ಕರ್ನಾಟಕ

ಆನ್ ಲೈನ್ ಶಿಕ್ಷಣ ನಿಷೇಧಿಸಿದ ಸರ್ಕಾರದ ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್

Pinterest LinkedIn Tumblr


ಬೆಂಗಳೂರು: ಎಲ್ ಕೆ ಜಿಯಿಂದ 10ನೇ ತರಗತಿ ವರೆಗೆ ಆನ್ ಲೈನ್ ಶಿಕ್ಷಣವನ್ನು ನಿಷೇಧಿಸಿ ಹೊರಡಿಸಿದ ರಾಜ್ಯ ಸರಕಾರದ ಆದೇಶಕ್ಕೆ ಹೈಕೋರ್ಟ್ ಮಧ್ಯಂತರ ತಡೆ ನೀಡಿದೆ.

ಆನ್ ಲೈನ್ ಶಿಕ್ಷಣ ಕೋರಿ ಪಿಐಎಲ್ ಸಲ್ಲಿಸಿದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್‌ ನ ದ್ವಿ ಸದಸ್ಯ ಪೀಠ ಆನ್ ಲೈನ್ ಶಿಕ್ಷಣ ನಿಷೇಧಿಸುವ ಕುರಿತು ಸರಕಾರ ಜೂನ್ 15 ಹಾಗೂ ಜೂನ್ 27 ರಂದು ಎರಡು ಆದೇಶ ಹೊರಡಿಸಿದ್ದು ಈ ಎರಡೂ ಆದೇಶವನ್ನು ಹೈಕೋರ್ಟ್ ರದ್ದು ಮಾಡಿದ್ದು, ಈ ಕುರಿತು ಹೈಕೋರ್ಟ್ ವಿಭಾಗೀಯ ಪೀಠ ಕೆಲವೊಂದು ಅಭಿಪ್ರಾಯಗಳನ್ನು ಹಂಚಿದ್ದು ಆನ್ ಲೈನ್ ಶಿಕ್ಷಣ ವಿದ್ಯಾರ್ಥಿಗಳ ಮೂಲಭೂತ ಹಕ್ಕು ಸರಕಾರ ವಿದ್ಯಾರ್ಥಿಗಳ ಮೂಲಭೂತ ಹಕ್ಕನ್ನು ನಿರ್ಬಂದಿಸುವಂತಿಲ್ಲ, ಕೋವಿಡ್ 19 ಹಿನ್ನೆಲೆಯಲ್ಲಿ ಮಕ್ಕಳಿಗೆ ಆನ್ ಲೈನ್ ಶಿಕ್ಷಣದ ಅವಶ್ಯಕತೆ ಇದೆ ಎಂದು ಹೇಳಿದೆ.

ಸದ್ಯದ ಪರಿಸ್ಥಿತಿಯಲ್ಲಿ ಆನ್‌ಲೈನ್ ಶಿಕ್ಷಣ ಮಾತ್ರ ನೀಡಲು ಸಾಧ್ಯವಾಗತ್ತದೆ ಆನ್‌ಲೈನ್‌ ವ್ಯವಸ್ಥೆಗೆ ಸಂಬಂಧಪಟ್ಟಂತೆ ಸರ್ಕಾರದ ನಿಲುವನ್ನು ಒಪ್ಪಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಸರ್ಕಾರ ಸರಿಯಾದ ವ್ಯವಸ್ಥೆಯನ್ನು ಕಲ್ಪಿಸಬೇಕು ಅಂತ ಹೇಳಿತು.

Comments are closed.