಷ್ಟೇ ತಾಲ್ಲೂಕು ವೈದ್ಯಾಧಿಕಾರಿ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಕಚೇರಿಗೆ ಬಂದು ಡಿಎಚ್ಓ ಜೊತೆಗೆ ಚರ್ಚಿಸಿ ಒಂದು ತಾಲ್ಲೂಕಿನ ಅಂಕಿ ಅಂಶಗಳನ್ನು ಕೊಟ್ಟು ಹೋಗಿದ್ದಾರೆ.
ಇತ್ತೀಚೆಗೆ ಆರೋಗ್ಯ ಇಲಾಖೆಯ ಹಲವು ಸಿಬ್ಬಂದಿಗಳಿಗೆ ಕೊರೋನಾ ಅಟ್ಯಾಕ್ ಮಾಡಿದ್ದರಿಂದ ಇಲಾಖೆಯ ಹಲವರನ್ನು ಕೊವಿಡ್ ತಪಾಸಣೆಗೆ ಒಳಪಡಿಸಲಾಗಿತ್ತು. ಇದೀಗ ಅವರೆಲ್ಲರ ವರದಿಯಲ್ಲಿ ತಾಲೂಕು ವೈದ್ಯಾಧಿಕಾರಿ ಮತ್ತು ಅವರ ಚಾಲಕನಿಗೂ ಪಾಸಿಟಿವ್ ಬಂದಿದೆ. ಈ ವಿಚಾರ ಗೊತ್ತಾಗುತ್ತಿದ್ದಂತೆ ಡಿಎಚ್ಓ ಅವರಿಗೂ ಆತಂಕ ಶುರುವಾಗಿದೆ.
ಸೋಂಕಿತ ಆರೋಗ್ಯ ಅಧಿಕಾರಿಗಳು ಡಿಎಚ್ಓ ಕಚೇರಿಯಲೆಲ್ಲಾ ಓಡಾಡಿರುವುದರಿಂದ ಎಲ್ಲಾ ಸಿಬ್ಬಂದಿಗಳನ್ನು ಮನೆ ಕಳುಹಿಸಲಾಗಿದೆ. ಬಳಿಕ ಡಿಎಚ್ಓ ಕಚೇರಿಗೆ ಸ್ಯಾನಿಟೈಸರ್ ಮಾಡಲಾಗಿದೆ. ಡಿಎಚ್ಓ ಕಚೇರಿಯಲ್ಲಿ ಬರೋಬ್ಬರಿ 100 ಸಿಬ್ಬಂದಿ ಕೆಲಸ ಮಾಡುತ್ತಿದ್ದು, ಅವರೆಲ್ಲರಿಗೂ ಎದೆಯಲ್ಲಿ ಢವಢವ ಆರಂಭವಾಗಿದೆ.
ಇನ್ನು, ಡಿಎಚ್ಓ ಅವರು ಸೋಂಕಿತ ಅಧಿಕಾರಿಯ ಸಂಪರ್ಕದಲ್ಲಿ ಇದ್ದಿದ್ದರಿಂದ ಡಿಎಚ್ಓ ಅವರಿಗೂ ಆತಂಕ ಶುರುವಾಗಿದೆ. ಸದ್ಯ ಡಿಎಚ್ಓ ಸ್ವತಃ ಕ್ವಾರಂಟೈನ್ಗೆ ಒಳಗಾಗಿದ್ದಾರೆ.
Comments are closed.