ಬೆಂಗಳೂರು(ಜು.08): ಕೊರೋನಾ ಆರು ತಿಂಗಳ ಪ್ಯಾಂಡಮಿಕ್. ಇದರಲ್ಲಿ ನಾಲ್ಕು ತಿಂಗಳು ಕಳೆದಾಯ್ತು. ಇನ್ನೆರಡು ತಿಂಗಳು ಹಾಗೋ ಹೀಗೋ ತಳ್ಳಿಬಿಟ್ರೆ ಗೆದ್ದೆವಪ್ಪಾ ಎಂದುಕೊಳ್ತಿದೀರಾ? ಕನಿಷ್ಟ ಈ ವರ್ಷದ ಅಂತ್ಯದವರೆಗೂ ಕೊರೋನಾ ಕಮ್ಮಿಯಾಗಲ್ಲ ಎನ್ನುತ್ತಿದ್ದಾರೆ ತಜ್ಞರು. ಹಾಗಾಗಿ ದೀರ್ಘಕಾಲದ ಹೋರಾಟಕ್ಕೆ ಎಲ್ಲರೂ ಸಜ್ಜಾಗಬೇಕಿದೆ.
ಕೋವಿಡ್-19 ಸೋಂಕಿನ ರಗಳೆ ಸದ್ಯಕ್ಕೆ ಮುಗಿಯುವುದಿಲ್ಲ ಎನ್ನುವ ಸತ್ಯವನ್ನು ತಜ್ಞರು ಬಿಚ್ಚಿಟ್ಟಿದ್ದಾರೆ. ಆಗಸ್ಟ್ ತಿಂಗಳ ವೇಳೆಗೆ ಸೋಂಕು ಇಳಿಯುವ ಆಶಯ ಜನರಲ್ಲಿತ್ತು. ಆದರೆ, ಸದ್ಯದ ಪರಿಸ್ಥಿತಿ ನೋಡಿದರೆ ಜುಲೈ ಮತ್ತು ಆಗಸ್ಟ್ ತಿಂಗಳಲ್ಲೇ ಅತೀ ಹೆಚ್ಚಿನ ಪ್ರಕರಣಗಳು ಕಂಡುಬರುವ ಸಾಧ್ಯತೆ ಇದೆಯಂತೆ. ಅಂದರೆ ಆಗಸ್ಟ್ ಕೊನೆಯ ವಾರದತನಕ ಕೊರೋನಾ ಹಾವಳಿ ಮುಂದುವರೆಯುತ್ತದೆ. ಸೋಂಕಿನ ಆರ್ಭಟ ಕಡಿಮೆಯಾಗೋದು ಆಗಸ್ಟ್ ಮುಗಿದ ಮೇಲಷ್ಟೇ.
ಅಲ್ಲಿವರೆಗೂ ಸೋಂಕಿನಿಂದ ಬಳಲುವವರ ಸಂಖ್ಯೆ ಹೆಚ್ಚುತ್ತಲೇ ಇರುತ್ತದೆ. ಇದನ್ನು ಅನುಭವಿವುದನ್ನು ಬಿಟ್ಟು ಬೇರೆ ಏನೂ ದಾರಿಯೇ ಇಲ್ಲ ಎನ್ನುತ್ತಿದ್ದಾರೆ ತಜ್ಞರು. ಸೋಂಕಿನ ತೀವ್ರತೆ ಏನಿದ್ದರೂ ಆಗಸ್ಟ್ ತಿಂಗಳು ಮುಗಿದ ಮೇಲಷ್ಟೇ ಕಡಿಮೆಯಾಗಬಹುದು ಎನ್ನಲಾಗ್ತಿದೆ. ಹಾಗಂತ ಆಗಸ್ಟ್ ಮುಗಿದ ಮೇಲೆ ಫ್ರೀ ಆಗ್ತೀವಾ ಎಂದುಕೊಂಡರೆ ಅದು ಕೂಡಾ ಇಲ್ಲ.
ಆಗಸ್ಟ್ ನಂತರ ಮೂರು ತಿಂಗಳು ಸ್ವಲ್ಪ ಕಡಿಮೆಯಾಗಿ ನಂತರ ಡಿಸೆಂಬರ್ನಲ್ಲಿ ವಿಪರೀತ ಹೆಚ್ಚಲಿದ್ಯಂತೆ ಕೊರೋನಾ ಕಾವು. ಆಗ ಚಳಿಗಾಲವೂ ಇರೋದರಿಂದ ಸೋಂಕು ಖಂಡಿತಾ ಹೆಚ್ಚಾಗುತ್ತದೆ ಎನ್ನುತ್ತಾರೆ ತಜ್ಞರು.
ಚೀನಾದಲ್ಲಿ ಕೋವಿಡ್ ಪತ್ತೆಯಾಗಿ ಡಿಸೆಂಬರ್ಗೆ ಒಂದು ವರ್ಷವಾಗುತ್ತದೆ. ಇಡೀ ಪ್ರಪಂಚ ಸುತ್ತಾಡಿಕೊಂಡು ಕೊರೋನಾ ಮತ್ತೆ ವಿಜೃಂಭಿಸುತ್ತದೆ. ಹಾಗಾಗಿ ಭಾರತ 2020 ಅಂತ್ಯದ ವೇಳೆ ಎರಡನೇ ಹಂತದ ಯುದ್ಧಕ್ಕೆ ಸಜ್ಜಾಗಬೇಕಿದೆ.
Comments are closed.