ಕರ್ನಾಟಕ

ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳನ್ನು ವಾಪಸ್ ಕರೆಸಿಕೊಂಡ ಇನ್ಫೋಸಿಸ್

Pinterest LinkedIn Tumblr

ಬೆಂಗಳೂರು: ಅಮೆರಿಕಾದಲ್ಲಿ ಸಿಲುಕಿದ್ದ 200 ಉದ್ಯೋಗಿಗಳನ್ನು ಇನ್ಫೋಸಿಸ್ ವಾಪಸ್ ಕರೆಸಿಕೊಂಡಿದೆ.

ಲಾಕ್ ಡೌನ್, ಕೋವಿಡ್-19 ಸಾಂಕ್ರಾಮಿಕದಿಂದ ಅಮೆರಿಕಾದಲ್ಲಿ ಸಿಲುಕಿಕೊಂಡಿದ್ದ ಭಾರತೀಯರು ಹಾಗೂ ಅವರ ಕುಟುಂಬಗಳನ್ನು ಸಂಸ್ಥೆ ವಾಪಸ್ ಕರೆಸಿಕೊಂಡಿದೆ.

ಸ್ಯಾನ್ ಫ್ರಾನ್ಸಿಸ್ಕೋದಿಂದ ವಿಶೇಷ ಚಾರ್ಟೆಡ್ ವಿಮಾನದ ಮೂಲಕ ಬೆಂಗಳೂರಿಗೆ ಕರೆತರಲಾಗೆದೆ ಎಂದು ಇನ್ಫೋಸಿಸ್ ಉಪಾಧ್ಯಕ್ಷ ಸಮೀರ್ ಗೋಸವಿ ಹೇಳಿದ್ದಾರೆ. ಅಂತಾರಾಷ್ಟ್ರೀಯ ವಿಮಾನಗಳು ಸ್ಥಗಿತಗೊಂಡಿರುವ ಹಿನ್ನೆಲೆಯಲ್ಲಿ ಅಮೆರಿಕದಿಂದ ಭಾರತೀಯರನ್ನು ವಾಪಸ್ ಕರೆಸಿಕೊಳ್ಳಲಾಗಿದೆ.

ಕ್ಲೈಂಟ್ ಸೈಟ್ ಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದವರು ಹಾಗೂ ಸಭೆ-ಸಮಾರಂಭಗಳಿಗಾಗಿ ಅಮೆರಿಕಾಕ್ಕೆ ತೆರಳಿದ್ದವು ಈ ಪಟ್ಟಿಯಲ್ಲಿದ್ದಾರೆ.

Comments are closed.